ಪೋಷಕರು ಸೇರಿ ಕೆಲ ಹಿರಿಯರು ಪಕ್ಕದಲ್ಲಿರುವಾಗಲೇ ಬೀದಿ ನಾಯಿಯೊಂದು ಏಕಾಏಕಿ ಪುಟ್ಟ ಮಗುವಿನ ಮೇಲೆ ದಾಳಿ ಮಾಡಿದೆ. ತಕ್ಷಣವೇ ಎಚ್ಚೆತ್ತ ಸಾಕು ನಾಯಿ ಮಗುವಿನ ರಕ್ಷಣೆಗೆ ಧಾವಿಸಿದೆ. ಪರಿಣಾಮ ಪುಟ್ಟ ಕಂದನ ಪ್ರಾಣ ಉಳಿದಿದೆ. ಮೈ ಜುಮ್ಮೆನಿಸುವ ದೃಶ್ಯ ಸೆರೆಯಾಗಿದೆ.
ನಿಯತ್ತು ತೋರುವ ಪ್ರಾಣಿ ನಾಯಿ ಬಿಟ್ಟರೆ ಮತ್ತೊಂದಿಲ್ಲ. ಒಂದು ಹೊತ್ತು ಅನ್ನ ಹಾಕಿದರೆ ನಾಯಿ ಯಾವತ್ತೂ ಮಾಲೀಕನ ರಕ್ಷಣೆಗೆ ಪ್ರಾಣದ ಹಂಗು ತೊರೆದು ಹೋರಾಡುತ್ತದೆ. ಇದೀಗ ಇದೇ ರೀತಿ ಮೈ ಜುಮ್ಮೆನಿಸುವ ಘಟನೆ ಒಂದು ಸೆರೆಯಾಗಿದೆ. ಪುಟ್ಟ ಮಗುವಿನ ಮೇಲೆ ಬೀದಿ ನಾಯಿಯೊಂದು ಏಕಾಏಕಿ ದಾಳಿ ಮಾಡಿದೆ. ಆದರೆ ಪಕ್ಕದಲ್ಲೇ ಇದ್ದ ನಾಯಿ ಮಗುವಿನ ರಕ್ಷಣೆಗೆ ಆಗಮಿಸಿ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ ಘಟನೆಗಳು ಪದೇ ಪದೇ ಮರುಕಳಿಸುತ್ತಿದೆ. ಇಬ್ಬರು ಮಹಿಳೆಯರು ತಮ್ಮ ಮಕ್ಕಳ ಜೊತೆ ಮಾತನಾಡುತ್ತಾ ಕುಳಿತಿದ್ದಾರೆ. ಮೂವರು ಪುಟ್ಟ ಮಕ್ಕಳು ಈ ವಿಡಿಯೋದಲ್ಲಿದ್ದಾರೆ. ಈ ಮಹಿಳೆಯರು ಹಾಗೂ ಮಕ್ಕಳ ಪಕ್ಕದಲ್ಲೇ ನಾಯಿಯೊಂದು ಕುಳಿತಿದೆ. ಇದು ಈ ಮಹಿಳೆಯರು ಸಾಕು ನಾಯಿ ಅಥವಾ ಬಿಸ್ಕೆಟ್ ಸೇರಿದಂತೆ ತಿನಿಸು ಹಾಕುತ್ತಿದ್ದ ಬೀದಿ ನಾಯಿಯೋ ಅನ್ನೋದು ಸ್ಪಷ್ಟವಿಲ್ಲ. ಇವರ ಪಕ್ಕದಲ್ಲೇ ಈ ನಾಯಿ ಕೂಡ ಆತ್ಮೀಯವಾಗಿ ಅತ್ತಿಂದಿತ್ತ ಓಡಾಡುತ್ತಿರುವ ದೃಶ್ಯವಿದೆ.
ಉಡುಪಿಯಲ್ಲಿ ಸ್ಕೂಟರ್‌ಗೆ ನಾಯಿ ಕಟ್ಟಿ ದರದರನೆ ಎಳೆದೊಯ್ದು ವಿಕೃತಿ, ಭಾರಿ ಆಕ್ರೋಶ!
ಇಬ್ಬರು ಮಹಿಳೆಯರು ಮಾತುಕತೆಯಲ್ಲಿ ಬ್ಯೂಸಿಯಾಗಿದ್ದಾರೆ. ಈ ವೇಳೆ ದೂರದಲ್ಲಿದ್ದ ಬೀದಿ ನಾಯಿಯೊಂದು ಪುಟ್ಟ ಮಗುವಿನ ಮೇಲೆ ದಾಳಿಗೆ ಹೊಂಚು ಹಾಕಿದೆ. ಈ ವೇಳೆ ಪಕ್ಕದಲ್ಲಿದ್ದ ನಾಯಿ ಎಚ್ಚೆತ್ತುಕೊಂಡಿದೆ. ನಾಯಿ ಎಚ್ಚೆತ್ತುಕೊಂಡ ತಕ್ಷಣ ದಾಳಿಗೆ ಮುಂದಾದ ಬೀದಿ ನಾಯಿ ಒಂದು ಕ್ಷಣ ಅಲ್ಲೆ ನಿಂತಿದೆ. ಹೀಗಾಗಿ ಪಕ್ಕದಲ್ಲಿದ್ದ ನಾಯಿ ಮತ್ತೆ ಬಂದು ತನ್ನ ಸ್ಥಾನದಲ್ಲಿ ಕುಳಿತಿದೆ.
ಆದರೆ ಹೊಂಚು ಹಾಕಿದ್ದ ಬೀದಿ ನಾಯಿ ಒಮ್ಮೆಲೆ ಪಟ್ಟ ಕಂದನ ಮೇಲೆ ದಾಳಿ ಮಾಡಿದೆ. ಮೊದಲ ಕಡಿತಕ್ಕೆ ಪುಟ್ಟ ಕಂದ ನೆಲಕ್ಕುರುಳಿದ್ದಾನೆ. ಮತ್ತೊಂದು ಕಡಿತಕ್ಕೂ ಮೊದಲೇ ಪಕ್ಕದಲ್ಲಿದ್ದ ನಾಯಿ ರಕ್ಷಣೆಗೆ ಧಾವಿಸಿದೆ. ಪ್ರತಿ ದಾಳಿ ನಡೆಸಿ ಬೀದಿ ನಾಯಿಯನ್ನು ಓಡಿಸಿದೆ. ಇದರಿಂದ ಪುಟ್ಟ ಕಂದ ಪ್ರಾಣಾಪಾಯದಿಂದ ಪಾರಾಗಿದೆ.
Power of Parle G 🔥 pic.twitter.com/EAmK2k4X9V
— Introvert //🙇🏻♂️ (@introvert_hu_ji)
ಇವೆಲ್ಲವು ಕ್ಷಣಾರ್ಧದಲ್ಲಿ ನಡೆದುಹೋಗಿದೆ. ಮಕ್ಕಳ ತಾಯಂದಿರು ಏನಾಗುತ್ತಿದೆ ಎಂದು ಅರಿತುಕೊಳ್ಳುವಷ್ಟರಲ್ಲಿ ಬೀದಿ ನಾಯಿ ದಾಳಿ ಮಾಡಿದೆ, ಇತ್ತ ಪಕ್ಕದಲ್ಲಿದ್ದ ನಾಯಿ ಮಗುವನ್ನು ರಕ್ಷಣೆ ಮಾಡಿಯೂ ಆಗಿದೆ. ಓಡೋಡಿ ಬಂದು ಮಗುವನ್ನು ಎತ್ತಿಕೊಂಡ ಪೋಷಕರು ಆರೈಕೆ ಮಾಡಿದ್ದಾರೆ. ಕಂದನಿಗೆ ನಾಯಿ ಕಚ್ಚಿದ ಗಾಯಗಳಾಗಿದೆ. ಆದರೆ ಪ್ರಾಣಾಪಾಯದಿಂದ ಪಾರಾಗಿದೆ. ಈ ಘಟನೆ ನಡೆದಿರುವ ಸ್ಥಳದ ಕುರಿತು ಖಚಿತತೆ ಇಲ್ಲ.
ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಆಕ್ರಮಣಕಾರಿ ಬೀದಿನಾಯಿ ದಾಳಿಯಿಂದ ಮಗುವನ್ನು ಮತ್ತೊಂದು ಬೀದಿ ನಾಯಿ ರಕ್ಷಿಸಿದೆ ಎಂದು ಕಮೆಂಟ್ ಮಾಡಿದ್ದಾರೆ. ಇದು ಬೀದಿ ನಾಯಿಗೆ ಪಾರ್ಲೆ ಜಿ ಬಿಸ್ಕೆಟ್ ಹಾಕಿದ ಪರಿಣಾಮ. ಆ ನಾಯಿ ನಿಮ್ಮ ರಕ್ಷಣೆಗೆ ಬಂದಿದೆ ಎಂದು ಕಮೆಂಟ್ ಮಾಡಿದ್ದಾರೆ.
ತನ್ನ ಆಹಾರವನ್ನು ಹಸಿವಿನಿಂದ ಬಂದ ಬೀದಿ ನಾಯಿಗೆ ಹಂಚಿದ ನಿರ್ಗತಿಕನ ಹೃದಯಸ್ಪರ್ಶಿ ವಿಡಿಯೋ!