ಮದ್ಯಪ್ರಿಯರಿಗೆ ಗುಡ್ ನ್ಯೂಸ್; ಮನೆ ಬಾಗಿಲಿಗೆ ಎಣ್ಣೆ ಮುಕ್ತ..ಮುಕ್ತ!

By Suvarna NewsFirst Published Jun 22, 2020, 7:57 PM IST
Highlights

ಅಮೆಜಾನ್ ನಿಂದ ಮನೆ ಬಾಗಿಲಿಗೆ ಮದ್ಯ ಸರಬರಾಜು/ ಪಶ್ಚಿಮ ಬಂಗಾಳದಲ್ಲಿ ಸರ್ಕಾರದ ಒಪ್ಪಿಗೆ ಪಡೆದಕೊಂಡ ಅಮೆಜಾನ್/ ಜಾರ್ಖಂಡ್ ನಲ್ಲಿ ಸ್ವಿಗ್ಗಿ ಮನೆ ಬಾಗಿಲಿಗೆ ಮದ್ಯಕ್ಕೆ ಒಪ್ಪಿಗೆ ಪಡೆದುಕೊಂಡಿತ್ತು

ನವದೆಹಲಿ(ಜೂ. 22) ಲಾಕ್ ಡೌನ್ ಕಾರಣಕ್ಕೆ ಮದ್ಯ ಸಿಗದೆ ಮದ್ಯ ಪ್ರಿಯರು ಪರದಾಡಿ ಹೋಗಿದ್ದರು. ಈಗ ಮತ್ತೊಂದು ಶುಭ ಸುದ್ದಿ ಮದ್ಯಪ್ರಿಯರಿಗೆ ಇದೆ. ಅಮೆಜಾನ್  ಇದೀಗ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಲಿದೆ.

ಆನ್‌ಲೈನ್‌ನಲ್ಲಿ ಗ್ರಾಹಕರು ಬುಕ್ ಮಾಡಿದ ಮದ್ಯವನ್ನು ಮನೆಬಾಗಿಲಿಗೆ ಅಮೆಜಾನ್ ತಲುಪಿಸಲಿದ್ದು ಪಶ್ಚಿಮ ಬಂಗಾಳದಲ್ಲಿ ಅನುಮತಿಯನ್ನು ಪಡೆದುಕೊಂಡಿದೆ.

ಅಮೆಜಾನ್ ಮಾತ್ರವಲ್ಲದೆ, ಚೀನಾ ಮೂಲದ ಅಲಿಬಾಬಾ ಹೂಡಿಕೆ ಹೊಂದಿರುವ ಬಿಗ್‌ಬಾಸ್ಕೆಟ್  ಸಹ ಪಶ್ಚಿಮ ಬಂಗಾಳದಲ್ಲಿ ಮದ್ಯ ಸರಬರಾಜು ಮಾಡಲು ಅನುಮತಿ ಪಡೆದುಕೊಂಡಿದೆ. 

ರಮ್ಯ ಕೃಷ್ಣ ಕಾರಿನಲ್ಲಿ ಪತ್ತೆಯಾದ ಎಣ್ಣೆ ಬಾಟಲಿಗಳು ಹೇಳಿದ ಕತೆ

ಇತ್ತೀಚೆಗೆ ಸ್ವಿಗ್ಗಿ ಕೂಡ ಜಾರ್ಖಂಡ್‌ನಲ್ಲಿ ಮನೆಮನೆಗೇ ಮದ್ಯ ತಲುಪಿಸಲು ಅನುಮತಿ ಪಡೆದುಕೊಂಡಿತ್ತು. ಯಾವ ದಿನಾಂಕದಿಂದ ಮದ್ಯ ಸರಬರಾಜು ಆರಂಭವಾಗಲಿದೆ ಎಂಬ ಮಾಹಿತಿಯನ್ನು ಅಮೆಜಾನ್ ನೀಡಿದಲ್ಲ.

ಕರ್ನಾಟಕದಲ್ಲಿಯೂ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಬೇಕು ಎಂಬ ಕೂಗುಗಳು ಕೇಳಿ ಬಂದಿದ್ದವು. ಸುಮಾರು 42  ದಿನ್ಗಳ ನಂತರ ಕರ್ನಾಟಕದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

click me!