
ನವದೆಹಲಿ: ಸಮ್ಮತಿಯ ದೈಹಿಕ ಸಂಬಂಧಕ್ಕೆ ಮುಂದಾಗುವ ವ್ಯಕ್ತಿ ತನ್ನ ಸಂಗಾತಿಯ ವಯಸ್ಸು ಅರಿಯಲು ಆಧಾರ್ ಕಾರ್ಡ್ ಅಥವಾ ಪಾನ್ ಸಂಖ್ಯೆ ಅಥವಾ ಆಕೆಯ ಶಾಲಾ ದಾಖಲಾತಿಗಳನ್ನು ಪರಿಶೀಲಿಸಲು ಆಗದು. ಅದರ ಅಗತ್ಯ ಬೀಳುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಇದೇ ವೇಳೆ, ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ವ್ಯಕ್ತಿಯೊಬ್ಬರಿಗೆ ಜಾಮೀನು ಮಂಜೂರು ಮಾಡಿದೆ.
ದೂರುದಾರೆ ತಾನು ಅಪ್ರಾಪ್ತೆ ಎಂದು ಹೇಳಿಕೊಳ್ಳುತ್ತಿದ್ದಾಳೆ. ಆದರೆ ಆಕೆ ಮೂರು ಜನ್ಮದಿನಾಂಕವನ್ನು ತೋರಿಸಿದ್ದಾಳೆ. ಆರೋಪಿಯನ್ನು ಸಿಲುಕಿಸಲು ಅಪ್ರಾಪ್ತೆ ಎಂದು ನಿರೂಪಿಸುವ ಯತ್ನ ಇದಾಗಿದೆ. ಆದರೆ ಆಧಾರ್ ಕಾರ್ಡ್‌ನಲ್ಲಿ 1.1.1998 ಎಂದು ಜನ್ಮ ದಿನಾಂಕ ಇದ್ದು, ಆರೋಪಿ ಲೈಂಗಿಕ ಸಂಬಂಧ ಹೊಂದಿರುವುದು ಅಪ್ರಾಪ್ತೆಯ ಜತೆಯಲ್ಲ ಎಂಬುದನ್ನು ಹೇಳುತ್ತದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
2009ರಿಂದ 2021ರ ನಡುವೆ ತನ್ನ ಮೇಲೆ ಆರೋಪಿ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಎರಡು ವರ್ಷಗಳ ಹಿಂದೆ ಅತ್ಯಾಚಾರ ನಡೆದಿದೆ ಎಂದು ಮಹಿಳೆ ಹೇಳುತ್ತಿದ್ದಾರೆ. ವಿಳಂಬವಾಗಿ ಪ್ರಕರಣ ದಾಖಲಿಸಿದ್ದಕ್ಕೆ ಕಾರಣ ನೀಡಿಲ್ಲ. ಇಬ್ಬರ ನಡುವೆ ಸಾಕಷ್ಟು ಹಣ ವರ್ಗಾವಣೆಯಾಗಿದೆ. ಇದು ಹನಿಟ್ರ್ಯಾಪ್‌ನಂತಿದೆ ಎಂದು ಹೇಳಿ, ಮಹಿಳೆ ವಿರುದ್ಧ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿತು.
ಲಿವ್‌ಇನ್ ಸಂಬಂಧಕ್ಕೆ ಕಾನೂನು ರಕ್ಷಣೆ ನೀಡಲು ನಿರಾಕರಿಸಿದ ಕೋರ್ಟ್
ಕೆಲ ದಿನಗಳ ಹಿಂದೆ ಪ್ರಕರಣವೊಂದರಲ್ಲಿ ಲಿವೀಂಗ್ ರಿಲೇಷನ್‌ಶಿಪ್‌ನಲ್ಲಿ ಬದುಕುತ್ತಿದ್ದ ಜೋಡಿಯ ಸಂಬಂಧಕ್ಕೆ ಕಾನೂನಿನ ರಕ್ಷಣೆ ನೀಡಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿತ್ತು. ಮಹಿಳೆ ಗಂಡನನ್ನು ತೊರೆದು ಮತ್ತೊರ್ವ ವ್ಯಕ್ತಿಯೊಂದಿಗೆ ವೈವಾಹಿಕ ಸಂಬಂಧದಲ್ಲಿದ್ದು, ಈ ಜೋಡಿಗೆ ಕಾನೂನಿನ ರಕ್ಷಣೆ ನೀಡಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ. ತನ್ನ ಪತಿ ತನ್ನ ಸ್ನೇಹಿತರೊಂದಿಗೆ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ ನಂತರ ತಾನು ತನ್ನ ಪತಿಯನ್ನು ತೊರೆದಿರುವುದಾಗಿ ಕೋರ್ಟ್‌ನಲ್ಲಿ ನೀಡಿದ ದೂರಿನಲ್ಲಿ ಮಹಿಳೆ ತಿಳಿಸಿದ್ದಳು.
ಹೆಂಡತಿ ಜೊತೆ ಬಲವಂತದ ದೈಹಿಕ ಸಂಬಂಧ ಅತ್ಯಾಚಾರ ಎಂದು ಪರಿಗಣಿಸಬಹುದೇ? ಸುಪ್ರೀಂನಿಂದ ಸಮೀಕ್ಷೆ
ಅಲ್ಲದೇ ಇದಾದ ನಂತರ ಓರ್ವ ವ್ಯಕ್ತಿಯೊಂದಿಗೆ ಲಿವ್ ಇನ್ ರಿಲೇಷನ್ ಶಿಪ್ ಸಂಬಂಧದಲ್ಲಿದ್ದು, ಈ ಸಂಬಂಧಕ್ಕೆ ರಕ್ಷಣೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ಇದಕ್ಕೆ ಕೋರ್ಟ್ ಮಹಿಳೆ ತನ್ನ ಅಕ್ರಮ ಸಂಬಂಧಕ್ಕೆ ಕಾನೂನಿನ ಮುದ್ರೆ ಪಡೆಯುವ ಉದ್ದೇಶದಿಂದಷ್ಟೇ ಈ ಅರ್ಜಿ ಸಲ್ಲಿಸಿದ್ದಾಳೆ ಎಂದು ಈ ಸಂಬಂಧಕ್ಕೆ ರಕ್ಷಣೆ ನೀಡಲು ನಿರಾಕರಿಸಿದೆ ಜೊತೆಗೆ ಐದು ಸಾವಿರ ದಂಡ ವಿಧಿಸಿದೆ. ಅಲಹಾಬಾದ್ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ಕೌಶಲ್ ಜಯೇಂದ್ರ ಠಾಕರ್ ಮತ್ತು ಅಜಯ್ ತ್ಯಾಗಿ ಅವರಿದ್ದ ದ್ವಿಸದಸ್ಯ ಪೀಠ ಈ ತೀರ್ಪು ನೀಡಿತ್ತು. ಮಹಿಳೆಯು ಈಗಾಗಲೇ ಬೇರೊಬ್ಬರನ್ನು ಮದುವೆಯಾಗಿದ್ದಾಳೆ ಮತ್ತು ಇಬ್ಬರು ಅರ್ಜಿದಾರರ ನಡುವಿನ ಸಹಬಾಳ್ವೆಯ ಅವಧಿಯು ತುಂಬಾ ಕಡಿಮೆ ಇದೆ. ಈ ಕಾರಣಕ್ಕೆ ಈ ಸಂಬಂಧಕ್ಕೆ ಕಾನೂನಿನ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿತ್ತು.
ಮನೆಗೆಲಸದವರೊಂದಿಗೇ ಸಂಬಂಧ ಇಟ್ಟಿಕೊಂಡಿದ್ದರು ಈ ಬಾಲಿವುಡ್ ನಟರು!
ಭಾರತದ ಸರ್ಕಾರ ಹಾಗೂ ನ್ಯಾಯಾಂಗ ಸಂವಿಧಾನದ ವಿಧಿಯಂತೆ ಆಡಳಿತ ನಡೆಸುತ್ತಿದೆ. ನಾವು ಹಿಂದಿನ ಕಾಲದಲ್ಲಿ ವಾಸಿಸುತ್ತಿಲ್ಲ ಎಂದು ಹೇಳುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಏಕೆಂದರೆ ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರು ಪತಿ-ಪತ್ನಿಯಾಗಿ ಬದುಕುತ್ತಿದ್ದಾರೆ ಎಂದು ಹೇಳಲಾಗುವುದಿಲ್ಲ. ಅಲ್ಲದೇ ನಾವು ಒಂದೇ ಲಿಂಗದ ಇಬ್ಬರು ವ್ಯಕ್ತಿಗಳಿಗೆ ರಕ್ಷಣೆ ನೀಡಬೇಕಾದ ಸಂದರ್ಭ ಎದುರಿಸಬೇಕಾಗುವುದು. ಭಾರತದ ಸಂವಿಧಾನವು ಲಿವ್-ಇನ್ ಸಂಬಂಧಕ್ಕೆ ಅನುಮತಿ ನೀಡಬಹುದು ಆದರೆ ಈ ಅರ್ಜಿ ಅಕ್ರಮ ಸಂಬಂಧದ ಮೇಲೆ ಈ ನ್ಯಾಯಾಲಯದ ಮುದ್ರೆಯನ್ನು ಪಡೆಯುವ ಉದ್ದೇಶದಿಂದ ಸಲ್ಲಿಸಲಾಗಿದೆಯೇ ಹೊರತು ಬೇರೇನೂ ಅಲ್ಲ ಎಂದು ಪೀಠ ಹೇಳಿದೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ