ಜ್ಞಾನವಾಪಿ ಮಸೀದಿ ಆವರಣದಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್!

By Suvarna News  |  First Published Feb 15, 2024, 11:53 AM IST

ಜ್ಞಾನವಾಪಿ ಮಸೀದಿ ಆವರಣದಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ವಾರಣಾಸಿ ನ್ಯಾಯಾಲಯ ಅವಕಾಶ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.ಬಳಿಕ ಹೈಕೋರ್ಟ್ ತನ್ನ ಆದೇಶ ದಿನಾಂಕವನ್ನೂ ಸೂಚಿಸಿದೆ.


ಅಲಹಾಬಾದ್(ಫೆ.15) ಜ್ಞಾನವಾಪಿ ಮಸೀದಿ ಆವರಣದ ತಳಮಹಡಿಯಲ್ಲಿರುವ ಹಿಂದೂ ಮೂರ್ತಿಗಳಿಗೆ ಪೂಜೆ ಸಲ್ಲಿಸಲು ವಾರಣಾಸಿ ಜಿಲ್ಲಾ ನ್ಯಾಯಾಲಯ ಅವಕಾಶ ನೀಡಿತ್ತು. ಇದರಂತೆ ಹಿಂದೂಗಳು ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ  ವಾರಣಾಸಿ ನ್ಯಾಯಾಲಯ ಆದೇಶ ಪ್ರಶ್ನಿಸಿ ಅಂಜುಮನ್ ಇಂತೆಜಾಮಿಯಾ ಸಮಿತಿ  ಅಲಹಾಬಾ್ೃದ್ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ. ಜನವರಿ 21ಕ್ಕೆ  ಆದೇಶ ನೀಡುವುದಾಗಿ ಹೇಳಿದೆ.

ಹಿಂದೂ ದೇವಸ್ಥಾನ ಒಡೆದು ಮಸೀದಿ ಕಟ್ಟಲಾಗಿದೆಯೇ ಎಂಬುದರ ಕುರಿತು ಜ್ಞಾನವಾಪಿ ಮಸೀದಿ ಸಮೀಕ್ಷೆ ಮಾಡಿದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ತನ್ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ ಅಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಲಾಗಿತ್ತು. ವಾರಣಾಸಿ ಜಿಲ್ಲಾ ನ್ಯಾಯಾಲ ಈ ಆದೇಶ ನೀಡಿತ್ತು. ಬರೋಬ್ಬರಿ 30 ವರ್ಷಗಳಿಗೂ ಹೆಚ್ಚು ಕಾಲ ಜ್ಞಾನವಾಪಿ ಮಸೀದಿಯಲ್ಲಿನ ಹಿಂದೂ ಮೂರ್ತಿಗಳಿಗೆ ಪೂಜೆ ಸಲ್ಲಿಸಲು ನಿರ್ಬಂಧ ವಿಧಿಸಲಾಗಿತ್ತು. ಆದರೆ ಕೋರ್ಟ್ ಆದೇಶದ ಬೆನ್ನಲ್ಲೇ ವ್ಯಾಸ್ ಆವರಣದಲ್ಲಿ ಹಿಂದೂ ಮೂರ್ತಿಗಳಿಗೆ ಪೂಜೆ ಆರಂಭಗೊಂಡಿತ್ತು.

Tap to resize

Latest Videos

ಗ್ಯಾನವಾಪಿ ಕೆಳಮಹಡಿಯ ಮಂದಿರದಲ್ಲಿ ಪೂಜೆ ಸಲ್ಲಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್‌!

ಕೋರ್ಟ್ ಆದೇಶ ಮುಸ್ಲಿಮ್ ಸಮುದಾಯವನ್ನು ಕೆರಳಿಸಿತ್ತು. ಮಸೀದಿ ಆವರಣದಲ್ಲಿ ಪೂಜೆಗೆ ಅವಕಾಶ ನೀಡಿದ ನಿರ್ಧಾರ ಸರಿಯಲ್ಲ ಎಂದು ಕರ್ನಾಟಕದ ಜಿಲ್ಲೆ ಜಿಲ್ಲೆ ಸೇರಿದಂತೆ ದೇಶಾದ್ಯಂತ ಪ್ರತಿಭಟನೆ ನಡೆದಿದೆ. ಆದೇಶ ನೀಡಿದ ಮರುದಿನವೇ ತಡೆ ನೀಡಲು ಕೋರಿದ್ದ ಅಂಜುಮನ್ ಇಂತೆಜಾಮಿಯಾ ಸಮಿತಿ  ಮನವಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿತ್ತು. ಇಷ್ಟೇ ಅಲ್ಲ ಈ ವಿಚಾರಣೆಯನ್ನು ಫೆಬ್ರವರಿ 15ರಂದು ಮಾಡುವುದಾಗಿ ತಿಳಿಸಿತ್ತು. ಇದರಂತೆ ಕೋರ್ಟ್ ಇಂದು ವಿಚಾರಣೆ ನಡೆಸಿದೆ. ಆದರೆ ಆದೇಶ ಕಾಯ್ದಿರಿಸಿದೆ.

1993ರವರೆಗೂ ಜ್ಞಾನವಾಪಿ ತಳಮಹಡಿಯಲ್ಲಿರುವ ಶೃಂಗಾರ ಗೌರಿಗೆ ಕಾಶಿ ವಿಶ್ವನಾಥ ದೇಗುಲದ ಅರ್ಚಕ ಸೋಮನಾಥ ವ್ಯಾಸ್‌ ಅವರು ಪ್ರತಿನಿತ್ಯ ಪೂಜೆ ಮಾಡುತ್ತಿದ್ದರು. ಆದರೆ ಬಳಿಕ ಹಲವು ಕಾರಣಗಳಿಂದ ಈ ಅವಕಾಶ ನಿರಾಕರಿಸಲಾಗಿತ್ತು. 1993ರಿಂದ ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಹಿಂದೂ ಮೂರ್ತಿಗಳ ಪೂಜೆ ಸ್ಥಗಿತಗೊಂಡಿತ್ತು. ಇದರ ವಿರುದ್ಧ ವ್ಯಾಸ್‌ ಅವರ ಮೊಮ್ಮಗ ಸೋಮನಾಥ ವ್ಯಾಸ್‌, ‘ಅಲ್ಲಿ ಪೂಜೆ ಮಾಡಲು ಅನುವು ಮಾಡಿಕೊಡಬೇಕು’ ಎಂದು ಸೆ.25, 2023ರಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. 

ನಾವು ಇವತ್ತಲ್ಲ ನಾಳೆ ಸಾಯಲೇಬೇಕು, ಹೀಗಾಗಿ ಸಂಘರ್ಷಕ್ಕೆ ತಯಾರಾಗಿ : ಅಬ್ದುಲ್ ಮಜೀದ್ ಮೈಸೂರು

ಕೋರ್ಟ್‌ನಲ್ಲಿ ಸಮರ್ಥ ವಾದ ಮಂಡಿಸಿದ  ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್‌ ಹಿಂದೂಗಳ ಕನಸು ನನಸು ಮಾಡಿದ್ದರು. ವಾರಾಣಾಸಿ ಜಿಲ್ಲಾ ನ್ಯಾಯಾಲಯ ಜನವರಿ 31ಕ್ಕೆ ಹಿಂದೂಗಳ ಪೂಜೆಗೆ ಅವಕಾಶ ನೀಡಿತ್ತು.   
 

click me!