Video: ಇದು ಶಾಲೆನಾ? ಹೋಟೆಲ್? ಕ್ಲಾಸ್‌ರೂಮ್‌ನಲ್ಲಿ ಚಾಪೆ ಹಾಸ್ಕೊಂಡು ಗಡದ್ದಾಗಿ ನಿದ್ದೆ ಮಾಡಿದ ಶಿಕ್ಷಕಿ

Published : Jul 28, 2024, 03:46 PM ISTUpdated : Jul 28, 2024, 04:10 PM IST
Video: ಇದು ಶಾಲೆನಾ? ಹೋಟೆಲ್? ಕ್ಲಾಸ್‌ರೂಮ್‌ನಲ್ಲಿ ಚಾಪೆ ಹಾಸ್ಕೊಂಡು ಗಡದ್ದಾಗಿ ನಿದ್ದೆ ಮಾಡಿದ ಶಿಕ್ಷಕಿ

ಸಾರಾಂಶ

ಈ ಶಾಲೆಯ ಶಿಕ್ಷಕಿ ಮಕ್ಕಳ ಮುಂದೆ ಚಾಪೆ ಹಾಸ್ಕೊಂಡು ಮಲಗಿದ್ದಾರೆ. ಮಕ್ಕಳು ಚೆನ್ನಾಗಿ ಕಲಿಯಲಿ ಅಂತ ಶಾಲೆಗೆ ಕಳುಹಿಸಿದ್ರೆ, ಶಿಕ್ಷಕಿ ಅವರಿಂದಲೇ ಗಾಳಿ ಬೀಸಿಕೊಂಡು ನಿದ್ದೆ ಮಾಡಿದ್ದಾಳೆ.

ಲಕ್ನೋ: ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡೋದು ಶಿಕ್ಷಕರ ಕೆಲಸ. ಸಿಗುವ ಸಮಯದಲ್ಲಿಯೇ ಇಡೀ ಪಠ್ಯ ಪೂರ್ಣಗೊಳಿಸಬೇಕೆಂಬ ನಿಯಮಗಳು ಶಿಕ್ಷಕರಿಗೆ ಇರುತ್ತದೆ. ಇದರ ಜೊತೆಗೆ ಪ್ರತಿ ಮಕ್ಕಳ ಕಲಿಕೆಯ ಬಗ್ಗೆ ಶಿಕ್ಷಕರು ಗಮನ ನೀಡಬೇಕಾಗುತ್ತದೆ. ಅದರಲ್ಲಿಯೂ ಬಾಲ್ಯದಲ್ಲಿ ಕಲಿತ ಕಲಿಕೆ ಇಡೀ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುತ್ತದೆ. ಪ್ರಾಥಮಿಕ ಶಾಲೆಯ ಶಿಕ್ಷಕರು ಅಂದ್ರೆ ಮಕ್ಕಳಿಗೆ ಇಷ್ಟ. ಆದ್ರೆ ಶಾಲೆಯ ಶಿಕ್ಷಕಿ ಕ್ಲಾಸ್‌ರೂಮ್‌ನಲ್ಲಿ ಚಾಪೆ ಹಾಸ್ಕೊಂಡು ಗಡದ್ದಾಗಿ ನಿದ್ದೆ ಮಾಡಿದ್ದಾರೆ. ಶಿಕ್ಷಕಿ ನಿದ್ದೆ ಮಾಡುತ್ತಿದ್ರೆ ಕೆಲ ಮಕ್ಕಳು ಪುಸ್ತಕದಿಂದ ಗಾಳಿ ಬೀಸುತ್ತಿದ್ದಾರೆ. ಒಂದಿಷ್ಟು ಮಕ್ಕಳು ಗಲಾಟೆ ಮಾಡುತ್ತಿದ್ದಾರೆ. ಶಿಕ್ಷಕಿ ಶಾಲೆಯಲ್ಲಿ ನಿದ್ದೆ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. 

ಉತ್ತರ ಪ್ರದೇಶ ಅಲಿಗಢ ಜಿಲ್ಲೆಯ ಧನೀಪುರ ಬ್ಲಾಕ್‌ನಲ್ಲಿರುವ ಗೋಕುಲಪುರ ಗ್ರಾಮದ ಸರ್ಕಾರಿ ಶಾಲೆಯ ಕಥೆ ಇದಾಗಿದೆ. ಈ ಶಾಲೆಯ ಶಿಕ್ಷಕಿ ಮಕ್ಕಳ ಮುಂದೆ ಚಾಪೆ ಹಾಸ್ಕೊಂಡು ಮಲಗಿದ್ದಾರೆ. ಮಕ್ಕಳು ಚೆನ್ನಾಗಿ ಕಲಿಯಲಿ ಅಂತ ಶಾಲೆಗೆ ಕಳುಹಿಸಿದ್ರೆ, ಶಿಕ್ಷಕಿ ಅವರಿಂದಲೇ ಗಾಳಿ ಬೀಸಿಕೊಂಡು ನಿದ್ದೆ ಮಾಡಿದ್ದಾಳೆ. ಶಿಕ್ಷಕಿಗೆ ಮಲಗಿದ್ರೆ ಸೆಕೆ ಆಗಬಾರದು ಎಂದು ಮಕ್ಕಳು ಓದುವ ಪುಸ್ತಕದಿಂದ ಗಾಳಿ ಬೀಸಿದ್ದಾರೆ.

ಸೈನ್ಸ್ ಕಲಿಯಲು ಬೇರೆ ಕಾಲೇಜಿಗೆ ಹೋದ ಗೆಳೆಯರು.. ಖಿನ್ನತೆಗೊಳಗಾಗಿ ನೇಣು ಬಿಗಿದುಕೊಂಡ 11ನೇ ಕ್ಲಾಸ್ ವಿದ್ಯಾರ್ಥಿ

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ಇದು ಉತ್ತರ ಪ್ರದೇಶದಲ್ಲಿಯ ಶಿಕ್ಷಣ ವ್ಯವಸ್ಥೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಟೀಚರ್ ಈ ರೀತಿ ಮಲಗಿದ್ರೆ ಮಕ್ಕಳಿಗೆ ಪಾಠ ಮಾಡೋರು ಯಾರು? ಮಕ್ಕಳ ಶಿಕ್ಷಣಕ್ಕೆ ಬುನಾದಿ ಬೀಳುವ ಹಂತ ಇದಾಗಿದ್ದು, ಇಂತಹ ಶಿಕ್ಷಕರನ್ನು ಸೇವೆಯಿಂದ ಅಮಾನುತುಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶಿಕ್ಷಣ ಸಚಿವ ಸಂದೀಪ್ ಸಿಂಗ್ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಈ ಶಾಲೆ ಬರುತ್ತದೆ. ಈ ಸಂಬಂಧ ಶಿಕ್ಷಣಾಧಿಕಾರಿಗಳು ತನಿಖೆ ಆದೇಶಿಸಿದ್ದಾರೆ. ಆದ್ರೆ ನಿದ್ದೆ ಮಾಡಿದ ಶಿಕ್ಷಕಯ ವಿರುದ್ಧ ಪ್ರಕರಣ ದಾಖಲಾಗಿದೆಯಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಎಕ್ಸ್ ಖಾತೆಯಲ್ಲಿ ಅಪ್ಲೋಡ್ ಆಗಿರುವ ಈ ವಿಡಿಯೋಗೆ 10 ಸಾವಿರಕ್ಕೂ ಅಧಿಕ ವ್ಯೂವ್, ಹಲವು ಕಮೆಂಟ್‌ಗಳು ಬಂದಿವೆ.

ಆಟವಾಡುತ್ತಿದ್ದ ಪುಟ್ಟ ಕಂದನ ದಾಳಿಯಿಂದ ರಕ್ಷಿಸಿದ ನಾಯಿ, ಮೈ ಜುಮ್ಮೆನಿಸುವ ದೃಶ್ಯ ಸೆರೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ