ಕೋವಿಡ್‌ ಚಿಕಿತ್ಸೆ, ಲಸಿಕೆಗೆ ಪೇಟೆಂಟ್‌ ಬೇಡ: ಮೋದಿ

By Kannadaprabha News  |  First Published Jun 13, 2021, 8:39 AM IST

* ಕೋವಿಡ್‌ ಚಿಕಿತ್ಸೆ, ಲಸಿಕೆಗೆ ಪೇಟೆಂಟ್‌ ಬೇಡ: ಮೋದಿ

* ಭಾರತದ ಗೊತ್ತುವಳಿ ಬೆಂಬಲಿಸಿ: ಜಿ-7ಗೆ ಕರೆ

* ಒಂದು ಭೂಮಿ, ಒಂದು ಆರೋಗ್ಯ: ವಿಶ್ವಕ್ಕೆ ‘ಮೋದಿ ಮಂತ್ರ’


ನವದೆಹಲಿ(ಜೂ.13): ಕೊರೋನಾ ಸಂಬಂಧೀ ತಂತ್ರಜ್ಞಾನದ (ಲಸಿಕೆ, ಚಿಕಿತ್ಸೆ ಸೇರಿದಂತೆ) ಮೇಲೆ ಬೌದ್ಧಿಕ ಹಕ್ಕು ಹೊಂದುವುದನ್ನು ವಿರೋಧಿಸಿ ಭಾರತವು ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಮಂಡಿಸಿದ ಗೊತ್ತುವಳಿ ಬೆಂಬಲಿಸಬೇಕು ಎಂದು ಜಿ-7 ದೇಶ ಪ್ರಧಾನಿ ನರೇಂದ್ರ ಮೋದಿ ಕೋರಿದ್ದಾರೆ. ಅಲ್ಲದೆ, ‘ಒಂದು ಭೂಮಿ-ಒಂದು ಆರೋಗ್ಯ’ ಇದು ನಮ್ಮ ಮಂತ್ರವಾಗಬೇಕು ಎಂದು ಕರೆ ನೀಡಿದ್ದಾರೆ.

ಕೇಂದ್ರ ಸಚಿವ ಸಂಪುಟಕ್ಕೆ ಜ್ಯೋತಿರಾದಿತ್ಯ ಸಿಂಧಿಯಾ ಎಂಟ್ರಿ?

Latest Videos

undefined

ಜಿ-7 ದೇಶಗಳ ಶೃಂಗಸಭೆಯಲ್ಲಿ ಅತಿಥಿ ರಾಷ್ಟ್ರವಾಗಿ ಭಾರತಕ್ಕೆ ಬಂದಿದ್ದ ಆಹ್ವಾನ ಮನ್ನಿಸಿ ವರ್ಚುವಲ್‌ ಭಾಷಣ ಮಾಡಿದ ಮೋದಿ, ‘ಜಗತ್ತಿನ ಆರೋಗ್ಯ ಸುಧಾರಣೆ ಆಗಬೇಕು ಹಾಗೂ ಮುಂಬರುವ ಪಿಡುಗುಗಳು ದೂರ ಆಗಬೇಕು ಎಂದರೆ ಎಲ್ಲ ದೇಶಗಳ ಸಂಘಟಿತ ಪ್ರಯತ್ನ ಇರಬೇಕು.

ಖಾಸಗಿ ಆಸ್ಪತ್ರೆಗೆ 1.29 ಕೋಟಿ ಡೋಸ್, ಬಳಕೆ ಮಾಡಿದ್ದು 22 ಲಕ್ಷ ಮಾತ್ರ!

ಈ ನಿಟ್ಟಿನಲ್ಲಿ ಭಾರತಕ್ಕೆ ಇತ್ತೀಚಿನ ಕೊರೋನಾದ 2ನೇ ಅಲೆಯಲ್ಲಿ ಜಿ-7 ನೀಡಿದ ಬೆಂಬಲವೇ ಸಾಕ್ಷಿ. ಒಂದು ಭೂಮಿ-ಒಂದು ಆರೋಗ್ಯ ಎಂಬ ಸಂದೇಶವನ್ನು ಇಂದಿನ ಸಭೆ ನೀಡಬೇಕು’ ಎಂದು ಪ್ರಶಂಸಿಸಿದರು.

click me!