
ನವದೆಹಲಿ(ಆ.20): ಅಯೋಧ್ಯೆ ರಾಮ ಮಂದಿರಕ್ಕೆ ಇತ್ತೇಷೆಗಷ್ಟೇ ಶಿಲನ್ಯಾಸ ನೆರವೇರಿದೆ. ಅದ್ಧೂರಿಯಾಗಿ ಸಂಭ್ರಮದಲ್ಲಿ ನಡೆದ ರಾಮ ಮಂದಿರ ಶಿಲಾನ್ಯಾಸದ ನಂತರ ಕೆಲಸವೂ ಬಿರುಸಿನಿಂದ ಸಾಗಿದೆ.
ಅಯೋಧ್ಯೆಯ ರಾಮ ಮಂದಿರವನ್ನು ಕಲ್ಲುಗಳನ್ನು ಮಾತ್ರ ಉಪಯೋಗಿಸಿ ಕಟ್ಟಲಾಗುತ್ತದೆ. ಇದು ಸುಮಾರು 1 ಸಾವಿರ ವರ್ಷಗಳ ವರೆಗೆ ಗಟ್ಟಿಯಾಗಿ ನಿಲ್ಲಲಿದೆ ಎಂದು ಶ್ರೀರಾಮ ಮಂದಿರ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.
ರಾಮಮಂದಿರಕ್ಕಾಗಿ ಹಿಂದು, ಮುಸ್ಲಿಮರಿಂದ 2100 ಕೆ.ಜಿ ತೂಕದ ಹಿತ್ತಾಳೆ ಗಂಟೆ!
ವಿಶ್ವ ಹಿಂದೂ ಪರಿಷತ್‌ನಲ್ಲಿ ಹಿರಿಯ ಕಾರ್ಯಕಾರಿಯಾಗಿರುವ ಚಂಪತ್ ಈ ಬಗ್ಗೆ ಮಾತನಾಡಿ, ದೇಶದ ಐಐಟಿ ಚೆನ್ನೈ, ಸೆಂಟ್ರಲ್ ಬ್ಯುಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ಗಳಿಂದ ಪ್ರತಿಭಾನ್ವಿತರನ್ನು ಮಂದಿರ ನಿರ್ಮಾಣದಲ್ಲಿ ಸೇರಿಸಿಕೊಳ್ಳಲಾಗುತ್ತದೆ.
ಲಾರ್ಸೆನ್ ಮತ್ತು ಟೌಬ್ರೊ ದೇವಾಲಯದ ನಿರ್ಮಾಣವನ್ನು ನೋಡಿಕೊಳ್ಳಲಿದ್ದು, ಐಐಟಿ ಚೆನ್ನೈ ಮಣ್ಣಿನ ಸಾಮರ್ಥ್ಯ ಮತ್ತು ಗುಣಮಟ್ಟವನ್ನು ಪರಿಶೀಲಿಸಲಿದೆ. ಕಟ್ಟಡಕ್ಕೆ ಭೂಕಂಪಗಳಿಂದಲೂ ಹಾನಿಯಾಗದಿರುವ ನಿಟ್ಟಿನಲ್ಲಿ ಸೆಂಟ್ರಲ್ ಬ್ಯುಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಕೆಲಸ ಮಾಡಲಿದೆ ಎಂದಿದ್ದಾರೆ.
ಅಯೋಧ್ಯೆ ಅಖಂಡ ಜ್ಯೋತಿಗೆ ನಮ್ಮ ರಾಜ್ಯದ ನಂದಿನಿ ತುಪ್ಪ
ಮಂದಿರ ನಿರ್ಮಾಣಕ್ಕೆ 10 ಸಾವಿರ ತಾಮ್ರದ ರಾಡ್‌ಗಳ ಅಗತ್ಯವಿದೆ. ಮಂದಿರ ನಿರ್ಮಾಣದ ಭಾಗವಾಗಲು ಬಯಸುವ ಜನರು ತಾಮ್ರ ದಾನ ಮಾಡಬಹುದು. ಬರೀ ಕಲ್ಲುಗಳನ್ನು ಉಪಯೋಗಿಸಿ 1000 ವರ್ಷ ಕಟ್ಟಡ ಬಲಿಷ್ಠವಾಗಿ ಉಳಿಯುವಂತೆ ಮಂದಿರ ನಿರ್ಮಿಸಲಾಗುತ್ತದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ