
ನವದೆಹಲಿ (ಏಪ್ರಿಲ್ 24, 2023): ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಳೆದ 9 ವರ್ಷಗಳಲ್ಲಿ ನೀಡಿದ ಪ್ರೋತ್ಸಾಹದ ಪರಿಣಾಮ ದೇಶದಲ್ಲಿ ದಾಖಲೆಯ 50,000 ಕಿ.ಮೀ.ನಷ್ಟು ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರದ ಅಂಕಿ ಅಂಶಗಳ ಅನ್ವಯ, ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ವರ್ಷವಾದ 2014-15ರಲ್ಲಿ ದೇಶದಲ್ಲಿ 97,830 ಕಿ.ಮೀ ನಷ್ಟು ಇದ್ದ ರಾಷ್ಟ್ರೀಯ ಹೆದ್ದಾರಿ ಮಾರ್ಗವು 2023ರ ಮಾರ್ಚ್ ವೇಳೆಗೆ 1,45,155 ಕಿ.ಮೀ. ಗೆ ವಿಸ್ತರಣೆಗೊಂಡಿದೆ.
ಜೊತೆಗೆ 2014-15ರಲ್ಲಿ ಪ್ರತಿ ದಿನ 12.1 ಕಿ.ಮೀ ಉದ್ದದ ರಸ್ತೆ (Road) ನಿರ್ಮಾಣವಾಗುತ್ತಿದ್ದರೆ (Construction), ಈ ಪ್ರಮಾಣ ಇದೀಗ 28.6 ಕಿ.ಮೀಗೆ ಹೆಚ್ಚಳವಾಗಿದೆ (Increased). ಪ್ರಸಕ್ತ ಭಾರತವು (India) ಒಟ್ಟು 63.73 ಲಕ್ಷ ಕಿ.ಮೀ ರಸ್ತೆ ಜಾಲವನ್ನು ಹೊಂದಿದ್ದು, ಅತಿ ಉದ್ದದ ರಸ್ತೆ ಜಾಲದಲ್ಲಿ ವಿಶ್ವದಲ್ಲೇ (World) ಎರಡನೇ ಸ್ಥಾನದಲ್ಲಿದೆ. 1,386 ಕಿ.ಮೀ ಉದ್ದದ ದೆಹಲಿ (New Delhi) - ಮುಂಬೈ (Mumbai) ಎಕ್ಸ್‌ಪ್ರೆಸ್ ವೇ (Express Way) ದೇಶದಲ್ಲೇ (Country) ಅತಿ ಉದ್ದದ ಎಕ್ಸ್‌ಪ್ರೆಸ್ ಮಾರ್ಗವಾಗಿದೆ. ಪ್ರತಿ ವರ್ಷ ಸುಮಾರು 85% ರಷ್ಟು ಪ್ರಯಾಣಿಕರು (Passengers) ಮತ್ತು 70% ರಷ್ಟು ಸರಕುಗಳ ಸಂಚಾರಕ್ಕೆ (Movement of Goods) ರಸ್ತೆ ಮಾರ್ಗವನ್ನೇ ಅನುಸರಿಸಲಾಗುತ್ತದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಇದು ನಮಗೆ ಅದರ ಪ್ರಾಮುಖ್ಯತೆಯ ಕಲ್ಪನೆಯನ್ನು ನೀಡುತ್ತದೆ.
ಇದನ್ನು ಓದಿ: ಉದ್ಘಾಟನೆಯಾದ ಮೂರೇ ದಿನಕ್ಕೆ ಕಿತ್ತೋಯ್ತಾ ದಶಪಥ ಹೆದ್ದಾರಿ..? ಪ್ರತಾಪ್ ಸಿಂಹ ಹೇಳಿದ್ದು ಹೀಗೆ..
ರಾಷ್ಟ್ರದ ಆರ್ಥಿಕತೆಯಲ್ಲಿ ರಸ್ತೆಗಳು ಮತ್ತು ಹೆದ್ದಾರಿಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ರಸ್ತೆ ಸಾರಿಗೆಯು ಆರ್ಥಿಕ ಅಭಿವೃದ್ಧಿ ಮಾತ್ರವಲ್ಲದೆ ಸಾಮಾಜಿಕ ಅಭಿವೃದ್ಧಿ, ರಕ್ಷಣಾ ಕ್ಷೇತ್ರಗಳು ಮತ್ತು ಜೀವನಕ್ಕೆ ಮೂಲಭೂತ ವಸ್ತುಗಳ ಪ್ರವೇಶಕ್ಕೆ ಆಧಾರವಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ಸರಕು ಮತ್ತು ಪ್ರಯಾಣಿಕರ ದಕ್ಷ ಚಲನೆಯನ್ನು ಸಕ್ರಿಯಗೊಳಿಸುವ ಮೂಲಕ ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ, ಜನರನ್ನು ಸಂಪರ್ಕಿಸುತ್ತದೆ ಮತ್ತು ಆರ್ಥಿಕ ಚಟುವಟಿಕೆಗಳನ್ನು ಸುಗಮಗೊಳಿಸುತ್ತದೆ.
ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯದ ಸಾಮರ್ಥ್ಯವನ್ನು ಹೆಚ್ಚಿಸಲು ಭಾರತ ಸರ್ಕಾರವು ಕಳೆದ 9 ವರ್ಷಗಳಲ್ಲಿ ಅನೇಕ ಉಪಕ್ರಮಗಳನ್ನು ಜಾರಿಗೆ ತಂದಿದೆ.
ಇದನ್ನೂ ಓದಿ: ದಶಪಥ ಹೆದ್ದಾರಿ ಲೋಕಾರ್ಪಣೆಗೊಳಿಸಿದ ಮೋದಿ: ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಹೆಜ್ಜೆ ಹಾಕಿದ ನಮೋ
ಅಂಕಿ ಅಂಶ
ಇದನ್ನೂ ಓದಿ: PM Modi In Karnataka: ಕೇಸರಿ ಹೂವಿನಲ್ಲೇ ಮುಳುಗಿದ ಮೋದಿ ಕಾರು, ಮಂಡ್ಯ ಪ್ರೀತಿಗೆ ನಮೋ ಎಂದ ಪಿಎಂ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ