ಕಸದ ತೊಟ್ಟಿಯಲ್ಲಿ ಗೋವಿನ ಮೃತದೇಹ, ಈ ಗೋಶಾಲೆಯ ಹಲವು ಹಸುಗಳು ಸಾಯುವ ಹಂತದಲ್ಲಿ!

By Suvarna NewsFirst Published May 24, 2022, 11:23 AM IST
Highlights

* ಉತ್ತರ ಪ್ರದೇಶದ ಜಿಲ್ಲೆಯಲ್ಲಿ ಹೀನಾಯ ಸ್ಥಿತಿಗೆ ತಲುಪಿದ ಗೋಶಾಲೆ

* ಕಸದ ತೊಟ್ಟಿಯಲ್ಲಿ ಪತ್ತೆಯಾಯ್ತು ಕರುವಿನ ಶವ

* ಈ ಗೋಶಾಲೆಯಲ್ಲಿ ಹಲವು ಗೋವುಗಳು ಸಾಯುವ ಹಂತದಲ್ಲಿ

ಲಕ್ನೋ(ಮೇ.24): ಉತ್ತರ ಪ್ರದೇಶದ ಯೋಗಿ ಸರ್ಕಾರದ ಕನಸಿನ ಯೋಜನೆಯಾಗಿ ನಿರ್ಗತಿಕ ಪ್ರಾಣಿಗಳಿಗಾಗಿ ಸರ್ಕಾರಿ ಗೋಶಾಲೆಗಳನ್ನು ನಿರ್ಮಿಸಲಾಗಿದೆ, ಆದರೆ ಯೋಗಿ ಸರ್ಕಾರ್ 2.0 ನಲ್ಲಿ, ಈ ಯೋಜನೆಯು ಡಿಯೋರಿಯಾ ಜಿಲ್ಲೆಯಲ್ಲಿ ಭಾರೀ ಕೆಟ್ಟ ಸ್ಥಿತಿಯಲ್ಲಿದೆ. ಹೌದು ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದಾಗಿ ಮೂಕಪ್ರಾಣಿಗಳು ಸಾಯುವ ಹಂತದಲ್ಲಿವೆ. 

ಗೋಶಾಲೆ, ಬಡವರಿಗೆ 11 ಕೋಟಿ ರೂ. ಸಂಪತ್ತು ದಾನ: 11 ವರ್ಷದ ಪುತ್ರ, ಪತ್ನಿ ಜೊತೆ ಸನ್ಯಾಸತ್ವ ಸ್ವೀಕರಿಸಿದ 'ಕುಬೇರ'!

Latest Videos

ಏನಿದು ವಿಚಾರ?

ಯೋಗಿ ಸರ್ಕಾರ್ 2.0 ನಲ್ಲಿ, ಈ ಯೋಜನೆಯು ಡಿಯೋರಿಯಾ ಜಿಲ್ಲೆಯಲ್ಲಿ ಸಾಯುತ್ತಿರುವಂತೆ ತೋರುತ್ತಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದ್ದು, ಪಾಲಿಕೆಯ ಕಸದ ಗಾಡಿಯಲ್ಲಿ ಸತ್ತ ಹಸುಗಳ ಮೃತದೇಹಗಳು ಪತ್ತೆಯಾಗಿವೆ. ಕಸದ ರಾಶಿಗೆ ಎಸೆಯಲು ತೆಗೆದುಕೊಂಡು ಹೋಗುತ್ತಿದ್ದ ಹಸುಗಳ ಮೃತದೇಹ ನೋಡುಗರನ್ನು ಬೆಚ್ಚಿ ಬೀಳಿಸಿದೆ. ಸತ್ತ ಹಸುಗಳ ಮರಣೋತ್ತರ ಪರೀಕ್ಷೆ ನಡೆಸಿ ಸಾವಿಗೆ ಕಾರಣ ಪತ್ತೆ ಹಚ್ಚುವ ವ್ಯವಸ್ಥೆ ಒಂದೆಡೆಯಾದರೆ, ಗೋಶಾಲೆಗೆ ಸಂಬಂಧಿಸಿದ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಗೋವುಗಳನ್ನು ಗೌರವಯುತವಾಗಿ ಹೂಳುವ ವ್ಯವಸ್ಥೆ ಇನ್ನೊಂದೆಡೆ. ಆದರೆ ಇವೆರಡೂ ನಡೆಯುತ್ತಿಲ್ಲ ಎಂಬುವುದಕ್ಕೆ ಕಸದ ಗಾಡಿಯಲ್ಲಿ ಪತ್ತೆಯಾದ ಹಸುವಿನ ಶವವೇ ಸಾಕ್ಷಿ. 

ಕಸದ ಬಂಡಿಯಲ್ಲಿ ಹಸುವಿನ ಮೃತದೇಹ

ಡಿಯೋರಿಯಾ ನಗರದ ಬಾಲಾಜಿ ದೇವಸ್ಥಾನದ ಬಳಿ ಕಸ ಸಾಗಿಸುವ ವಾಹನದಲ್ಲಿ ಹಸುವಿನ ಮೃತದೇಹ ಬಿದ್ದಿತ್ತು. ಈ ಕುರಿತು ಪುರಸಭೆ ಕಸದ ಲಾರಿ ಚಾಲಕ ದಿನೇಶ್ ಅವರನ್ನು ಮಾತನಾಡಿಸಿದಾಗ ಕಸ ಕೊಂಡೊಯ್ಯುತ್ತಿದ್ದೇವೆ, ಕನ್ಹಾಗೋಶಾಲೆಯಲ್ಲಿ ಕರುಗಳು ಸತ್ತಿವೆ, ಹೀಗಾಗಿ ಹೂಳಲು ಕೊಂಡೊಯ್ಯುತ್ತಿದ್ದೇವೆ. ಕಸದಿಂದ ಮುಚ್ಚಿ ಸಾಗಿಸುತ್ತಿದ್ದೇವೆ ಎಂದಿದ್ದಾರೆ. 

ರೈತರ ಕನಸು ನನಸು ಮಾಡಿದ ಸಿಎಂ, ರೈತರಿಂದ ಬೊಮ್ಮಾಯಿಗೆ ಜೋಡೆತ್ತು ಗಿಫ್ಟ್

ಡಿಯೋರಿಯಾದಲ್ಲಿ ಕೆಟ್ಟ ಸ್ಥಿತಿ

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಮಹಂತ್ ಮಠವು ಗೋಸೇವೆಗೆ ಹೆಸರುವಾಸಿಯಾಗಿದೆ. ಕಾಲಕಾಲಕ್ಕೆ, ಯೋಗಿ ಆದಿತ್ಯನಾಥ್ ಅವರು ಹಸುಗಳ ಮೇಲಿನ ಪ್ರೀತಿಯನ್ನು ತೋರಿಸುತ್ತಾರೆ ಮತ್ತು ನಿರ್ಗತಿಕ ಹಸುಗಳ ಆರೈಕೆಗಾಗಿ ಕಟ್ಟುನಿಟ್ಟಾದ ಆದೇಶಗಳನ್ನು ನೀಡುತ್ತಲೇ ಇರುತ್ತಾರೆ, ಆದರೆ ಮುಖ್ಯಮಂತ್ರಿಗಳ ನಗರವಾದ ಗೋರಖ್‌ಪುರದ ಪಕ್ಕದ ನೆರೆಯ ಜಿಲ್ಲೆ ಡಿಯೋರಿಯಾದಲ್ಲಿ ಗೋಶಾಲರು ಕೆಟ್ಟ ಸ್ಥಿತಿ ತಲುಪಿರುವುದು ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. 

click me!