
ನವದೆಹಲಿ(ಜು.07) ತಂಟೆ, ತಕರಾರು ಮಾಡಿಕೊಂಡು ಭಾರತದ ಗಡಿಯೊಳಕ್ಕೆ ಬಂದಿದ್ದ ಚೀನಾ ಹಿಂದಕ್ಕೆ ಸರಿದು ಮನೆ ಸೇರಿಕೊಂಡಿದ್ದು ಯಾಕೆ? ಎಂಬುದಕ್ಕೆ ಉತ್ತರ ಸಿಕ್ಕಿದೆ. ಇದಕ್ಕೆಲ್ಲ ಕಾರಣ ಭದ್ರತಾ ಸಲಹೆಗಾರ ಅಜಿತ್ ದೋವೆಲ್.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ನಡುವೆ ನಡೆದ ದೂರವಾಣಿ ಮಾತುಕತೆ ನಂತರ ಚೀನಾ ಹಿಂದೆ ಸರಿದಿದೆ ಎನ್ನುವುದು ಬಹಿರಂಗವಾಗಿದೆ.
ಭಾನುವಾರ ಬೆಳಗ್ಗೆ 8. 45 ರ ಸುಮಾರಿಗೆ ಭಾರತದ ಸೇನಾ ಮುಖ್ಯಸ್ಥ ಎಂಎಂ ನರವಾನೆ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರಿಗೆ ಕೆರೆ ಮಾಡಿ ವಿವರ ನೀಡಿದ್ದಾರೆ. ಇದಾದ ಮೇಲೆ ಎರಡು ದೇಶಗಳ ರಾಯಭಾರಿಗಳು ಸಂಜೆ ಮಾತನಾಡುವುದು ಎಂದು ತೀರ್ಮಾನ ಮಾಡಲಾಗಿದೆ. ತುರ್ತಾಗಿ ಭಾರತದ ಭದ್ರತಾ ಸಲಹೆಗಾರ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ನಡುವಿನ ಮಾತುಕತೆ ಫಿಕ್ಸ್ ಆಗಿದೆ.
ಮೋದಿ ಲಡಾಖ್ ಭೇಟಿಯ ಹಿಂದಿನ ಸೂತ್ರಧಾರ ದೋವಲ್
ಸಂಜೆ ಮಾತುಕತೆ ಶುರುವಾಗಿದ್ದು ಸುಮಾರು ಎರಡು ಗಂಟೆ ಕಾಲ ನಡೆದಿದೆ. ಹಳೆಯ ಒಪ್ಪಂದಗಳ ಉಲ್ಲಂಘನೆ, ಜೂನ್ 15 ರ ಘಟನೆ ಸೇರಿದಂತೆ ಅನೇಕ ವಿಚಾರಗಳಲ್ಲಿ ಪರಸ್ಪರರು ಅಭಿಪ್ರಾಯ ಮುಂದಿಟ್ಟಿದ್ದು ಕೊನೆಗೆ ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಚೀನಾ ಲೈನ್ ಆಫ್ ಕಂಟ್ರೋಲ್ ಉಲ್ಲಂಘಿಸಿರುವುದನ್ನು ದೋವಲ್ ಮತ್ತೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಶಾಂತಿ ಮಾತುಕತೆಗಳಿಗೂ ಮುನ್ನ ಗಡಿಯಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳಿ ಎಂದು ಧೋವಲ್ ತಿಳಿಸಿದ್ದಾರೆ. ಇದಾದ ನಂತರವೇ ಚೀನಾ ಗಲ್ವಾನ್ ವ್ಯಾಲಿ ಗಡಿಯಿಂದ ತನ್ನ ಸೇನೆಯನ್ನು ಸುಮಾರು 1 ಕಿ.ಮೀ ಹಿಂದಕ್ಕೆ ಕರೆಸಿಕೊಂಡಿದೆ. ಪಾಕಿಸ್ತಾನದ ಮೇಲಿನ ಸರ್ಜಿಕಲ್ ದಾಳಿ ಇರಬಹುದು ಅಥವಾ ಸಿಎಎ ವಿರೋಧಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಸಂದರ್ಭ ಇರಬಹುದು ಅಜಿತ್ ದೋವಲ್ ಎಲ್ಲ ಕಡೆ ನಿರ್ಣಾಯಕ ಪಾತ್ರ ನಿರ್ವಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ