2024ರ ಚುನಾವಣೆ ಹೋರಾಡಲು ಎಡರಂಗ ಮಾತ್ರ ಸಾಲದು, ಕಾಂಗ್ರೆಸ್ ಬೇಕು: ಶರದ್ ಪವಾರ್!

By Suvarna NewsFirst Published Jun 25, 2021, 9:49 PM IST
Highlights
  • ಮೋದಿ ಹಾಗೂ ಬಿಜೆಪಿ ವಿರುದ್ಧ ಸ್ಪರ್ಧಿಸಲು ಎಡರಂಗ ಪಕ್ಷಗಳ ಮೈತ್ರಿ
  • ಮೈತ್ರಿ ಸಭೆಯಿಂದ ಕಾಂಗ್ರೆಸ್ ಹೊರಗಿಟ್ಟಿದ್ದ NCP ಮುಖ್ಯಸ್ಥ ಶರದ್ ಪವಾರ್
  • ಕೇವಲ ಎಡರಂಗದಿಂದ ಹೋರಾಟ ಅಸಾಧ್ಯ, ಕಾಂಗ್ರೆಸ್ ಬೇಕು ಎಂದ ಪವಾರ್

ಮುಂಬೈ(ಜೂ.25):  ಶರದ್ ಪವಾರ್ ನೇತೃತ್ವದಲ್ಲಿ ಇತ್ತೀಚೆಗೆ ಎಡರಂಗ ಪಕ್ಷಗಳು ಒಟ್ಟಾಗಿ ಮಹತ್ವದ ಸಭೆ ನಡೆಸಿತ್ತು. ಶರದ್ ಪವಾರ್ ನಿವಾಸದಲ್ಲಿ ನಡೆದ ಸಭೆಯಿಂದ ಕಾಂಗ್ರೆಸ್ ಪಕ್ಷವನ್ನು ಹೊರಗಿಡಲಾಗಿತ್ತು. ಈ ಸಭೆ ಬೆನ್ನಲ್ಲೇ ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ 2024ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಹೋರಾಡಲು ಕೇವಲ ಎಡರಂಗ ಪಕ್ಷಗಳಿಗೆ ಸಾಧ್ಯವಿಲ್ಲ ಎಂದಿದ್ದರು. ಇದರ ಬೆನ್ನಲ್ಲೇ ಇದೀಗ ಶರದ್ ಪವಾರ್ ಹೊಸ ವರಸೆ ಶುರುಮಾಡಿದ್ದಾರೆ.

ಕಾಂಗ್ರೆಸ್ ಹೊರಗಿಟ್ಟು 8 ಪಕ್ಷಗಳ ಸಭೆ; 2024ರಲ್ಲಿ ಮೋದಿ ಎದುರಿಸಲು ಶರದ್ ಪವಾರ್‌ಗೆ ನಾಯಕತ್ವ?!

ಎಡರಂಗ ಪಕ್ಷಗಳ ಸಭೆಯಲ್ಲಿ ವಿರೋಧ ಪಕ್ಷಗಳ ಮೈತ್ರಿ ಚರ್ಚೆಯಾಗಿಲ್ಲ. ಮೈತ್ರಿಗೆ ಕಾಂಗ್ರೆಸ್ ಪಕ್ಷ ಬೇಕು. ಈ ಕುರಿತು ಅಂದಿನ ಸಭೆಯಲ್ಲಿ ಹೇಳಿದ್ದೇನೆ ಎಂದು ಪವಾರ್ ಹೇಳಿದ್ದಾರೆ. ಬಿಜೆಪಿಯನ್ನು ಎದುರಿಸಲು ಸಂಭಾವ್ಯ ಮೈತ್ರಿಕೂಟದ ಕುರಿತು ನಾವು ಚರ್ಚೆ ಮಾಡಿಲ್ಲ ಎಂದು ಪವಾರ್ ಹೇಳಿದ್ದಾರೆ.

ಮತ್ತೆ ಪವಾರ್‌- ಪ್ರಶಾಂತ್‌ ಭೇಟಿ: 15 ದಿನದಲ್ಲಿ 3ನೇ ಸಲ ಸಮಾಲೋಚನೆ ...

ಸಾಮೂಹಿಕ ನಾಯಕತ್ವ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎದುರಿಸುವ ಸವಾಲುಗಳ ಕುರಿತು ಮಾತನಾಡಿದ್ದೇವೆ. ಮೈತ್ರಿಯೊಂದಿಗೆ ಮುಂದೆ ಸಾಗಿದರೆ ಯಶಸ್ಸು ಸಾಧ್ಯ. ಹೀಗೆ ಮೈತ್ರಿ ಮಾಡಿಕೊಳ್ಳುವುದಾದರೆ ಕಾಂಗ್ರೆಸ್ ಹೊರಗಿಡಲು ಸಾಧ್ಯವಿಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ.

click me!