
ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿದ ದಿನ ಮನೆಯಲ್ಲಿ ಪೂಜೆ ಮಾಡಿ ಸಂಭ್ರಮಿಸಿದ ಮುಸ್ಲಿಂ ಮಹಿಳೆಯರಿಗೆ ಆ್ಯಸಿಡ್ ದಾಳಿ ನಡೆಸುವ ಹಾಗೂ ಜೀವ ಬೆದರಿಕೆ ಕರೆಗಳು ಬಂದಿವೆ.
ಅಲಿಘರ್‌ನಲ್ಲಿ ಬಿಜೆಪಿ ನಾಯಕಿಯರಾದ ರೂಬಿ ಆಸಿಫ್ ಖಾನ್ ಹಾಗೂ ನರ್ಗೀಸ್ ಮೆಹಬೂಬ್ ಅಲಿ ಪೂಜೆ ಸಲ್ಲಿಸಿದ್ದರು. ಇವರ ವಿರುದ್ಧ ದೈಹಿಕ ಆಕ್ರಮಣ ಮತ್ತು ಇಸ್ಲಾಂನಿಂದ ಬಹಿಷ್ಕರಿಸುವ ಬೆದರಿಕೆ ಬಂದಿದೆ.
ಕಲ್ಲುಗಳಿಂದಲೇ ನಿರ್ಮಾಣ: 1 ಸಾವಿರ ವರ್ಷ ಬಲಿಷ್ಠವಾಗಿರುತ್ತೆ ರಾಮ ಮಂದಿರ
ಅಲಿಘರ್‌ನ ಶಾಹ್ ಜಮಲ್ ಪ್ರದೇಶದ ಮನೆಯಲ್ಲಿ ಮುಸ್ಲಿಂ ಮಹಿಳೆಯರು ಮನೆಯಲ್ಲಿ ಪೂಜೆ ಸಲ್ಲಿಸಿದ ವಿಡಿಯೋ ವೈರಲ್ ಆಗಿದ್ದು, ಮುಸ್ಲಿಂ ಮುಖಂಡರಿಂದ ತೀವ್ರ ಖಂಡನೆ ವ್ಯಕ್ತವಾಗಿತ್ತು.
ರಾಮನ ಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿದ ಮಹತ್ವದ ದಿನವನ್ನು ಸಂಭ್ರಮಿಸಲು ಪೂಜೆ ಮಾಡಿದೆವು. ಹಿಂದು-ಮುಸ್ಲಿಂ ಮಧ್ಯೆ ಇದ್ದ ಬಹಳಷ್ಟು ಹಳೆಯ ಜಗಳವನ್ನುಕೊನೆ ಮಾಡಿದ ಸಂದರ್ಭವೂ ಹೌದು ಎಂದು ರೂಬಿ ಆಸಿಫ್ ಹೇಳಿದ್ದರು.
ಅಯೋಧ್ಯೆ ಅಖಂಡ ಜ್ಯೋತಿಗೆ ನಮ್ಮ ರಾಜ್ಯದ ನಂದಿನಿ ತುಪ್ಪ
ಮಹಿಳಾ ಬಿಜೆಪಿ ನಾಯಕಿಯರು ಹಾಗೂ ಕಾರ್ಯಕರ್ತರು ರಾಮ್‌ಲಲ್ಲಾ ಹಾಗೂ ಪ್ರಧಾನಿಯವರಿಗೆ ರಾಖಿಯನ್ನೂ ಕಳುಹಿಸಿದ್ದರು. ರಾಮ ಮಂದಿರಕ್ಕಾಗಿ 5100 ರೂಪಾಯಿಯನ್ನು ಕಳುಹಿಸಲಾಗಿತ್ತು.
ಹಳೆಯ ಅಲಿಘರ್ ನಗರದಲ್ಲಿ ಪೂಜೆ ಮಾಡಿದ ಮುಸ್ಲಿಂ ಮಹಿಳೆಯನ್ನು ಇಸ್ಲಾಂನಿಂದ ನಿಷೇಧಿಸುವ ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು. ಮಹಿಳೆಯರು ಪೂಜೆ ಮಾಡುವ ಪೋಸ್ಟರ್ ಚಿತ್ರವನ್ನು ಎಲ್ಲೆಡೆ ಹಂಚಲಾಗಿದೆ. ಸಮುದಾಯದ ಜನರನ್ನು ತಮ್ಮ ವಿರುದ್ಧ ಎತ್ತಿಕಟ್ಟಲು ಈ ರೀತಿ ಮಾಡಲಾಗಿದೆ ಎಂದು ರೂಬಿ ಹಾಗೂ ನರ್ಗೀಸ್ ತಿಳಿಸಿದ್ದಾರೆ.
ರಾಮಮಂದಿರಕ್ಕಾಗಿ ಹಿಂದು, ಮುಸ್ಲಿಮರಿಂದ 2100 ಕೆ.ಜಿ ತೂಕದ ಹಿತ್ತಾಳೆ ಗಂಟೆ!
ಬಿಜೆಪಿಗಾಗಿ ಕೆಲಸ ಮಾಡುತ್ತಿರುವುದಕ್ಕಾಗಿ ಹಾಗೂ ಹಿಂದೂ ಪೂಜೆ ಮಾಡಿದಕ್ಕಾಗಿ ಆ್ಯಸಿಡ್ ಎರಚುವುದಾಗಿಯೂ ಬೆದರಿಸಲಾಗಿದೆ ಎಂದಿದ್ದಾರೆ. ಈ ಸಂಬಂಧ ಇಂಡಿಯಾ ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ