ಲಾರಿ, ಟ್ರಕ್‌ಗಳಲ್ಲಿ ಎಸಿ ಕ್ಯಾಬಿನ್ ಅಳವಡಿಕೆಗೆ ಕಡೆ ದಿನಾಂಕ ಪ್ರಕಟ

By Anusha Kb  |  First Published Dec 11, 2023, 1:55 PM IST

ಸರಕು ಸಾಗಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಟ್ರಕ್‌ಗಳ ಚಾಲಕರ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸಾರಿಗೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಹೊಸ ಟ್ರಕ್‌ಗಳಲ್ಲಿ ಎಸಿ ಅಳವಡಿಕೆ ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದ್ದು, ಇದಕ್ಕೆ ಕೊನೆ ದಿನಾಂಕವನ್ನು ನಿಗದಿಪಡಿಸಿದೆ. 


ನವದೆಹಲಿ: ಸರಕು ಸಾಗಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಟ್ರಕ್‌ಗಳ ಚಾಲಕರ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸಾರಿಗೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಹೊಸ ಟ್ರಕ್‌ಗಳಲ್ಲಿ ಎಸಿ ಅಳವಡಿಕೆ ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದ್ದು, ಇದಕ್ಕೆ ಕೊನೆ ದಿನಾಂಕವನ್ನು ನಿಗದಿಪಡಿಸಿದೆ. ಕೇಂದ್ರ ಸಾರಿಗೆ ಇಲಾಖೆ ಜಾರಿಗೊಳಿಸಿದ ಹೊಸ ಅಧಿಸೂಚನೆಯ ಪ್ರಕಾರ 2025ರ ಆಕ್ಟೋಬರ್ 1ನೇ ತಾರೀಖಿನ ಒಳಗೆ ಎಲ್ಲಾ ಟ್ರಕ್‌ಗಳಲ್ಲಿ ಚಾಲಕರಿಗೆ ಎಸಿ ಕ್ಯಾಬಿನ್ ಇರಬೇಕು ಎಂದು ಆದೇಶಿಸಿದೆ. 

ಸಾರಿಗೆ ಉದ್ಯಮದಲ್ಲಿ ಪ್ರಮುಖ ಪಾತ್ರ ವಹಿಸುವ ಟ್ರಕ್ ಚಾಲಕರ ಕೆಲಸವನ್ನು ಸುಗಮಗೊಳಿಸುವುದಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಈ ನಿರ್ಧಾರ ಕೈಗೊಂಡಿದೆ.  ಸರ್ಕಾರದ ಹೊಸ ಸೂಚನೆಯ ಪ್ರಕಾರ, ಅಕ್ಟೋಬರ್ 1, 2025ರ ನಂತರ ನಿರ್ಮಾಣವಾದ ಹೊಸ ಟ್ರಕ್‌ಗಳಿಗೆ ಎಸಿ ಕ್ಯಾಬಿನ್ (AC cabin) ಅಳವಡಿಕೆ ಕಡ್ಡಾಯವಾಗಿದೆ. 

Tap to resize

Latest Videos

ಟ್ರಕ್ ಚಾಲಕರಿಗೆ ಕೇಂದ್ರ ಸರ್ಕಾರ ಕೊಡುಗೆ, ಸುಗಮ ಸಂಚಾರಕ್ಕೆ ಹೊಸ ನಿಯಮ!

ಇವಾಗಿನಿಂದ ಹಾಗೂ ಆಕ್ಟೋಬರ್ 2025ರ ನಂತರ ನಿರ್ಮಾಣವಾಗುವ ಟ್ರಕ್‌ಗಳಿಗೆ ಏರ್ ಕಂಡೀಷನ್ ಸಿಸ್ಟಂ (Air condition System) ಅಳವಡಿಸಲೇಬೇಕು. ಅದರಲ್ಲೂ ಎನ್‌2 ಎನ್‌3 ಮಾದರಿಯ ವಾಹನಗಳಿಗೆ ಇದು ಕಡ್ಡಾಯ (ಎನ್‌ 2 ಎಂದರೆ 3.5 ಟನ್‌ ಭಾರ ಮೀರಿದ ಆದರೆ 12 ಟನ್‌ಗಿಂತ ಹೆಚ್ಚಿಲ್ಲದ ಸರಕು ಸಾಗಣೆ ವಾಹನ, ಎನ್ 3 ಎಂದರೆ ಗರಿಷ್ಠ 12 ಟನ್ ತೂಕ ಮೀರಿದ ಸರಕು ಸಾಗಣೆ ವಾಹನ) ಎಂದು ಸಚಿವಾಲಯವೂ ಗೆಜೆಟೆಡ್ ನೊಟೀಫಿಕೇಷನ್‌ನಲ್ಲಿ ತಿಳಿಸಿದೆ.  ಎಸಿ ವ್ಯವಸ್ಥೆ ಹೊಂದಿರುವ ವಾಹನಗಳನ್ನು IS14618:2022 ಅಡಿ ಪರಿಶೀಲನೆ ಮಾಡಲಾಗುವುದು ಎಂದು ನೋಟಿಫಿಕೇಷನ್‌ನಲ್ಲಿ ಉಲ್ಲೇಖಿಸಲಾಗಿದೆ. 

ಈ ಬಗ್ಗೆ ಕಳೆದ ಜುಲೈನಲ್ಲಿಯೇ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರು ಹೇಳಿಕೆ ನೀಡಿದ್ದರು. ಟ್ರಕ್ ಕ್ಯಾಬಿನ್‌ಗಳಲ್ಲಿ ಎಸಿ ಸಿಸ್ಟಮ್‌ಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸುವ ಕರಡು ಅಧಿಸೂಚನೆಯನ್ನು ಅನುಮೋದಿಸಲಾಗಿದೆ ಎಂದು ಅವರು ಹೇಳಿದ್ದರು.  ಭಾರತದ ಸಾರಿಗೆ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಟ್ರಕ್ ಚಾಲಕರ ಕೆಲಸದ ಪರಿಸ್ಥಿತಿಗಳು ಮತ್ತು ಮನಸ್ಥಿತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಅವಶ್ಯಕತೆಯಿದೆ ಎಂದು ಸಚಿವ ಗಡ್ಕರಿ ಇತ್ತೀಚೆಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. 

2025ರಿಂದ ಟ್ರಕ್‌ಗಳಲ್ಲಿ ಎಸಿ ಕ್ಯಾಬಿನ್‌ ಕಡ್ಡಾಯ: ಕೇಂದ್ರ ಸರ್ಕಾ​ರದ ಮಹ​ತ್ವದ ನಿರ್ಧಾ​ರ

ದೇಶಾದ್ಯಂತ ಸಂಚರಿಸುವ  ಟ್ರಕ್ ಚಾಲಕರು ವಿಪರೀತ ಶಾಖದ ಪರಿಸ್ಥಿತಿಗಳಲ್ಲಿಯೂ ನಿರಂತರ ಕೆಲಸ ಮಾಡಬೇಕಾಗುತ್ತದೆ ಈ ಬಗ್ಗೆ ಸಚಿವ ಗಡ್ಕರಿ ವಿಷಾದಿಸಿದ್ದರು. ಆದರೆ ಕೇಂದ್ರ ಸಾರಿಗೆ ಇಲಾಖೆಯ ಈ ನಿರ್ಧಾರಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಇದು ವಾಹನ ನಿರ್ಮಾಣ ವೆಚ್ಚವನ್ನು ಹೆಚ್ಚಿಸುತ್ತದೆ ಎಂದು ಹಲವು ಉದ್ಯಮ ಸಂಸ್ಥೆಗಳು ಬೇಸರ ವ್ಯಕ್ತಪಡಿಸಿದ್ದರು. 

click me!