ಸುಳ್ಳಿನ ಅರಮನೆಯಿಂದ ಹೊರಬನ್ನಿ, ದೇಶವನ್ನೊಮ್ಮೆ ನೋಡಿ: ಪಿಎಂ ವಿರುದ್ಧ ಓವೈಸಿ ಕಿಡಿ!

By Suvarna NewsFirst Published May 29, 2021, 3:28 PM IST
Highlights

* ಕೊರೋನಾ ಹಾವಳಿ ಮಧ್ಯೆಯೂ ದೇಶದಲ್ಲಿ ಮುಂದುವರೆದ ಲಸಿಕೆ ಅಭಿಯನ

* ಲಸಿಕೆ ಅಭಿಯಾನ ಸರಿಯಾಗಿ ನಡೆಯುತ್ತಿಲ್ಲ ಎಂದು ಓವೈಸಿ ಕಿಡಿ

* ಸುಳ್ಳಿನ ಅರಮನೆಯಿಂದ ಹೊರಬನ್ನಿ, ದೇಶವನ್ನೊಮ್ಮೆ ನೋಡಿ

ನವದೆಹಲಿ(ಮೇ.29): ದೇಶದಲ್ಲಿ ಕೊರೋನಾ ಎರಡನೇ ಅಲಡ ಅಬ್ಬರಿಸುತ್ತಿದೆ. ಹೀಗಿರುವಾಗ ಕೊರೋನಾ ವಿರುದ್ಧದ ಈ ಹೋರಾಟದಲ್ಲಿ ಲಸಿಕೆ ಅಭಿಯಾನ ಶಕ್ತಿಶಾಲಿ ಅಸ್ತ್ರವೆಂದೇ ಪರಿಗಣಿಸಲಾಗಿದೆ. ದೇಶಾದ್ಯಂತ ಈ ಲಸಿಕೆ ಅಭಿಯಾನ ನಡೆಯುತ್ತಿದ್ದರೂ, ವಿಪಕ್ಷಗಳು ಮಾತ್ರ ವೇಗವಾಗಿ ನಡೆಯುತ್ತಿಲ್ಲ ಎಂಬ ವಿಚಾರವಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಲಾರಂಭಿಸಿದ್ದಾರೆ. ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬೆನ್ನಲ್ಲೇ  AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡಾ ಲಸಿಕೆ ಅಭಿಯಾನ ಸಂಬಂಧ ಕಿಡಿ ಕಾರಿದ್ದು, ಮೋದಿ ಸರ್ಕಾರ ಸುಳ್ಳಿನ ಸರಮಾಲೆ ಕಟ್ಟಿದೆ ಎಂದಿದ್ದಾರೆ.

 AIMIMನ ಮುಖ್ಯಸ್ಥ ಹಾಗೂ ಹೈದರಾಬಾದ್‌ ಸಂಸದ ಅಸಾದುದ್ದೀನ್ ಓವೈಸಿ ಪ್ರಧಾನ ಮಂತ್ರಿಗಳ ಕಚೇರಿಯ ಅಧಿಕೃತ ಟ್ವಿಟರ್‌ ಖಾತೆಯನ್ನು ಟ್ಯಾಗ್ ಮಾಡಿ ಟ್ವೀಟ್‌ ಒಂದನ್ನು ಮಾಡಿದ್ದಾರೆ. ತಮ್ಮ ಈ ಟ್ವೀಟ್‌ನಲ್ಲಿ 'ಸುಳ್ಳು, ಸುಳ್ಳು ಹಾಗೂ ಸುಳ್ಳು. ಮೋದಿ ಸರ್ಕಾರ ಸುಳ್ಳಿನ ಮೇಲೆ ನಿಂತಿದೆ. ಪ್ರಧಾನಿ ಮೋದಿ ಕನಸಿನ ಅರಮನೆಯಿಂದ ಹೊರಬನ್ನಿ, ದೇಶದಲ್ಲಿ ಬಡಜನರ ಪಾಡು ಹೇಗಿದೆ ಎಂದು ನೋಡಿ' ಎಂದಿದ್ದಾರೆ.

'ಕೊರೋನಾ ಗೆಲ್ಲಲು ಇನ್ನೆರಡು ವರ್ಷ : ಜೈವಿಕ ಲಸಿಕೆ ಜತೆ ಸಾಮಾಜಿಕ ಲಸಿಕೆ ಬೇಕು'

ಭಾರತದಲ್ಲಿ ಕೊರೋನಾ ವಿರುದ್ಧದ ಲಸಿಕೆ ಅಭಿಯಾನ ಮುಂದುವರೆದಿದೆ. ಕೇಂದ್ರ ಸರ್ಕಾರ ನೀಡಿರುವ ಅಂಕಿ ಅಂಶದ ಅನ್ವಯ 20,89,02,445 ಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!