'ಹನುಮಾನ್ ಹೋಟೆಲ್‌' ಟ್ವೀಟ್ ಪ್ರಕರಣ: ಮೊಹಮ್ಮದ್ ಜುಬೇರ್‌ಗೆ ಜಾಮೀನು, ಆದರೆ ಜೈಲಿನಿಂದ ಬಿಡುಗಡೆ ಇಲ್ಲ!

By Suvarna News  |  First Published Jul 15, 2022, 2:41 PM IST

2018ರ ಟ್ವೀಟ್‌ ಒಂದಕ್ಕೆ ಸಂಬಂಧಿಸಿದಂತೆ ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ಗೆ ಜಾಮೀನು ಲಭಿಸಿದೆ. ಜಾಮೀನು ಸಿಕ್ಕರೂ ಜುಬೇರ್‌ಗೆ ಸದ್ಯ ಜೈಲಿನಿಂದ ಬಿಡುಗಡೆ ಮಾತ್ರ ಇಲ್ಲದಂತಾಗಿದೆ.


ನವದೆಹಲಿ(ಜು.15): ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರಿಗೆ ಜಾಮೀನು ಸಿಕ್ಕಿದೆ. ದೆಹಲಿಯಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಅವರಿಗೆ ಈ ಜಾಮೀನು ಸಿಕ್ಕಿದೆ. ಆದರೆ ಜುಬೇರ್ ವಿರುದ್ಧ ಬೇರೆ ಪ್ರಕರಣಗಳೂ ದಾಖಲಾಗಿರುವುದರಿಂದ ಸದ್ಯಕ್ಕೆ ಜೈಲಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ.

ಮೊಹಮ್ಮದ್ ಜುಬೇರ್‌ಗೆ ಸಂಬಂಧಿಸಿದ ಪ್ರಕರಣವನ್ನು ಪಟಿಯಾಲ ಹೌಸ್ ಕೋರ್ಟ್ ಇಂದು ವಿಚಾರಣೆ ನಡೆಸಿದೆ. ಪ್ರಕರಣ ಸಂಬಂಧ ಜುಬೇರ್‌ಗೆ ನ್ಯಾಯಾಲಯ ಜಾಮೀನು ನೀಡಿದೆ. ಆದರೆ ಈಗ ಅವರ ವಿರುದ್ಧ ಹಲವು ಪ್ರಕರಣಗಳಲ್ಲಿ ಪ್ರಕರಣಗಳು ದಾಖಲಾಗಿರುವುದರಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಮೊಹಮ್ಮದ್ ಜುಬೇರ್ ಎಲ್ಲಾ ಎಫ್‌ಐಆರ್‌ಗಳನ್ನು ಕ್ಲಬ್ಬಿಂಗ್ ಮೂಲಕ ಒಟ್ಟಿಗೆ ಕೇಳಲು ಆದೇಶಿಸುವವರೆಗೆ ಜೈಲಿನಲ್ಲೇ ಇರುತ್ತಾರೆ.

Tap to resize

Latest Videos

Mohammed Zubair ಬಂಧನಕ್ಕೆ ಕ್ಯಾತೆ ಎತ್ತಿದ ಜರ್ಮನಿಗೆ ಚಾಟಿ ಬೀಸಿದ ಭಾರತ

50 ಸಾವಿರ ವೈಯಕ್ತಿಕ ಬಾಂಡ್‌ನಲ್ಲಿ ಮೊಹಮ್ಮದ್ ಜುಬೇರ್‌ಗೆ ಜಾಮೀನು ನೀಡಲು ಪಟಿಯಾಲ ಹೌಸ್ ಕೋರ್ಟ್ ಆದೇಶಿಸಿದೆ. ನ್ಯಾಯಾಲಯದಲ್ಲಿ ದೆಹಲಿ ಪೊಲೀಸರು ಜುಬೈರ್ ಜಾಮೀನು ಅರ್ಜಿಯನ್ನು ವಿರೋಧಿಸಿದರು.

ಮೊಹಮ್ಮದ್ ಜುಬೈರ್ ಅವರು 2018 ರಲ್ಲಿ ಮಾಡಿದ ಟ್ವೀಟ್‌ನಲ್ಲಿ ಈ ಎಫ್‌ಐಆರ್ ದಾಖಲಾಗಿದೆ. ಇದರಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ 'ಹನಿಮೂನ್ ಹೋಟೆಲ್' ಹೆಸರನ್ನು ಹನುಮಾನ್ ಹೋಟೆಲ್ ಎಂದು ಬದಲಾಯಿಸಲಾಗಿದೆ. ಹೀಗಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಾಗಿದೆ.

ಧರ್ಮದ್ವೇಷದ ಟ್ವೀಟ್‌ ತನಿಖೆಗೆ ಪತ್ರಕರ್ತ ಅಸಹಕಾರ, ಜುಬೇರ್‌ 4 ದಿನ ಪೊಲೀಸ್‌ ವಶಕ್ಕೆ!

ಮೊಹಮ್ಮದ್ ಜುಬೇರ್ ವಿರುದ್ಧ ಒಟ್ಟು ಏಳು ಎಫ್‌ಐಆರ್‌ಗಳು ದಾಖಲು

ಮೊಹಮ್ಮದ್ ಜುಬೇರ್ ವಿರುದ್ಧ ಒಟ್ಟು ಏಳು ಎಫ್‌ಐಆರ್‌ಗಳು ದಾಖಲಾಗಿವೆ.

ಸತ್ಯ ಪರೀಕ್ಷಕ ಜುಬೇರ್ ವಿರುದ್ಧ ಒಟ್ಟು ಏಳು ಎಫ್‌ಐಆರ್‌ಗಳು ದಾಖಲಾಗಿವೆ. ಇದರಲ್ಲಿ 6 ಉತ್ತರ ಪ್ರದೇಶದಲ್ಲಿ ಮತ್ತು ಒಂದು ದೆಹಲಿಯಲ್ಲಿ ನೋಂದಾಯಿಸಲಾಗಿದೆ. ಒಟ್ಟು ನಾಲ್ಕು ಪ್ರಕರಣಗಳಲ್ಲಿ ಆತನನ್ನು ಬಂಧಿಸಲಾಗಿದೆ. ಇದರಲ್ಲಿ ದೆಹಲಿ, ಸೀತಾಪುರ್, ಹತ್ರಾಸ್ ಮತ್ತು ಲಖಿಂಪುರ ಖೇರಿ ಪ್ರಕರಣಗಳು ಸೇರಿವೆ.

ಈ ನಾಲ್ಕು ಪ್ರಕರಣಗಳ ಪೈಕಿ ಸೀತಾಪುರ ಪ್ರಕರಣದಲ್ಲಿ ಮತ್ತು ಈಗ ದೆಹಲಿ ಪ್ರಕರಣದಲ್ಲಿ ಜಾಮೀನು ಪಡೆದಿದ್ದಾರೆ. ಜೈಲಿನಿಂದ ಹೊರಬರಲು ಲಖಿಂಪುರ ಖೇರಿ ಮತ್ತು ಹತ್ರಾಸ್ ಪ್ರಕರಣಗಳಲ್ಲಿ ಜಾಮೀನು ಪಡೆಯಬೇಕಾಗುತ್ತದೆ.

ಮೊಹಮ್ಮದ್ ಜುಬೇರ್ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಯುಪಿಯಲ್ಲಿ ದಾಖಲಾದ 6 ಎಫ್‌ಐಆರ್‌ಗಳನ್ನು ರದ್ದುಗೊಳಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಜುಬೈರ್ ವಿರುದ್ಧ ತನಿಖೆ ನಡೆಸಲು ರಚಿಸಲಾದ ಎಸ್‌ಐಟಿಯ ಸಾಂವಿಧಾನಿಕತೆಯನ್ನು ಪ್ರಶ್ನಿಸಿದೆ. ಯುಪಿ ಸರ್ಕಾರವು ಇತ್ತೀಚೆಗೆ ಯುಪಿ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್, ಅಂದರೆ ಐಜಿ ನೇತೃತ್ವದಲ್ಲಿ ಎಸ್‌ಐಟಿಯನ್ನು ರಚಿಸುವುದಾಗಿ ಘೋಷಿಸಿದೆ. ಎಸ್‌ಐಟಿಗೆ ಐಜಿ ಪ್ರೀತ್ ಇಂದರ್ ಸಿಂಗ್ ನೇತೃತ್ವ ವಹಿಸಿದ್ದು, ಡಿಐಜಿ ಅಮಿತ್ ಕುಮಾರ್ ವರ್ಮಾ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ.

ಆಲ್ಟ್‌ ನ್ಯೂಸ್‌ನ ಜುಬೇರ್‌ಗೆ ಪಾಕ್‌, ಸಿರಿಯಾ, ಗಲ್ಫ್‌ ರಾಷ್ಟ್ರಗಳ ದೇಣಿಗೆ!

ಜುಬೇರ್‌ ಅವರ ಆಲ್ಟ್‌ ನ್ಯೂಸ್‌ನ ಮಾತೃಸಂಸ್ಥೆಯಾದ ಪ್ರಾವ್ಡಾ ಮೀಡಿಯಾಗೆ ಪಾಕಿಸ್ತಾನ, ಸಿರಿಯಾ ಸೇರಿದಂತೆ ವಿದೇಶಿ ಮೂಲಗಳಿಂದ 2 ಲಕ್ಷ ರು. ದೇಣಿಗೆ ಬಂದಿದೆ. ಆದರೆ ಹಣಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಜುಬೇರ್‌ ಅಳಿಸಿಹಾಕಿದ್ದಾರೆ. ಹೀಗಾಗಿ ಈ ಹಣದ ಮೂಲದ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೀಗಾಗಿಯೇ ಜುಬೇರ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪೊಲೀಸರು ವಿರೋಧಿಸಿದ್ದರು. ಆದ್ದರಿಂದ ದಿಲ್ಲಿ ನ್ಯಾಯಾಲಯ ಜುಬೇರ್‌ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ.

‘ಹಿಂದೂಗಳ ಭಾವನೆ ನೋಯಿಸುವಂತಹ ಟ್ವೀಟ್‌ ಮಾಡಿದ ಆರೋಪದ ಮೇಲೆ ಜುಬೇರ್‌ ಅವರನ್ನು ಬಂಧಿಸಲಾಗಿತ್ತು. ಆದರೆ ಜುಬೇರ್‌ ಪಾಕಿಸ್ತಾನ, ಸಿರಿಯಾದಿಂದ ದೇಣಿಗೆ ಪಡೆದಿದ್ದು ತನಿಖೆಯ ವೇಳೆ ಬೆಳಕಿಗೆ ಬಂದಿದ್ದು, ಇದು ಕೇವಲ ಟ್ವೀಟ್‌ ಪ್ರಕರಣವಾಗಿ ಉಳಿದಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.

click me!