
ನವದೆಹಲಿ(ಮೇ.29): ತಾಂತ್ರಿಕ ಸೇರಿದಂತೆ ಹಲವು ಕಾರಣಗಳಿಂದ ಟೇಕ್ ಆಫ್ ಆದ ವಿಮಾನ ಮತ್ತೆ ಲ್ಯಾಂಡಿಂಗ್ ಆದ ಊದಾಹರಣೆಗಳಿವೆ. ಆದರೆ ಟೇಕ್ ಆಫ್ ಆದ ವಿಮಾನದೊಳಗೆ ಬಾವಲಿ ಪ್ರತ್ಯಕ್ಷವಾಗಿದೆ. ವಿಮಾನದೊಳಗೆ ಹಾರಾಟ ನಡೆಸಿದ ಬಾವಲಿ ಕಾರಣ ಪೈಲೆಟ್ ಅಮೆರಿಕ ನೆವಾರ್ಕ್‌ಗೆ ಹೊರಟಿದ್ದ ವಿಮಾನವನ್ನು ಮತ್ತೆ ವಾಪಸ್ ತಿರುಗಿಸಿ ದೆಹಲಿಯಲ್ಲಿ ಲ್ಯಾಂಡ್ ಮಾಡಿದ್ದಾರೆ.
ವಿಮಾನ ಬಾಡಿಗೆ ಪಡೆದು ಆಗಸದಲ್ಲಿ ಮದುವೆ; ಬೆಂಗಳೂರಲ್ಲಿ ಲ್ಯಾಂಡ್ ಆದಾಗ ಶಾಕ್!
ಏರ್ ಇಂಡಿಯಾದ B 777-300ER ವಿಮಾನ VT-MLM ಆಪರೇಟಿಂಗ್ ಫ್ಲೈಟ್ AI - 105 (ದೆಹಲಿ- ನೆವಾರ್ಕ್) ವಿಮಾನ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಜಾನೆ 2.20ಕ್ಕೆ ಟೇಕ್ ಆಫ್ ಆಗಿದೆ. ಟೇಕ್ ಆಫ್ ಆದ ಅರ್ಧಗಂಟೆಯಲ್ಲಿ ವಿಮಾನದೊಳಗೆ ಬಾವಲಿ ಪ್ರತ್ಯಕ್ಷವಾಗಿದೆ. ತಕ್ಷಣವೇ ಪೈಲೆಟ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ.
"
ಮಾಹಿತಿ ಪಡೆದ ಕಂಟ್ರೋಲ್ ರೂಂ ಅಧಿಕಾರಿಗಳು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ವಿಮಾನವನ್ನು ವಾಪಸ್ ದೆಹಲಿಯಲ್ಲಿ ಲ್ಯಾಂಡ್ ಮಾಡುವಂತೆ ಸೂಚಿಸಿದ್ದಾರೆ. ಹೀಗಾಗಿ ನ್ಯೂಜರ್ಸಿಯತ್ತ ಹೊರಟ್ಟಿದ್ದ ಏರ್ ಇಂಡಿಯಾ ವಿಮಾನ ಆಗಸದಲ್ಲಿ ಯೂ ಟರ್ನ್ ಹೊಡೆದು ಮತ್ತೆ ದೆಹಲಿಯಲ್ಲಿ ಲ್ಯಾಂಡ್ ಆಗಿದೆ.
18,000 ರು. ಟಿಕೆಟ್‌ನಲ್ಲಿ ಮುಂಬೈನಿಂದ- ದುಬೈಗೆ ಏಕಾಂಗಿ ವಿಮಾನ ಪ್ರಯಾಣ!
ಮುಂಜಾನೆ 3.55ರ ವೇಳೆಗೆ ಏರ್ ಇಂಡಿಯಾ ವಿಮಾನ ದೆಹಲಿಯಲ್ಲಿ ಸುರಕ್ಷತಿವಾಗಿ ಲ್ಯಾಂಡ್ ಆಗಿದೆ. ವನ್ಯಜೀವಿ ಸಿಬ್ಬಂದಿಯನ್ನು ಬಾವಲಿ ಹಿಡಿಯಲು ಆಗಮಿಸಿದ್ದಾರೆ. ಪ್ರಯಾಣಿಕರನ್ನು ವಿಮಾನದಿಂದ ಇಳಿಸಿ ಕಾರ್ಯಚರಣೆ ಬಾವಲಿ ಹಿಡಿಯುವ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ DGCA) ಅಧಿಕಾರಿಗಳು ತಿಳಿಸಿದ್ದಾರೆ.
1 ಗಂಟೆಗೂ ಹೆಚ್ಚು ಕಾಲ ವಿಮಾನದೊಳಗೆ ಹಾರಾಡಿದ್ದ ಬಾವಲಿಗೆ ಸತ್ತುಬಿದ್ದಿದೆ. ಘಟನೆ ಕರಿತು ವಿವರವಾದ ತನಿಖೆಗೆ ವಿಮಾನಯಾನ ಸುರಕ್ಷತಾ ವಿಭಾಗಕ್ಕೆ ಸೂಚನೆ ನೀಡಲಾಗಿದೆ. ಇತ್ತ ಏರ್ ಇಂಡಿಯಾ ವಿವರವಾದ ವರದಿಯನ್ನು ಸುರಕ್ಷತಾ ವಿಭಾಗಕ್ಕೆ ಸಲ್ಲಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ