ಪಂಜಾಬ್‌ನಲ್ಲಿ ಅಕಾಲಿ, ಬಿಎಸ್ಪಿ ದೋಸ್ತಿ!

By Suvarna NewsFirst Published Jun 13, 2021, 8:49 AM IST
Highlights

* ವಿಧಾನಸಭೆ ಚುನಾವಣೆಗೂ ಮುನ್ನ ಮಹತ್ತರ ಬೆಳವಣಿಗೆ

* 25 ವರ್ಷ ಬಳಿಕ ಎರಡೂ ಪಕ್ಷಗಳ ನಡುವೆ ಹೊಂದಾಣಿಕೆ

* ಅಕಾಲಿ 97ರಲ್ಲಿ, ಬಿಎಸ್‌ಪಿ 20ರಲ್ಲಿ ಸ್ಪರ್ಧೆ

* ಕಳೆದ ವರ್ಷವಷ್ಟೇ ಎನ್‌ಡಿಎಗೆ ಗುಡ್‌ಬೈ ಹೇಳಿದ್ದ ಅಕಾಲಿ

ಚಂಡೀಗಢ(ಜೂ.13): ಮುಂದಿನ ವರ್ಷ ನಡೆಯಲಿರುವ ಪಂಜಾಬ್‌ ವಿಧಾನಸಭೆ ಚುನಾವಣೆಗೂ ಮುನ್ನ ಮಹತ್ತರ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಕೃಷಿ ಮಸೂದೆಗಳನ್ನು ವಿರೋಧಿಸಿ ಕಳೆದ ವರ್ಷವಷ್ಟೆಬಿಜೆಪಿ ನೇತೃತ್ವದ ಎನ್‌ಡಿಎ ಕೂಟದಿಂದ ಹೊರ ನಡೆದಿದ್ದ ಪಂಜಾಬ್‌ನ ಪ್ರಭಾವಿ ರಾಜಕೀಯ ಪಕ್ಷ ಅಕಾಲಿ ದಳ ಇದೀಗ ಮಾಯಾವತಿ ನೇತೃತ್ವದ ಬಿಎಸ್ಪಿ ಜತೆ ಮೈತ್ರಿ ಮಾಡಿಕೊಂಡಿದೆ.

ಖಾಸಗಿ ಆಸ್ಪತ್ರೆಗೆ 1.29 ಕೋಟಿ ಡೋಸ್, ಬಳಕೆ ಮಾಡಿದ್ದು 22 ಲಕ್ಷ ಮಾತ್ರ!

1996ರ ಲೋಕಸಭೆ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳು ಸ್ಥಾನ ಹೊಂದಾಣಿಕೆ ಮಾಡಿಕೊಂಡು ಪಂಜಾಬ್‌ನ 13 ಲೋಕಸಭಾ ಕ್ಷೇತ್ರಗಳ ಪೈಕಿ 11 ಅನ್ನು ಬಾಚಿಕೊಂಡಿದ್ದವು. 25 ವರ್ಷಗಳ ಬಳಿಕ ಎರಡೂ ಪಕ್ಷಗಳ ನಡುವೆ ಮೈತ್ರಿ ಏರ್ಪಟ್ಟಿದೆ. ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳ ಪೈಕಿ 20ರಲ್ಲಿ ಬಿಎಸ್ಪಿ ಹಾಗೂ 97ರಲ್ಲಿ ಅಕಾಲಿದಳ ಸ್ಪರ್ಧೆ ಮಾಡಲಿವೆ. ಗಮನಾರ್ಹವೆಂದರೆ, ದಶಕಗಳ ಕಾಲ ಬಿಜೆಪಿ ಜತೆ ದೋಸ್ತಿ ಹೊಂದಿದ್ದ ಅಕಾಲಿ ದಳ ಆ ಪಕ್ಷಕ್ಕೆ 23 ವಿಧಾನಸಭಾ ಕ್ಷೇತ್ರಗಳನ್ನು ನೀಡುತ್ತಿತ್ತು. ಈಗ ಅದಕ್ಕಿಂತ ಕಡಿಮೆ ಕ್ಷೇತ್ರಗಳನ್ನು ಬಿಎಸ್ಪಿಗೆ ಬಿಟ್ಟುಕೊಟ್ಟಿದೆ.

ಒನ್‌ಪ್ಲಸ್ ನಾರ್ಡ್ ಸಿಇ 5ಜಿ ಬಿಡುಗಡೆ, ಬೆಲೆ 22,999 ರೂ.ನಿಂದ ಆರಂಭ

ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಸತೀಶ್‌ ಚಂದ್ರ ಮಿಶ್ರಾ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮೈತ್ರಿ ವಿಷಯ ಘೋಷಿಸಿದ ಅಕಾಲಿದಳದ ಮುಖ್ಯಸ್ಥ ಸುಖಬೀರ್‌ ಬಾದಲ್‌, ಪಂಜಾಬ್‌ ರಾಜಕಾರಣದಲ್ಲಿ ಇಂದು ಹೊಸ ದಿನ. ಹೊಸ ತಿರುವು. 2022ರ ವಿಧಾನಸಭೆ ಹಾಗೂ ಭವಿಷ್ಯದ ಎಲ್ಲ ಚುನಾವಣೆಗಳನ್ನೂ ಜಂಟಿಯಾಗಿಯೇ ಎದುರಿಸುತ್ತೇವೆ. ನಿಷ್ಕಿ್ರಯ ಕಾಂಗ್ರೆಸ್‌ ಅನ್ನು ಅಧಿಕಾರದಿಂದ ಕಿತ್ತೊಗೆದು ಗದ್ದುಗೆಗೆ ಏರುತ್ತೇವೆ ಎಂದು ಹೇಳಿದರು.

click me!