ನೀವು ಆನ್ಲೈನ್‌ ಆರ್ಡರ್ ಮಾಡ್ತೀರಾ: ರೈಲಿನಲ್ಲಿ ಬಂದ ಪಾರ್ಸೆಲ್ ಹೆಂಗೆ ಬಿಸಾಕ್ತಾರೆ ನೋಡಿ

By Anusha Kb  |  First Published Aug 31, 2022, 1:13 PM IST

ನೀವು ಆನ್‌ಲೈನ್‌ ಶಾಪಿಂಗ್‌ ಪ್ರಿಯರ? ಬಟ್ಟೆ ಲ್ಯಾಪ್‌ಟಾಪ್, ಟಿವಿ, ಮೊಬೈಲ್ ಮುಂತಾದ ಇಲೆಕ್ಟ್ರಾನಿಕ್‌ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುತ್ತೀರಾ ಹಾಗಿದ್ರೆ ನೀವು ಈ ವಿಡಿಯೋವನ್ನು ನೋಡಲೇಬೇಕು.


ನೀವು ಆನ್‌ಲೈನ್‌ ಶಾಪಿಂಗ್‌ ಪ್ರಿಯರ? ಬಟ್ಟೆ ಲ್ಯಾಪ್‌ಟಾಪ್, ಟಿವಿ, ಮೊಬೈಲ್ ಮುಂತಾದ ಇಲೆಕ್ಟ್ರಾನಿಕ್‌ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುತ್ತೀರಾ ಹಾಗಿದ್ರೆ ನೀವು ಈ ವಿಡಿಯೋವನ್ನು ನೋಡಲೇಬೇಕು. ಇದು ರೈಲಿನಲ್ಲಿ ಬಂದ ಆನ್‌ಲೈನ್ ಆರ್ಡರ್‌ಗಳಾಗಿದ್ದು, ಇದನ್ನು ಮತ್ತೊಂದೆಡೆಗೆ ಸಾಗಿಸಲು ರೈಲಿನಿಂದ ಆನ್‌ಲೋಡ್ ಮಾಡುತ್ತಿರುವ ದೃಶ್ಯವಾಗಿದೆ. ಈ ಆನ್‌ಲೋಡಿಂಗ್ ಹೇಗಿದೆ ಎಂದರೆ ಅದು ಡ್ಯಾಮೇಜ್ ಆಗಬಹುದು ಎಂಬ ಯೋಚನೆಯೂ ಇಲ್ಲದೇ ತಮಗಿಷ್ಟ ಬಂದಂತೆ ವಸ್ತುಗಳನ್ನು ರೈಲಿನಿಂದ ತೆಗೆದು ಫ್ಲಾಟ್‌ಪಾರ್ಮ್‌ನತ್ತ ಕೆಲಸಗಾರರು ಎಸೆಯುತ್ತಿದ್ದು, ಇದನ್ನು ಎಲ್ಲೇ ಇದ್ದ ಸ್ಥಳೀಯರು ಯಾರೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಅಲ್ಲದೇ ಆನ್‌ಲೈನ್ ಶಾಪಿಂಗ್ ಪ್ರಿಯರು ಈ ದೃಶ್ಯ ನೋಡಿ ಗಾಬರಿಯಾಗಿದ್ದಾರೆ. 

ರೈಲಿನಿಂದ ಬೋಗಿಯಿಂದ ಫ್ಲಾಟ್‌ಫಾರ್ಮ್‌ನತ್ತ ವಸ್ತುಗಳನ್ನು ಕಸವನ್ನು ಎಸೆದಂತೆ ಬೇಜವಾಬ್ದಾರಿಯುತ್ತವಾಗಿ ಎಸೆಯಲಾಗುತ್ತಿದೆ. ಹೀಗೆ ಎಸೆಯುವ ರಭಸಕ್ಕೆ ಕೆಲ ವಸ್ತುಗಳ ಬಾಕ್ಸ್‌ಗಳು ಅಲ್ಲೇ ತೆರೆದುಕೊಳ್ಳುತ್ತಿವೆ. ಈ ಆನ್‌ಲೋಡಿಂಗ್ ಕಾರ್ಯದಲ್ಲಿ ಅನೇಕ ಯುವಕರು ಭಾಗಿಯಾಗಿದ್ದು, ಯಾವುದೇ ಬೇಜಾರಿಲ್ಲದೇ ವಸ್ತುಗಳನ್ನು ತೆಗೆದು ತೆಗೆದು ನೆಲಕ್ಕೆಸೆಯುತ್ತಿದ್ದಾರೆ. ಇದು ನೋಡುಗರ ಹುಬ್ಬೇರುವಂತೆ ಮಾಡಿದ್ದು, ಅನೇಕರು ಈ ದೃಶ್ಯದ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಬಟ್ಟೆ ಮುಂತಾದ ವಸ್ತುಗಳು ಹೀಗೆ ಎಸೆದರೆ ಏನು ಆಗುವುದಿಲ್ಲ. ಆದರೆ ಎಲೆಕ್ಟ್ರಾನಿಕ್ ಐಟಂಗಳಾದ ಲ್ಯಾಪ್‌ಟಾಪ್‌, ಮೊಬೈಲ್, ಎಸಿ ಅಲ್ಲದೆ ಕೆಲ ಗೃಹಬಳಕೆಯ ವಸ್ತುಗಳನ್ನು ಹೀಗೆ ಎಸೆದರೆ ಒಳಭಾಗದಲ್ಲಿ ಡ್ಯಾಮೇಜ್ ಆಗುವುದಂತು ಖಚಿತ.

Amazon & Flipkart parcels 😂pic.twitter.com/ihvOi1awKk

— Abhishek Yadav (@yabhishekhd)

Tap to resize

Latest Videos

ಅಲ್ಲದೇ ಒಂದು ಪಾರ್ಸೆಲ್ ಅಂತೂ ಎಸೆದ ರಭಸಕ್ಕೆ ಫ್ಲಾಟ್‌ಪಾರ್ಮ್‌ನಲ್ಲಿದ್ದ ಫ್ಯಾನ್‌ಗೆ ತಾಕಿ ಕೆಳಕ್ಕೆ ಬಿದ್ದಿದೆ. ಇದರಲ್ಲಿರುವ ಬಹುತೇಕ ಪಾರ್ಸೆಲ್‌ಗಳು ಅಮೇಜಾನ್‌ ಲೋಗೋವನ್ನು ಹೊಂದಿವೆ. ಈ ವಿಡಿಯೋವನ್ನು ಪೋಸ್ಟ್ ಮಾಡಿದವರು ಅಮೇಜಾನ್(Amazon) ಫ್ಲಿಫ್‌ಕಾರ್ಟ್ (Flipkart) ಪಾರ್ಸೆಲ್ ಎಂದು ಕ್ಯಾಪ್ಷನ್‌ ಬರೆದಿದ್ದಾರೆ. ಈ ವಿಡಿಯೋವನ್ನು 2 ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದು, ನೋಡುಗರು ಶಾಕ್‌ಗೆ ಒಳಗಾಗಿದ್ದಾರೆ. ಅನೇಕರು ತಾವು ಆರ್ಡರ್‌ ಮಾಡಿದ ಬಹಳ ಅಮೂಲ್ಯವಾದ ವಸ್ತುಗಳು ನಮ್ಮನ್ನು ತಲುಪುವ ಮೊದಲು ಹೀಗೆಲ್ಲಾ ಎಲ್ಲೆಲ್ಲಾ ಬಿದ್ದು ಒದ್ದಾಡುತ್ತವೆ ಎಂಬುದನ್ನು ತಿಳಿದು ಅಚ್ಚರಿಗೊಳಗಾಗಿದ್ದಾರೆ.

ಮಕ್ಕಳಿಗಾಗಿ ಸ್ವಿಗ್ಗಿಯಿಂದ ಐಸ್‌ಕ್ರೀಮ್ ಚಿಪ್ಸ್ ಆರ್ಡರ್, ಆದರೆ ಸಿಕ್ಕಿದ್ದು 2 ಪ್ಯಾಕ್ ಕಾಂಡೋಮ್!

ಖಾಲಿ ಬಾಕ್ಸ್‌ಗಳಂತೆ ಏಕೆ ಅಮೂಲ್ಯ ವಸ್ತುಗಳನ್ನು ಅವರು ಎಸೆಯುತ್ತಿದ್ದಾರೆ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಇದೇ ಕಾರಣಕ್ಕೆ ಪಾರ್ಸೆಲ್‌ಗಳು ಉತ್ತಮ ಗುಣಮಟ್ಟದಲ್ಲಿ ಸಿಗುವುದಿಲ್ಲ. ಕೆಲವೊಮ್ಮೆ ಅವು ಹಾನಿಗೊಳಗಾಗಿರುತ್ತಾರೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.  ಪಾರ್ಸೆಲ್‌ಗಳನ್ನು ಈ ರೀತಿ ನಿರ್ವಹಿಸುತ್ತಿರುವುದಕ್ಕೆ ಇನ್ನೂ ಅನೇಕರು ರೈಲ್ವೆಯನ್ನು ದೂರಿದ್ದಾರೆ. ಈ ನಡುವೆ ಈಶಾನ್ಯ ಫ್ರಾಂಟಿಯರ್ ರೈಲ್ವೇ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಇದಕ್ಕೆ ಸಂಸ್ಥೆಗಳೇ ಜವಾಬ್ದಾರಿ ಹೊರತು ರೈಲ್ವೆ ಅಲ್ಲಾ ಎಂದು ಹೇಳಿ ಕೊಂಡಿದೆ. ಅಂದಹಾಗೆ ಈ ವಿಡಿಯೋ ಕಳೆದ ಮಾರ್ಚ್‌ನ ವಿಡಿಯೋ ಇದಾಗಿದೆ. ಗುವಾಹಟಿ ರೈಲ್ವೆ ನಿಲ್ದಾಣಕ್ಕೆ (Guwahati railway station) ರಾಜಧಾನಿ ಎಕ್ಸ್‌ಪ್ರೆಸ್‌  ರೈಲಿನ ಮೂಲಕ ಈ ಪಾರ್ಸೆಲ್ ಬಂದಿತ್ತು. ಪಾರ್ಸೆಲ್‌ಗಳನ್ನು ಹೀಗೆ ನಿರ್ವಹಿಸುವ ವ್ಯಕ್ತಿಗಳು ಸಂಬಂಧಪಟ್ಟ  ಆನ್‌ಲೈನ್ ಡೆಲಿವರಿ ಸಂಸ್ಥೆಯ ಪ್ರತಿನಿಧಿಗಳು. ರೈಲ್ವೆಯು ವಿವಿಧ ಸಂಸ್ಥೆಗೆ ಗುತ್ತಿಗೆ ಆಧಾರದ ಮೇಲೆ ಪಾರ್ಸೆಲ್ ಜಾಗದ ಬುಕಿಂಗ್ ಅನ್ನು ನೀಡುತ್ತದೆ.

This is an old video from March, 2022. Rajdhani Express at Guwahati Station. The persons handling parcels are representatives of concerned party.

Railways offers booking of parcel space on contract basis to various parties. 1/2 https://t.co/1VES8n3yBR

— Northeast Frontier Railway (@RailNf)

ಪ್ರತಿಯೊಂದು ವಸ್ತುಗಳು ಈಗ ಆನ್‌ಲೈನ್‌ನಲ್ಲಿ ಸಿಗುತ್ತವೆ. ಸೂಜಿಯಿಂದ ಹಿಡಿದು ವಾಷಿಂಗ್ ಮೆಷಿನ್ ಪ್ರಿಡ್ಜ್‌ವರೆಗೆ ಅಕ್ಕಿಯಿಂದ ಹಿಡಿದು ಅನ್ನ, ದೋಸೆಯವರೆಗೆ ಜನ ಆನ್‌ಲೈನ್‌ನಲ್ಲಿ ಆರ್ಡರ್ ಮಾಡ್ತಾರೆ. ಆನ್‌ಲೈನ್‌ ಆರ್ಡರ್‌ ಮಾಡುವುದರಿಂದ ಹೋಗಿ ಶಾಪಿಂಗ್ ಮಾಡುವ ಸಮಯವೂ ಉಳಿಯುವ ಜೊತೆಗೆ ಸಾಗಣೆ ವೆಚ್ಚ ಓಡಾಟ ಸುಸ್ತು ಯಾವುದೂ ಇರುವುದಿಲ್ಲ. ತಿಂಡಿ ತಿನಿಸು ತರಕಾರಿಗಳಾದರೆ ಮನೆಯಲ್ಲಿ ಕುಳಿತು ಆರ್ಡರ್ ಮಾಡಿದ ಕೆಲಹೊತ್ತಿನಲ್ಲೇ ಮನೆ ಸೇರುವುದು. ನಗರ ಪ್ರದೇಶಗಳಲ್ಲಿ ಇದು ಸಾಕಷ್ಟು ಜನಪ್ರಿಯವಾಗಿದ್ದು ಈ ಆನ್‌ಲೈನ್ ಸೇವೆಗೆಂದೇ ಸಾಕಷ್ಟು ಆಪ್‌ಗಳಿವೆ. ಆದರೆ ಆನ್‌ಲೈನ್‌ ಖರೀದಿಯಲ್ಲೂ ಕೆಲವು ಸಮಸ್ಯೆಗಳಿವೆ. ಕೆಲವೊಮ್ಮೆ ನಾವು ಆರ್ಡರ್‌ ಮಾಡಿರುವುದು ಒಂದಾದರೆ ಬಂದು ತಲುಪುವುದು ಇನ್ನೊಂದು, ಮತ್ತೆ ಕೆಲವೊಮ್ಮೆ ಖರೀದಿಸಿದ ವಸ್ತುಗಳೇ ಡ್ಯಾಮೇಜ್ ಆಗಿರುತ್ತವೆ. 

ದೇವಸ್ಥಾನಗಳೂ ಈಗ ಡಿಜಿಟಲ್, ಆನ್‌ಲೈನ್ ಮೂಲಕವೇ ಚಾಮುಂಡೇಶ್ವರಿಗೆ ಕಾಣಿಕೆ ಮುಟ್ಟಿಸ್ಬಹುದು

click me!