ಪರ್ಲ್ ಹಾರ್ಬರ್ ಶೂಟಿಂಗ್: ವಾಯುಸೇನೆ ಮುಖ್ಯಸ್ಥ ಸುರಕ್ಷಿತ!

By Suvarna NewsFirst Published Dec 5, 2019, 11:29 AM IST
Highlights

ಪರ್ಲ್ ಹಾರ್ಬರ್’ನಲ್ಲಿ ನೌಕಾಪಡೆ ಯೋಧನಿಂದ ಗುಂಡಿನ ದಾಳಿ|  ಭಾರತೀಯ ವಾಯುಸೇನೆ ಮುಖ್ಯಸ್ಥ ರಾಕೇಶ್ ಸಿಂಗ್ ಬದೌರಿಯಾ ಸುರಕ್ಷಿತ| ಹವಾಯಿ ಪರ್ಲ್ ಹಾರ್ಬರ್ ನೌಕಾನೆಲೆಯ ಬಳಿ ಯೋಧನಿಂದ ಮನಬಂದಂತೆ ಗುಂಡಿನ ದಾಳಿ| ಬದೌರಿಯಾ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ ವಾಯುಸೇನೆ ವಕ್ತಾರ| ಇಂಡೋ-ಪೆಸಿಫಿಕ್ ಭಾಗದ ಭದ್ರತಾ ಪರಿಸ್ಥಿತಿಗಳ ಕುರಿತು ಚರ್ಚೆ| ಪ್ರಮುಖ ದೇಶಗಳ ವಾಯುಸೇನೆಯ ಮುಖ್ಯಸ್ಥರು ಸಭೆಯಲ್ಲಿ ಭಾಗಿ|

ಹವಾಯಿ(ಡಿ.05): ಭಾರತೀಯ ವಾಯುಸೇನೆ ಮುಖ್ಯಸ್ಥ ರಾಕೇಶ್ ಸಿಂಗ್ ಬದೌರಿಯಾ ಭೇಟಿ ನೀಡಿದ್ದ ಅಮೆರಿಕದ ಪರ್ಲ್ ಹಾರ್ಬರ್ ನೌಕಾನೆಲೆಯಲ್ಲಿ ಗುಂಡಿನ ದಾಳಿ ನಡೆದಿದೆ.

Pearl Harbor military base in Hawaii on lockdown after reports of shooting: Reuters

— ANI (@ANI)

ಬದೌರಿಯಾ ಭೇಟಿ ನೀಡಿದ್ದ ಹವಾಯಿ ಪರ್ಲ್ ಹಾರ್ಬರ್ ನೌಕಾನೆಲೆಯ ಬಳಿ, ಅಮೆರಿಕ ನೌಕಾಪಡೆಯ ಯೋಧನೋರ್ವ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದ. ದಾಳಿಯಲ್ಲಿ ಮೂವರು ಅಮೆರಿಕನ್ ಯೋಧರು ಗಂಭಿರವಾಗಿ ಗಾಯಗೊಂಡಿದ್ದಾರೆ.

ನಮ್ಮಿಂದ ದೊಡ್ಡ ತಪ್ಪಾಗಿದೆ: ಹೆಲಿಕಾಪ್ಟರ್ ಪತನದ ಸತ್ಯ ಬಿಚ್ಚಿಟ್ಟ ಬದೌರಿಯಾ!

ಗುಂಡಿನ ದಾಳಿ ನಡೆದ ಬೇಳೆ ಬದೌರಿಯಾ ಕೂಡ ನೌಕಾನೆಲೆಯಲ್ಲಿಯೇ ಇದ್ದು, ಸುರಕ್ಷಿತವಾಗಿದ್ದಾರೆ ಎಂದು ಭಾರತೀಯ ವಾಯುಸೇನೆಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

Chief of the Air Staff, Air Chief Marshal RKS Bhadauria is participating in Pacific Air Chiefs’ Symposium 2019 (PACS 2019) at Joint Base Pearl Harbor-Hickam, Hawaii. The theme for this year’s symposium is ‘A Collaborative Approach to Regional Security’. pic.twitter.com/BzmiQVFRXo

— Indian Air Force (@IAF_MCC)

ಇಂಡೋ-ಪೆಸಿಫಿಕ್ ಭಾಗದ ಭದ್ರತಾ ಪರಿಸ್ಥಿತಿಗಳ ಕುರಿತು ಚರ್ಚಿಸಲು, ಪ್ರಮುಖ ದೇಶಗಳ ವಾಯುಸೇನೆಯ ಮುಖ್ಯಸ್ಥರು ಹವಾಯಿ ಸೇನಾ ನೆಲೆಯಲ್ಲಿ ಬೀಡು ಬಿಟ್ಟಿದ್ದಾರೆ.

click me!