ಮದ್ಯ ಖರೀದಿಗೆ ಕೋವಿಡ್ ಲಸಿಕೆ ಸರ್ಟಿಫಿಕೇಟ್ ಕಡ್ಡಾಯ; ಅಚ್ಚರಿ ತಂದ ನೋಟಿಸ್!

By Suvarna NewsFirst Published May 31, 2021, 3:28 PM IST
Highlights
  • ಕೊರೋನಾ ಲಸಿಕೆ ಹಾಕಿಸಿದ ಸರ್ಟಿಫಿಕೇಟ್ ಇದ್ದವರಿಗೆ ಮಾತ್ರ ಮದ್ಯ ಖರೀದಿಗೆ ಅವಕಾಶ
  • ನೋಟಿಸ್ ನೋಡಿ ಬೆಚ್ಚಿ ಬಿದ್ದ ಕುಡಕುರು ಲಸಿಕೆಗಾಗಿ ದುಂಬಾಲು
  • ಲಸಿಕೆಯೂ ಸಿಗದೇ, ಇತ್ತ ಮದ್ಯವೂ ಸಿಗದ ಕುಡುಕರ ಆಕ್ರೋಶ 

ಉತ್ತರ ಪ್ರದೇಶ(ಮೇ.31): ಈ ಬಾರಿಯ ಲಾಕ್‌ಡೌನ್‌ನಲ್ಲಿ ಕುಡುಕರಿಗೆ ಯಾವುದೇ ಸಮಸ್ಯೆಯಾಗಿಲ್ಲ, ಯಾವುದೇ ಆತಂಕವೂ ಎದುರಾಗಿಲ್ಲ. ಕಾರಣ ಅಗತ್ಯ ವಸ್ತುಗಳ ಸೇವೆಯಡಿಯಲ್ಲಿ ಮದ್ಯದ ಅಂಗಡಿಗಳು ಕೂಡ ನಿಗದಿತ ಸಮಯದಲ್ಲಿ ತೆರೆಯಲು ಅವಕಾಶವಿದೆ. ಹೀಗಾಗಿ ನೈಂಟಿಗೆ ಯಾವುದೇ ಸಮಸ್ಯೆಯಾಗಿಲ್ಲ. ಇತ್ತ ಸರ್ಕಾರದ ಆದಾಯಕ್ಕೆ ತೀವ್ರ ಹೊಡೆತ ಬಿದ್ದಿಲ್ಲ. ಸುಗಮ ಹಾಗೂ ಸರಾಗವಾಗಿ ಸಾಗುತ್ತಿದ್ದ ಮದ್ಯದ ಖರೀದಿ,ಮಾರಾಟಕ್ಕೆ ಒಂದು ನೊಟೀಸ್ ಇನ್ನಿಲ್ಲದ ತಲೆನೋವು ತಂದಿಟ್ಟಿದೆ.

ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ಮದ್ಯ ಸೇವನೆ ಮಾಡಬಹುದೇ? ಇಲ್ಲಿದೆ ಉತ್ತರ.

ಉತ್ತರ ಪ್ರದೇಶದ ಇಟವಾ ಜಿಲ್ಲೆಯಲ್ಲಿ ಎಲ್ಲಾ ಮದ್ಯದ ಅಂಗಡಿಗಳ ಮುಂದೆ ಹಾಕಿರುವ  ನೋಟಿಸ್ ಕುಡುಕರ ಆಕ್ರೋಶ ಹೆಚ್ಚಿಸಿದೆ.  ಕೊರೋನಾ ಲಸಿಕೆ ಸರ್ಟಿಫಿಕೇಟ್ ಇದ್ದವರಿಗೆ ಮಾತ್ರ ಮದ್ಯ ಖರೀದಿಗೆ ಅವಕಾಶ ಎಂದು ಜಿಲ್ಲೆಯ ಎಲ್ಲಾ ಮದ್ಯದಂಗಡಿಗಳ ಮುಂದೆ ನೋಟಿಸ್ ಅಂಟಿಸಿದ್ದಾರೆ. 

ಇಟವಾ ಜಿಲ್ಲೆಯ ಹಲವರು ನಾವು ಪ್ರತಿ ದಿನ ಮದ್ಯ ಕುಡಿಯುತ್ತಿದ್ದೇವೆ. ಹೀಗಾಗಿ ನಮಗೆ ಕೊರೋನಾ ಬರುವ ಮಾತೆಲ್ಲಿ? ಲಸಿಕೆ ಹಾಕಲು ಕೆಲ ದಿನಗಳ ಕಾಲ ಮದ್ಯ ನಿಲ್ಲಿಸಬೇಕು. ಹೀಗೆ ಹಲವು ಕಾರಣಗಳನ್ನು ಕುಡುಕರು ನೀಡಿದ್ದರು. ಆದರೆ ಮದ್ಯ ಅಂಗಡಿ ಮುಂದೆ ಈ ನೋಟಿಸ್ ನೋಡಿದ ಕುಡುಕರು  ಇದೀಗ ಲಸಿಕೆಗಾಗಿ ಅಲೆದಾಡುತ್ತಿದ್ದಾರೆ.

ವಿರೋಧದ ನಡುವೆ ಆನ್‌ಲೈನ್ ಬುಕಿಂಗ್, ಮನೆಬಾಗಿಲಿಗೆ ಮದ್ಯ ಸೇವೆ ಆರಂಭ!

ಇಟವಾ ಉಪ ಜಿಲ್ಲಾಧಿಕಾರಿ ಮದ್ಯದ ಅಂಗಡಿಗಳ ಮಾಲೀಕರಿಗೆ ಈ ನೋಟಿಸ್ ನೀಡಿದ್ದಾರೆ ಅನ್ನೋ ಮಾತುಗಳು ಹರಿದಾಡುತ್ತಿದೆ. ಇತ್ತ ಈ ನೋಟಿಸ್ ವೈರಲ್ ಆಗುತ್ತಿದ್ದಂತೆ ಈ ಕುರಿತು ಇಟವಾ ಉಪ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಈ ರೀತಿ ಯಾವುದೇ ನೊಟೀಸ್ ನೀಡಿಲ್ಲ. ಮದ್ಯದ ಅಂಗಡಿಗೆ ಬರವು ಖರೀದಿದಾರರನ್ನು ಲಸಿಕೆ ಪಡೆದುಕೊಳ್ಳುವಂತೆ ಪ್ರೇರಿಪಿಸಲು ಸೂಚನೆ ನೀಡಿದ್ದೇವೆ. ಆದರೆ ಅಧಿಕತ ನೋಟಿಸ್ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
 

click me!