
ಮುಂಬೈ(ಜೂ.22): ಚೀನಾ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಪ್ರತಿಯೊಬ್ಬ ಭಾರತೀಯ ಚೀನಾಗೆ ಬುದ್ದಿಕಲಿಸಲು ಮುಂದಾಗಿದ್ದಾನೆ. ಸೆಲೆಬ್ರೆಟಿಗಳು ಕೂಡ ಚೀನಾ ವಸ್ತುಗಳನ್ನು ಬಹಿಷ್ಕರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮಹಾರಾಷ್ಟ್ರ ಸರ್ಕಾರ ಕೂಡ ಚೀನಾ ಜೊತೆಗಿನ ಪ್ರಮುಖ 3 ಒಪ್ಪಂದಗಳಿಗೆ ತಾತ್ಕಾಲಿಕ ಬ್ರೇಕ್ ಹಾಕಿದೆ.
ಗಡಿ ಸಂಘರ್ಷ: ಪರೋಕ್ಷವಾಗಿ ಚೀನಾಗೆ ಸಪೋರ್ಟ್ ಮಾಡ್ತಿದೆಯಾ ಅಮೆರಿಕಾ?...
ಮಹಾರಾಷ್ಟ್ರದಲ್ಲಿ ಬಂಡವಾಳ ಹೂಡಿಕೆ ಮಾಡಿ ಉದ್ಯಮ ಆರಂಭಿಸಲು ಮುಂದಾಗಿದ್ದ ಚೀನಾ ಕಂಪನಿಗಳು ಜೂನ್ ಆರಂಭದಲ್ಲಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಒಟ್ಟು 5,000 ಕೋಟಿ ರೂಪಾಯಿ ಒಪ್ಪಂದ ಇದೀಗ ಸ್ಥಗಿತಗೊಂಡಿದೆ. ಚೀನಾದ ಗ್ರೇಟ್ ವಾಲ್ ಮೋಟಾರ್ಸ್ ಮಹಾರಾಷ್ಟ್ರದಲ್ಲಿ ಘಟಕ ಆರಂಭಿಸಲು 3,770 ಕೋಟಿ, ಫೊಟೋನ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿ 1,000 ಕೋಟಿ ಹಾಗೂ ಹೆಂಗ್ಲಿ ಎಂಜಿನಿಯರಿಂಗ್ 250 ಕೋಟಿ ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಂಡಿತ್ತು.
ಶೀಘ್ರವೇ S-400 ಮಿಸೈಲ್ ಪೂರೈಸಲು ರಷ್ಯಾ ಒತ್ತಾಯಿಸಿದ ರಾಜನಾಥ್ ಸಿಂಗ್!...
ಇದೀಗ ಈ 3 ಒಪ್ಪಂದಗಳನ್ನು ಮಹಾರಾಷ್ಟ್ರ ಸರ್ಕಾರ ಸ್ಥಗಿತಗೊಳಿಸಿದೆ. ಗಡಿಯಲ್ಲಿ ಚೀನಾ ಶಾಂತಿಯನ್ನು ಮತ್ತೆ ಸ್ಥಾಪಿಸಲು ಮುಂದಾದರೆ ಮಾತ್ರ ಒಪ್ಪಂದ ಕುರಿತು ಪರಾಮರ್ಶಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಇತ್ತ ಹರಿಯಾಣದಲ್ಲೂ ಚೀನಾದ 2 ಪವರ್ ಪ್ರಾಜೆಕ್ಟ್ ಒಪ್ಪಂದಗಳನ್ನು ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ರದ್ದು ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ