ಕುತುಬ್ ಮಿನಾರ್‌ನಲ್ಲಿ ಪೂಜೆ ಮಾಡುವ ಬೇಡಿಕೆಗಾಗಿ ಸಲ್ಲಿಸಿದ ಹಿಂದೂ ಕಡೆಯ ಅರ್ಜಿಯನ್ನು ಎಎಸ್‌ಐ ವಿರೋಧ ವ್ಯಕ್ತಪಡಿಸಿದೆ. ಕುತುಬ್ ಮಿನಾರ್‌ನ ಗುರುತನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಎಎಸ್‌ಐ ಸಾಕೇತ್ ನ್ಯಾಯಾಲಯಕ್ಕೆ ಸಲ್ಲಿಸಿದ ಉತ್ತರದಲ್ಲಿ ಹೇಳಿದೆ.
ನವದೆಹಲಿ (ಮೇ. 24): ಕುತುಬ್ ಮಿನಾರ್‌ನಲ್ಲಿ (Qutub Minar) ಪೂಜೆಗೆ ಆಗ್ರಹಿಸಿ ಹಿಂದೂಗಳ (Hindu Worship) ಪರವಾಗಿ ಸಲ್ಲಿಸಿದ್ದ ಅರ್ಜಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (Archaeological Survey of India) (ಎಎಸ್‌ಐ) ವಿರೋಧಿಸಿದೆ. ಕುತುಬ್ ಮಿನಾರ್‌ನ ಗುರುತನ್ನು ಯಾವುದೇ ಕಾರಣಕ್ಕೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಎಎಸ್‌ಐ ಸಾಕೇತ್ ನ್ಯಾಯಾಲಯಕ್ಕೆ (saket Court)ಸಲ್ಲಿಸಿದ ಉತ್ತರದಲ್ಲಿ ಹೇಳಿದೆ.
ಕುತುಬ್ ಮಿನಾರ್ ಸಂಕೀರ್ಣದೊಳಗೆ ಹಿಂದೂ ಮತ್ತು ಜೈನ ದೇವತೆಗಳನ್ನು ಪೂಜಿಸಲು ಮತ್ತು ಪುನಃಸ್ಥಾಪಿಸಲು ಹಕ್ಕನ್ನು ಕೋರಿ ದೆಹಲಿಯ ಸಾಕೇತ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕುತುಬ್ ಮಿನಾರ್ ಸಂಕೀರ್ಣದಲ್ಲಿ ಅನೇಕ ಹಿಂದೂ ದೇವತೆಗಳ ವಿಗ್ರಹಗಳಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ಪೂಜೆಯ ಹಕ್ಕನ್ನು ನೀಡೋದಿಲ್ಲ: ಹಿಂದೂ ಪರ ಅರ್ಜಿಗಳ ಕುರಿತಾಗಿ ಉತ್ತರವನ್ನು ನೀಡುವಂತೆ ಸಾಕೇತ್ ಕೋರ್ಟ್ ಎಎಸ್ಐಗೆ ಹೇಳಿತ್ತು. ಅದರಂತೆ ಪುರಾತತ್ವ ಇಲಾಖೆ ತನ್ನ ಉತ್ತರವನ್ನು ಕೋರ್ಟ್ ಗೆ ಸಲ್ಲಿಸಿದೆ. ಕುತುಬ್ ಮಿನಾರ್ 1914 ರಿಂದ ಸಂರಕ್ಷಿತ ಸ್ಮಾರಕದ ಸ್ಥಾನಮಾನವನ್ನು ಪಡೆದುಕೊಂಡಿದೆ ಎಂದು ಎಎಸ್ಐ ಹೇಳಿದ್ದು, ಕುತುಬ್ ಮಿನಾರ್ ಗೆ ಈ ಬೇರೆಯದೇ ಗುರುತನ್ನು ನೀಡಲು ಸಾಧ್ಯವಿಲ್ಲ. . ಸ್ಮಾರಕದಲ್ಲಿ ಈಗ ಪೂಜೆಗೆ ಅವಕಾಶ ನೀಡುವಂತಿಲ್ಲ. ವಾಸ್ತವವಾಗಿ, ಅದನ್ನು ಸಂರಕ್ಷಿಸಿದ ಸಮಯದಿಂದಲೂ ಇಲ್ಲಿ ಪೂಜೆ ನಡೆದಿಲ್ಲ.
ಹಿಂದೂಗಳ ಕಡೆಯ ಅರ್ಜಿಗಳು ಕಾನೂನುಬದ್ಧವಾಗಿ ಮಾನ್ಯವಾಗಿಲ್ಲ ಎಂದು ಎಎಸ್ಐ ಹೇಳಿದೆ. ಅಲ್ಲದೆ, ಹಳೆಯ ದೇವಾಲಯವನ್ನು ಒಡೆದು ಕುತುಬ್ ಮಿನಾರ್ ಸಂಕೀರ್ಣವನ್ನು ನಿರ್ಮಾಣ ಮಾಡಿರುವುದು ಐತಿಹಾಸಿಕ ಸಂಗತಿಯಾಗಿದೆ. ಆದರೆ, ಇದರ ಸಂರಕ್ಷಿತ ಸ್ಮಾರಕವಾಗಿ ರಕ್ಷಣೆ ಮಾಡಿದ ದಿನದಿಂದ ಇಲ್ಲಿಯವರೆಗೂ ಯಾವುದೇ ಪೂಜೆ ಪುನಸ್ಕಾರಕ್ಕೆಅವಕಾಶ ನೀಡಲಾಗಿಲ್ಲ. ಆ ಕಾರಣಕ್ಕಾಗಿ ಇಲ್ಲಿ ಪೂಜೆಯನ್ನು ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿದೆ.
ಕುತುಬ್ ಮಿನಾರ್ ಎನ್ನುವುದು ವಿಷ್ಣು ಸ್ತಂಭ (Vishnu Stambh) ಇಲ್ಲಿ ಪೂಜೆಗೆ ಆಗ್ರಹಿಸಿ ಅರ್ಜಿ ಸಲ್ಲಿಸಿರುವ ಅರ್ಜಿದಾರ ಹರಿಶಂಕರ್ ಜೈನ್, ಕುತುಬ್ ಮಿನಾರ್ ಬಗ್ಗೆ ದೊಡ್ಡ ಹಕ್ಕೊತ್ತಾಯ ಮಾಡಿದ್ದಾರೆ. ಕುತುಬ್ ಮಿನಾರ್‌ನಲ್ಲಿ ಸುಮಾರು 27 ದೇವಾಲಯಗಳ 100 ಕ್ಕೂ ಹೆಚ್ಚು ಅವಶೇಷಗಳು ಹರಡಿಕೊಂಡಿವೆ ಎಂದು ಅವರು ಹೇಳಿದ್ದಾರೆ. ಕುತುಬ್ ಮಿನಾರ್ ಬಗ್ಗೆ ನಮ್ಮ ಬಳಿ ಸಾಕಷ್ಟು ಪುರಾವೆಗಳಿವೆ, ಅದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಹರಿಶಂಕರ್ ಜೈನ್ ಅವರು ತಮ್ಮ ಬಳಿ ಇರುವ ಎಲ್ಲಾ ಸಾಕ್ಷ್ಯಗಳನ್ನು ಎಎಸ್‌ಐ ಪುಸ್ತಕದಿಂದ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಇದು ದೇವಾಲಯಗಳ ಅವಶೇಷಗಳು ಎಂದು ಎಎಸ್ಐ ಕೂಡ ಹೇಳುತ್ತದೆ ಎಂದಿದ್ದಾರೆ.
ಜ್ಞಾನವಾಪಿ ಗದ್ದಲದ ಬೆನ್ನಲ್ಲೇ ಕುತುಬ್ ಮಿನಾರ್ ವಿವಾದ, ಉತ್ಖನನ ನಡೆಸಲು ASIಗೆ ಸರ್ಕಾರದ ಆದೇಶ!
ಸಂಸ್ಕೃತಿ ಸಚಿವಾಲಯವು ತನ್ನ ಉತ್ಖನನ ವರದಿಯನ್ನು ಸಲ್ಲಿಸುವಂತೆ ಎಎಸ್‌ಐಗೆ ಕೇಳಿದೆ ಎಂದು ವರದಿಯಾಗಿತ್ತು. ಮಸೀದಿಯಿಂದ 15 ಮೀಟರ್ ದೂರದಲ್ಲಿ ಮಿನಾರ್‌ನ ದಕ್ಷಿಣದಲ್ಲಿ ಉತ್ಖನನವನ್ನು ಪ್ರಾರಂಭಿಸಬಹುದು. ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ಮೇ 21 ರಂದು ಶನಿವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಂಡಿದ್ದರು ಎಂದು ವರದಿಯಾಗಿದ್ದವು.
ಕುತುಬ್ ಮಿನಾರ್ ಸಂಕೀರ್ಣದಲ್ಲಿರುವ ಗಣೇಶ ಮೂರ್ತಿ ಬಗ್ಗೆ ಯಥಾಸ್ಥಿತಿ ಕಾಯ್ದುಕೊಳ್ಳಿ: ಕೋರ್ಟ್
ಇದು ಪುರಾತತ್ವ ಪ್ರಾಮುಖ್ಯತೆಯ ಸ್ಮಾರಕ ಎಂದು ಎಎಸ್ಐ ಹೇಳಿದೆ. ಹೀಗಾಗಿ ಇಲ್ಲಿ ಪೂಜೆ ಮಾಡಲು ಯಾರಿಗೂ ಅವಕಾಶ ನೀಡುವಂತಿಲ್ಲ. ಪುರಾತತ್ವ ಸಂರಕ್ಷಣಾ ಕಾಯಿದೆ 1958 ರ ಪ್ರಕಾರ, ಸಂರಕ್ಷಿತ ಸ್ಮಾರಕದಲ್ಲಿ ಪ್ರವಾಸೋದ್ಯಮಕ್ಕೆ ಮಾತ್ರ ಅವಕಾಶವಿದೆ. ಯಾವುದೇ ಧರ್ಮದ ಆರಾಧನೆ ಇಲ್ಲ. ಈ ಕುತುಬ್ ಮಿನಾರ್ ಸಂಕೀರ್ಣವು ಎಎಸ್‌ಐ ರಕ್ಷಣೆಯಲ್ಲಿದ್ದಾಗಲೂ ಯಾವುದೇ ಧರ್ಮದ ಅನುಯಾಯಿಗಳು ಅಲ್ಲಿ ಯಾವುದೇ ಪೂಜೆ ಅಥವಾ ಪೂಜೆಯನ್ನು ಮಾಡುತ್ತಿರಲಿಲ್ಲ ಎಂದು ಎಎಸ್ಐ ಹೇಳಿದೆ.