* ಜುಲೈ 26 ರೊಳಗೆ ಸರ್ಕಾರಿ ವಸತಿ ಕಾಲೋನಿಗಳನ್ನು ಖಾಲಿ ಮಾಡುವಂತೆ ಆದೇಶ
* ಕಳೆದ ವರ್ಷ ಅಕ್ಟೋಬರ್ 8 ರಂದು ಏರ್ ಇಂಡಿಯಾದ ಬಿಡ್ ಗೆದ್ದಿದ್ದ ಟಾಟಾ ಸಮೂಹ
* ಮೇ 17 ರಂದು AI ಅಸೆಟ್ಸ್ ಹೋಲ್ಡಿಂಗ್ ಲಿಮಿಟೆಡ್‌ನಿಂದ ಆದೇಶ
ನವದೆಹಲಿ(ಮೇ.24): ಟಾಟಾ ಗ್ರೂಪ್‌ನ ಏರ್ ಇಂಡಿಯಾ ತನ್ನ ಉದ್ಯೋಗಿಗಳಿಗೆ ಜುಲೈ 26 ರೊಳಗೆ ಸರ್ಕಾರಿ ವಸತಿ ಕಾಲೋನಿಗಳನ್ನು ಖಾಲಿ ಮಾಡುವಂತೆ ಕೇಳಿಕೊಂಡಿದೆ. ಈ ಮಾಹಿತಿಯನ್ನು ಅಧಿಕೃತ ದಾಖಲೆಯಿಂದ ಈ ಮಾಹಿತಿ ಲಭಿಸಿದೆ. ಟಾಟಾ ಸಮೂಹವು ಕಳೆದ ವರ್ಷ ಅಕ್ಟೋಬರ್ 8 ರಂದು ಏರ್ ಇಂಡಿಯಾದ ಬಿಡ್ ಅನ್ನು ಗೆದ್ದಿತ್ತು, ಆದರೆ ನಿಯಮದಂತೆ, ವಸತಿ ಕಾಲೋನಿಗಳಂತಹ ಏರ್‌ಲೈನ್‌ನ ಮುಖ್ಯವಲ್ಲದ ಆಸ್ತಿಯ ಮಾಲೀಕತ್ವವು ಇನ್ನೂ ಸರ್ಕಾರದ ಬಳಿ ಇದೆ. ಏರ್ ಇಂಡಿಯಾ ಸ್ಪೆಸಿಫಿಕ್ ಆಲ್ಟರ್ನೇಟಿವ್ ಮೆಕ್ಯಾನಿಸಂನ ನಿರ್ಧಾರಕ್ಕೆ ಅನುಗುಣವಾಗಿ ಜುಲೈ 26 ರೊಳಗೆ ವಸತಿಗಳನ್ನು ತೊರೆಯುವಂತೆ ಏರ್‌ಲೈನ್ಸ್ ಮೇ 18 ರಂದು ಆದೇಶವನ್ನು ಹೊರಡಿಸಿದೆ. ಮೇ 17 ರಂದು AI ಅಸೆಟ್ಸ್ ಹೋಲ್ಡಿಂಗ್ ಲಿಮಿಟೆಡ್‌ನಿಂದ ಆದೇಶವನ್ನು ಒಳಗೊಂಡ ಇಮೇಲ್ ಅನ್ನು ಸ್ವೀಕರಿಸಿದೆ ಎಂದು ಏರ್ ಇಂಡಿಯಾ ಹೇಳಿದೆ.
ಏರ್ ಇಂಡಿಯಾದ ಎರಡು ಕಾಲೋನಿಗಳಿವೆ
ಏರ್ ಇಂಡಿಯಾ ಎರಡು ದೊಡ್ಡ ವಸತಿ ಕಾಲೋನಿಗಳನ್ನು ಹೊಂದಿದೆ, ಒಂದು ದೆಹಲಿಯಲ್ಲಿ ಮತ್ತು ಇನ್ನೊಂದು ಮುಂಬೈನಲ್ಲಿ. ಸಾಲದ ಸುಳಿಯಲ್ಲಿ ಸಿಲುಕಿರುವ ಏರ್ ಇಂಡಿಯಾಗೆ ಹಳೆಯ ಮಾಲೀಕರ ಬೆಂಬಲ ಸಿಕ್ಕಿದೆ ಎಂಬುವುದು ಉಲ್ಲೇಖನೀಯ. ಕಳೆದ ವರ್ಷ 2021 ರಲ್ಲಿ, ಏರ್ ಇಂಡಿಯಾಕ್ಕೆ ಅತಿ ಹೆಚ್ಚು ಬಿಡ್ ಮಾಡಿದ ಟಾಟಾ ಗ್ರೂಪ್‌ಗೆ ಈ ಕಂಪನಿಯ ಕಮಾಂಡ್ ಅನ್ನು ಹಸ್ತಾಂತರಿಸುವುದಾಗಿ ಸರ್ಕಾರ ಘೋಷಿಸಿತ್ತು. ಇದಕ್ಕಾಗಿ ಟಾಟಾ ಗ್ರೂಪ್ 18,000 ಕೋಟಿ ಬಿಡ್ ಮಾಡಿತ್ತು. ಏರ್ ಇಂಡಿಯಾವನ್ನು ಮರಳಿ ಪಡೆದ ನಂತರ ರತನ್ ಟಾಟಾ ಟ್ವೀಟ್ ಮಾಡುವ ಮೂಲಕ ಹಳೆಯ ಚಿತ್ರವನ್ನು ಹಂಚಿಕೊಂಡಿದ್ದರು.
ಏರ್ ಇಂಡಿಯಾ ಪ್ರಾರಂಭಿಸಿದ್ದ ಟಾಟಾ
ಏರ್ ಇಂಡಿಯಾದ ಕಾರ್ಯಾಚರಣೆಗೆ ಹಲವು ಕಂಪನಿಗಳು ಬಿಡ್ ಮಾಡಿದ್ದವು. ಇದರಲ್ಲಿ ಟಾಟಾ ಗ್ರೂಪ್ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿತ್ತು. ಟಾಟಾ ಏರ್ ಇಂಡಿಯಾದೊಂದಿಗೆ ಹಳೆಯ ಸಂಬಂಧವನ್ನು ಹೊಂದಿದೆ. ವಾಸ್ತವವಾಗಿ ಏರ್ ಇಂಡಿಯಾವನ್ನು 1932 ರಲ್ಲಿ ಟಾಟಾ ಗ್ರೂಪ್ ಸ್ವತಃ ಪ್ರಾರಂಭಿಸಿತು. ಟಾಟಾ ಸಮೂಹದ ಜೆ. ಆರ್. ಡಿ. ಟಾಟಾ ಸ್ವತಃ ಪೈಲಟ್ ಆಗಿದ್ದರು. ಟಾಟಾ ಏರ್ ಲೈನ್ಸ್ ಆರಂಭಿಸಿದ ಏರ್ ಲೈನ್ಸ್ ನಲ್ಲಿ ಜೆಆರ್ ಡಿ ಟಾಟಾ ಪೈಲಟ್ ಆಗಿ ಕೆಲಸ ಮಾಡುತ್ತಿದ್ದರು. ಅವರಲ್ಲದೆ ಇನ್ನಿಬ್ಬರು ಪೈಲಟ್‌ಗಳಿದ್ದರು. ಜೆಆರ್ ಡಿ ಟಾಟಾ ಅವರು ಗಂಟೆಗಟ್ಟಲೆ ವಿಮಾನಗಳನ್ನು ಹಾರಿಸುತ್ತಿದ್ದರು. ಒಂದು ರೀತಿಯಲ್ಲಿ ಟಾಟಾ ಗ್ರೂಪ್ ಏರ್ ಇಂಡಿಯಾ ಜೊತೆ ಭಾವನಾತ್ಮಕ ಸಂಬಂಧವನ್ನೂ ಹೊಂದಿತ್ತು. ಇದರಿಂದಾಗಿ ಏರ್ ಇಂಡಿಯಾವನ್ನು ಖರೀದಿಸಲು ಟಾಟಾ ಗ್ರೂಪ್ ತೀವ್ರ ಪ್ರಯತ್ನ ನಡೆಸುತ್ತಿದ್ದು, ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಟಾಟಾ ಹೆಸರಿಗೆ ಮತ್ತೊಂದು ಸಾಧನೆ ಸೇರ್ಪಡೆಯಾಗಿದೆ.
69 ವರ್ಷಗಳ ನಂತರ ಹಿಂತಿರುಗಲಿದ್ದಾರೆ
ವಹಿವಾಟು ಡಿಸೆಂಬರ್ 2021 ರೊಳಗೆ ಪೂರ್ಣಗೊಳ್ಳಬೇಕಿತ್ತು, ಆದರೆ ಪ್ರಕ್ರಿಯೆಯ ಕಾರ್ಯವನ್ನು ಪೂರ್ಣಗೊಳಿಸಲು ತೆಗೆದುಕೊಂಡ ಸಮಯವು ನಿರೀಕ್ಷೆಗಿಂತ ಹೆಚ್ಚಾದ ಕಾರಣ ನಂತರ ಜನವರಿ 2022 ಕ್ಕೆ ವಿಸ್ತರಿಸಲಾಯಿತು. ಈ ಒಪ್ಪಂದದ ನಂತರ, ಸುಮಾರು 69 ವರ್ಷಗಳ ನಂತರ ಏರ್ ಇಂಡಿಯಾ ಟಾಟಾ ಸಮೂಹಕ್ಕೆ ಮರಳಲಿದೆ. ಟಾಟಾ ಸಮೂಹವು ಏರ್ ಇಂಡಿಯಾವನ್ನು ಅಕ್ಟೋಬರ್ 1932 ರಲ್ಲಿ ಟಾಟಾ ಏರ್ಲೈನ್ಸ್ ಎಂದು ಸ್ಥಾಪಿಸಿತು. ಸರ್ಕಾರವು 1953 ರಲ್ಲಿ ವಿಮಾನಯಾನ ಸಂಸ್ಥೆಯನ್ನು ರಾಷ್ಟ್ರೀಕರಣಗೊಳಿಸಿತು.