
ಮೊಹಾಲಿ(ಜು.07) ಪಬ್ ಜಿ ಎನ್ನುವ ಮೊಬೈಲ್ ಗೇಮ್ ಯುವಕರ ಮನಸ್ಸನ್ನು ಯಾವ ಹಂತಕ್ಕೆ ಕದಡಿದೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಪಬ್ ಜಿ ಕುರಿತಾದ ಒಂದೆಲ್ಲ ಒಂದು ಕತೆಗಳು ದಿನೇ ದಿನೇ ತೆರೆದುಕೊಳ್ಳುತ್ತಲೇ ಇರುತ್ತವೆ.
ಅಪ್ಲಿಕೇಶನ್ ಗಳ ಖರೀದಿಗಾಗಿ ಪಂಜಾಬ್ ಮೊಹಾಲಿಯ 15 ವರ್ಷದ ಬಾಲಕ ಅಜ್ಜನ 2 ಲಕ್ಷ ರೂ. ಖರ್ಚುಮಾಡಿದ್ದಾನೆ. ಪಂಜಾಬಿನಲ್ಲಿ ವರದಿಯಾಗುತ್ತಿರುವ ಎರಡನೇ ಪ್ರಕರಣ ಇದಾಗಿದೆ. ಕೆಲ ದಿನಗಳ ಹಿಂದೆ ಪಂಜಾಬಿನ ಖರಾರ್ನಲ್ಲಿ 17 ವರ್ಷದ ಯುವಕ ಪಬ್‌ಜಿ ಗೇಮ್ ಅಪ್ಡೇಟ್ ಮಾಡಲು 16 ಲಕ್ಷ ವ್ಯಯಿಸಿದ್ದ!
ಈ ವರ್ಷ ಗೇಮ್ ಹುಚ್ಚು ಹಿಡಿಸಿಕೊಂಡ ಬಾಲಕನಿಗೆ ಆತನ ಶಾಲೆಯ ಸೀನಿಯರ್ ಗಳು ಸಖತ್ ಟ್ರೇನಿಂಗ್ ಕೊಟ್ಟಿದ್ದರು. ಬ್ಯಾಂಕ್ ಅಕೌಂಟ್ ನಿಂದ ಆನ್ ಲೈನ್ ಪೇಮೆಂಟ್ ಮಾಡುವುದನ್ನು ಹೇಳಿಕೊಟ್ಟಿದ್ದರು.
59 ಚೀನಾ ಆಪ್ ಬ್ಯಾನ್ ಮಾಡಿದರೂ ಪಬ್ ಜಿ ಉಳಿದುಕೊಂಡಿದ್ದು ಹೇಗೆ?
55 ಸಾವಿರ ರೂ. ನಂತೆ ಬಾಲಕ ಹಲವು ಸಾರಿ ಪೇಮೆಂಟ್ ಮಾಡಿದ್ದಾನೆ. ಪೇಟಿಎಮ್ ಮೂಲಕ ಹಣ ಸಂದಾಯ ಮಾಡಿದ್ದಾನೆ. ಗೇಮ್ ಗಾಗಿಯೇ ಹೊಸ ಸಿಮ್ ಖರೀದಿ ಮಾಡಿದ್ದ, ನಮ್ಮ ಪರ್ಸ್ ಗಳಿಂದ ಆಗಾಗ ಹಣ ಕಾಣೆಯಾಗುತ್ತಿದ್ದುದ್ದು ಯಾಕೆ ಎಂಬುದಕ್ಕೂ ಇದೀಗ ಉತ್ತರ ಸಿಕ್ಕಿದೆ ಎಂದು ಹುಡುಗನ ಚಿಕ್ಕಪ್ಪ ಹೇಳುತ್ತಾರೆ.
ಅಜ್ಜನ ಖಾತೆಯಿಂದ ಹಣ ವರ್ಗಾವಣೆ ಮಾಡಿದ್ದಾನೆ ಬಾಲಕ. ಚಿಕ್ಕಪ್ಪ ಬ್ಯಾಂಕ್ ಸ್ಟೇಟ್ ಮೆಂಟ್ ನೋಡಿದಾಗ ದಿಗಿಲುಗೊಂಡಿದ್ದಾರೆ. ಬಾಲಕನ ಬಳಿ ಪ್ರಶ್ನೆ ಮಾಡಿದಾಗ ಪಬ್ ಜಿಗಾಗಿ ವ್ಯಯಿಸಿದ್ದೇನೆ ಎಂದು ತಿಳಿಸಿದ್ದಾನೆ. ಪ್ರಿಮಿಯಂ ಖಾತೆಗೆ ಏರಲು ಹೀಗೆ ಮಾಡಿದೆ ಎಂದಿದ್ದಾನೆ.
ಕುಟುಂಬ ಮೋಹಾಲಿ ಎಸ್ ಎಸ್‌ಪಿ ಕುಲ್ ದೀಪ್ ಸಿಂಗ್ ಬಳಿ ದೂರು ದಾಖಲಿಸಿದೆ. ಬಾಲಕನ ಸಹಪಾಠಿಗಳು ಆತನನ್ನು ಪ್ರಚೋದಿಸಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ