* ತಂದೆಯನ್ನೂ ಕೂರಿಸಿಕೊಂಡು ಸೈಕಲ್ ಸವಾರಿ ಮಾಡಿದ್ದ ಬಾಲಕಿಗೆ ಆಘಾತ
* ಹೃದಯಾಘಾತದಿಂದ ಬಾಲಕಿ ಜ್ಯೋತಿ ತಂದೆ ನಿಧನ
* ಕಳೆದ ವರ್ಷದ ಲಾಕ್ ಡೌನ್ ನಲ್ಲಿ ಸಾಹಸ ಮಾಡಿದ್ದರು
ಪಾಟ್ನಾ(ಮೇ 31) ಕಳೆ ವರ್ಷ ಲಾಕ್ ಡೌನ್ ನಲ್ಲಿ ಗಾಯಾಳು ತಂದೆ ಮೋಹನ್ ಪಾಸ್ವಾನ್ ಅವರನ್ನು ಸೈಕಲ್ ನಲ್ಲಿ ಕೂರಿಸಿಕೊಂಡು 200 ಕಿ.ಮೀ ಕ್ರಮಿಸಿದ್ದ ಬಾಲಕಿಗೆ ಈ ವರ್ಷ ಆಘಾತ. ಬಾಲಕಿ ತಂದೆಯನ್ನು ಕಳೆದುಕೊಂಡಿದ್ದಾರೆ.
ಬಾಲಕಿ ಜ್ಯೋತಿ ಕುಮಾರಿ ಪಾಸ್ವಾನ್ ತಂದೆ ನಿಧನರಾಗಿದ್ದಾರೆ. ಸಿರ್ಹುಲ್ಲಿ ಗ್ರಾಮದಲ್ಲಿ ಕೊನೆ ಉಸಿರು ಎಳೆದಿದ್ದು ನೆರವು ನೀಡಲು ತಂಡ ಕಳಿಸಲಾಗಿದೆ ಎಂದು ಸಿಂಗ್‌ಬರಾ ಬ್ಲಾಕ್‌ನ ಅಧಿಕಾರಿಗಳು ತಿಳಿಸಿದ್ದಾರೆ.
undefined
ಸಾಹಸ ಮೆರೆದಿದ್ದ ಬಾಲಕಿ; ಅನ್ನ-ಆಹಾರವಿಲ್ಲದೇ ಸಂಕಷ್ಟದಲ್ಲಿದ್ದ ತಂದೆಯನ್ನು ಕಾಪಾಡುವ ನಿಟ್ಟಿನಲ್ಲಿ 15 ವರ್ಷದ ಬಾಲಕಿ ಜ್ಯೋತಿ ತಂದೆಯನ್ನು ಕೂರಿಸಿಕೊಂಡು ಗುಡಗಾಂವ್‌ನಿಂದ 1200 ಕಿ.ಮೀ ದೂರದ ಬಿಹಾರದ ತಮ್ಮ ತವರಿಗೆ 10 ದಿನಗಳ ಕಾಲ ಸೈಕಲ್ ತುಳಿದುಕೊಂಡೇ ತೆರಳಿದ್ದಳು. ಇದಾದ ನಂತರ ಬಾಲಕಿನ್ನು ರಾಷ್ಟ್ರೀಯ ಸೈಕ್ಲಿಂಗ್ ಅಸೋಸಿಯೇಷನ್ ತರಬೇತಿಗೆ ಬರಲು ತಿಳಿಸಿತ್ತು.
ಬಿಹಾರ ಮೂಲದ ಮೋಹನ್ ಪಾಸ್ವಾನ್ 20 ವರ್ಷದಿಂದ ಗುಡ್‌ಗಾಂವ್‌ನಲ್ಲಿ ರಿಕ್ಷಾ ಓಡಿಸುತ್ತಿದ್ದರು. 2020ರ ಜ.26ರಂದು ಅವರಿಗೆ ಅಪಘಾತವಾಗಿ, ಕಾಲಿಗೆ ಏಟು ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಅವರ ಪತ್ನಿ ಪೂಲೋ ದೇವಿ ಮತ್ತು ಪುತ್ರಿ ಜ್ಯೋತಿ ಜ.31ರಂದು ಗುಡ್‌ಗಾಂವ್‌ಗೆ ಆಗಮಿಸಿದ್ದರು. ಅಲ್ಲಿ ಪತಿಗೆ ಚಿಕಿತ್ಸೆ ಕೊಡಿಸಿದ ಬಳಿಕ ಪೂಲೋ ದೇವಿ, ಮಗಳನ್ನು ಪತಿಯ ಆರೈಕೆಗೆ ಬಿಟ್ಟು ತಾನು ಅಂಗನವಾಡಿ ಕೆಲಸಕ್ಕೆಂದು ಬಿಹಾರಕ್ಕೆ ಮರಳಿದ್ದರು. ಈ ಸಂದರ್ಭದಲ್ಲಿ ಲಾಕ್ ಡೌನ್ ಘೋಷಣೆಯಾಗಿತ್ತು.
ಈ ಸಂದರ್ಭದಲ್ಲಿ ಗಟ್ಟಿ ನಿಲುವು ತಳೆದ ಜ್ಯೋತಿ, ಗಾಯಾಳು ತಂದೆಯನ್ನು ಸೈಕಲ್‌ನಲ್ಲಿ ಕೂರಿಸಿಕೊಂಡು ತವರಿಗೆ ಪ್ರಯಾಣಿಸುವ ನಿರ್ಧಾರ ಕೈಗೊಂಡಳು. ಒಂದಿಷ್ಟು ಆಹಾರ, ನೀರು, ಬಟ್ಟೆ ಇಟ್ಟುಕೊಂಡ ಜ್ಯೋತಿ, ತಂದೆಯನ್ನು ಹಿಂದೆ ಕೂರಿಸಿಕೊಂಡು ಮೇ 7ರಂದು ಗುಡಗಾಂವ್‌ನಿಂದ ಪ್ರಯಾಣ ಆರಂಭಿಸಿದಳು. ಪ್ರಯಾಣದ ವೇಳೆ ಅಲ್ಲಲ್ಲಿ ವಿಶ್ರಾಂತಿ ಪಡೆದು, ಅವರಿವರು ನೀಡಿದ ಆಹಾರ ಸೇವಿಸಿಕೊಂಡೇ 10 ದಿನಗಳಲ್ಲಿ ಅಂದರೆ ಕಳೆದ ವರ್ಷ ಮೇ 17 ರಂದು ಬಿಹಾರದ ತವರೂರಿಗೆ ಆಗಮಿಸಿದ್ದಳು. ನಡುವೆ ಸ್ವಲ್ಪ ದೂರದವರೆಗೆ ಲಾರಿ ಚಾಲಕರೊಬ್ಬರು, ನಮ್ಮನ್ನು ಹತ್ತಿಕೊಂಡು ಕರೆದೊಯ್ದಿದ್ದು ಬಿಟ್ಟರೆ ಉಳಿದೆಲ್ಲಾ ದಾರಿಯನ್ನು ತಾವು ಸೈಕಲ್‌ನಲ್ಲೇ ಕ್ರಮಿಸಿದ್ದಾಗಿ ಜ್ಯೋತಿ ಹೇಳಿದ್ದರು.
ಜ್ಯೋತಿ ಕುಮಾರಿ ಅವರ ತಮ್ಮ ಜೀವನದ ಕತೆ ಆಧಾರಿತ ಆತ್ಮನಿರ್ಭರ್ (ಸ್ವಾವಲಂಬಿ) ಎಂಬ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ.