ಆರೋಗ್ಯ ಹದಗೆಟ್ಟಿದೆ. ಹೀಗಾಗಿ ಇಂದು ಕಚೇರಿಗೆ ಬರಲು ಸಾಧ್ಯವಾಗುತ್ತಿಲ್ಲ, ಸಿಕ್ ಲೀವ್ ಹಾಕುತ್ತಿದ್ದೇನೆ ಎಂದು ಉದ್ಯೋಗಿ ಬಾಸ್‌ಗೆ ಮೆಸೇಜ್ ಮಾಡಿದ್ದಾನೆ. ರೊಚ್ಚಿಗೆದ್ದ ಬಾಸ್ ಅನಾರೋಗ್ಯದ ರಜೆ ಬೇಕೆಂದರೆ ಕನಿಷ್ಠ 7 ದಿನ ಮೊದಲೇ ತಿಳಿಸಬೇಕು ಎಂದು ತಾಕೀತು ಮಾಡಿದ ಮೆಸೇಜ್ ಭಾರಿ ವೈರಲ್ ಆಗಿದೆ.
ಕಚೇರಿಯಲ್ಲಿ ರಜೆ ವಿಚಾರವಾಗಿ ರಂಪಾಟ, ಗದ್ದಲ, ಪಜೀತಿ ಸೇರಿದಂತೆ ಹಲವು ಘಟನೆಗಳು ನಡೆದಿದೆ. ಈ ಕುರಿತು ಹಲವು ವಿಡಿಯೋಗಳು, ಸಂದೇಶಗಳು ವೈರಲ್ ಆಗಿದೆ. ಇದೀಗ ಉದ್ಯೋಗಿಯೊಬ್ಬ ಅನಾರೋಗ್ಯದ ಕಾರಣ ತನಗೆ ಕಚೇರಿಗೆ ಬರಲು ಸಾಧ್ಯವಾಗುತ್ತಿಲ್ಲ, ಸಿಕ್ ಲೀವ್ ಹಾಕುತ್ತಿದ್ದೇನೆ ಎಂಬ ಸಂದೇಶ, ಬಾಸ್ ಪಿತ್ತ ನೆತ್ತಿಗೇರಿಸಿದೆ. ಉದ್ಯೋಗಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಬಾಸ್, ಸಿಕ್ ಲೀವ್ ತೆಗೆದುಕೊಳ್ಳವುದಾದರೆ ಕನಿಷ್ಠ 7 ದಿನ ಮೊದಲೇ ತಿಳಿಸಬೇಕು ಎಂದು ಗದರಿನದ್ದಾನೆ. ಸಂದೇಶ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ರೆಡಿಟ್‌ನಲ್ಲಿ ಈ ಸಂದೇಶ ಪೋಸ್ಟ್ ಮಾಡಲಾಗಿದೆ. ಆದರೆ ಭಾರಿ ವೈರಲ್ ಆದ ಬೆನ್ನಲ್ಲೇ ಈ ವಿಚಾರ ಬಾಸ್ ಕಿವಿಗೂ ಮುಟ್ಟಿದೆ. ನೆಟ್ಟಿಗರು ಬಾಸ್‌ಗೆ ಕ್ಲಾಸ್ ತೆಗೆದುಕೊಳ್ಳುತ್ತಿರುವ ಬೆನ್ನಲ್ಲೇ ಬಾಸ್ ಉದ್ಯೋಗಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೀಗಾಗಿ ಈ ವೈರಲ್ ಸಂದೇಶವನ್ನು ಡಿಲೀಟ್ ಮಾಡಲಾಗಿದೆ.
ಬಾಸ್ ಹಾಗೂ ಉದ್ಯೋಗಿ ನಡುವಿನ ವ್ಯಾಟ್ಸಾಪ್ ಸಂದೇಶ ವೈರಲ್ ಆಗಿದೆ. ಕಚೇರಿ ಸಮಯ ಆರಂಭಗೊಂಡಿದೆ. ಬೆಳಗ್ಗೆ 9.30ರ ವೇಳೆಗೆ ಉದ್ಯೋಗಿ ನೇರವಾಗಿ ಬಾಸ್‌ಗೆ ಮೆಸೇಜ್ ಮಾಡಿದ್ದಾನೆ. ನನ್ನ ಆರೋಗ್ಯ ಹದಗೆಟ್ಟಿದೆ. ಹೀಗಾಗಿ ನಾನು ಕಚೇರಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಮೆಸೇಜ್ ಮಾಡಿದ್ದಾನೆ. ಅರ್ಧ ಗಂಟೆ ಬಳಿಕ ಬಾಸ್ ರಿಪ್ಲೈ ಮಾಡಿದ್ದಾರೆ. ಹಾಗಾದರೆ ಸಿಕ್ ಲೀವ್ ತೆಗೆದುಕೊಳ್ಳುತ್ತಿಯಾ ಇಂದು ಎಂದು ಪ್ರಶ್ನಿಸಿದ್ದಾರೆ.
undefined
ನೌಕರಿ ಜೊತೆ ಹುಲ್ಲು ಬೆಳೆದರೆ ಸಾಕು, ಶೇ.100 ರಷ್ಟು ಟ್ಯಾಕ್ಸ್ ಉಳಿತಾಯ ಟಿಪ್ಸ್ ನೀಡಿದ ವೈರಲ್ ಸಿಎ!
ಹೌದು, ಸಿಕ್ ಲೀವ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಖಚಿತಪಡಿಸಿದ್ದಾನೆ. ಈ ಸಂದೇಶ ಬಾಸ್ ರೊಚ್ಚಿಗೆಬ್ಬಿಸಿದೆ. ಅನಾರೋಗ್ಯದ ಕಾರಣ ರಜೆ ಅಥವಾ ಕ್ಯಾಶ್ಯುಲ್ ಲೀವ್ ತೆಗೆದುಕೊಳ್ಳಲು ಕನಿಷ್ಠ 7 ದಿನ ಮೊದಲೇ ತಿಳಿಸಬೇಕು ಎಂದು ಬಾಸ್ ಮತ್ತೊಂದು ಸಂದೇಶ ಕಳುಹಿಸಿದ್ದಾರೆ. ಈ ಸ್ಕ್ರೀನ್ ಶಾಟ್‌ನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿತ್ತು.
ಈ ಪೋಸ್ಟ್ ಭಾರಿ ವೈರಲ್ ಆಗಿದೆ. ಹಲವು ತಮ್ಮ ಕಚೇರಿಗಳ ಅನುಭವ ಬಿಚ್ಚಿಟ್ಟಿದ್ದಾರೆ. ಇಷ್ಟೇ ಅಲ್ಲ ಕೆಲವರು ಸಲಹೆಗಳನ್ನು ನೀಡಿದ್ದಾರೆ. ಮುಂದಿನ ಸೋಮವಾರ ಜ್ವರ ಬರುವ ಸಾಧ್ಯತೆ ಇದೆ. ಹೀಗಾಗಿ ಸೋಮವಾರ ಹಾಗೂ ಮಂಗಳವಾರ ಸಿಕ್ ಲೀವ್ ನೀಡಬೇಕು ಎಂದು ಈಗಲೇ ಸಂದೇಶ ಕಳುಹಿಸಿಬಿಡಿ, 7 ದಿನಕ್ಕೆ ಮುಂಚಿತವಾಗಿ ಪ್ರಿಕಾಶನ್ ರೀತಿಯಲ್ಲಿ ಸಂದೇಶ ಅಥವಾ ಮೇಲ್ ಕಳುಹಿಸುತ್ತಲೇ ಇರಿ ಎಂದು ಸಲಹೆ ನೀಡಿದ್ದಾರೆ.
ಇದು ಬಹುತೇಕ ಕಚೇರಿಗಳಲ್ಲಿ ಸಾಮಾನ್ಯ. ಸಿಕ್ ಲೀವ್ ತೆಗೆದುಕೊಳ್ಳಲು ಕಚೇರಿ ಆರಂಭಕ್ಕೂ ಮುನ್ನವೇ ಅಂದರೆ ಬೆಳಗ್ಗೆ 8 ಗಂಟೆ ಮೊದಲು ತಿಳಿಸಬೇಕು ಎಂದು ಸಂದೇಶ ಮಾಡಿದ್ದರು. ಮತ್ತೆ ಕೆಲವರು, ಸೋಮವಾರ ಬಹುತೇಕರು ಈ ರೀತಿ ಸಿಕ್ ಲೀವ್ ತೆಗೆದುಕೊಳ್ಳುವುದು ಸಾಮಾನ್ಯ. ಹೀಗಾಗಿ ಎಚ್ಚರಿಸುವ ಅಗತ್ಯವಿದೆ ಎಂದು ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ದಿನಕ್ಕೆ 14 ಗಂಟೆ ಕೆಲಸ: ರಾಜ್ಯ ಸರ್ಕಾರ ಜಾರಿಗೆ ತರಲು ಚಿಂತಿಸಿದ ಹೊಸ ಬಿಲ್‌ಗೆ ಟೆಕ್ಕಿಗಳ ತೀವ್ರ ವಿರೋಧ