ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ಭಾರತೀಯ ವಾಯುಪಡೆ (ಐಎಎಫ್) ಅಧಿಕಾರಿಗಳಿಗೆ ಶಸ್ತ್ರಾಸ್ತ್ರ ವ್ಯವಸ್ಥೆಯ ಶಾಖೆಯನ್ನು ರಚಿಸಲು ಕೇಂದ್ರವು ಶನಿವಾರ ಅನುಮೋದನೆ ನೀಡಿದೆ.
ಚಂಡೀಗಢ (ಅ.8): ಏರ್ ಫೋರ್ಸ್ ದಿನದಂದು ಭಾರತೀಯ ವಾಯುಪಡೆಗೆ ಕೇಂದ್ರ ಸರ್ಕಾರ ದೊಡ್ಡ ಗಿಫ್ಟ್ ನೀಡಿದೆ. ಭಾರತೀಯ ವಾಯುಪಡೆಯ 90ನೇ ವಾರ್ಷಿಕೋತ್ಸವ್ ಸಂದರ್ಭದಲ್ಲಿ ಐಎಎಫ್ ಅಧಿಕಾರಿಗಳಿಗಾಗಿ ವೆಪನ್ ಸಿಸ್ಟಮ್ ಶಾಖೆಯನ್ನು ರಚಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಸ್ವಾತಂತ್ರ್ಯಾನಂತರದ ಬಳಿಕ ಇದೇ ಮೊದಲ ಬಾರಿಗೆ ಐಎಎಫ್‌ನಲ್ಲಿ ಹೊಸ ಕಾರ್ಯಾಚರಣಾ ಶಾಖೆಯನ್ನು ರಚಿಸಲಾಗಿದೆ. ಚಂಡೀಗಢದಲ್ಲಿ ನಡೆದ ಸಂಭ್ರಮಾಚರಣೆಯ ಸಂದರ್ಭದಲ್ಲಿ, ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಈ ಕುರಿತಾಗಿ ಮಾತನಾಡಿದ್ದು "ಇದು ಮುಖ್ಯವಾಗಿ ನಾಲ್ಕು ವಿಶೇಷ ಸ್ಟ್ರೀಮ್‌ಗಳ ಮೇಲ್ಮೈಯಿಂದ ಮೇಲ್ಮೈ ಕ್ಷಿಪಣಿಗಳು, ಮೇಲ್ಮೈಯಿಂದ ವಾಯು ಕ್ಷಿಪಣಿಗಳು, ದೂರದ ಪೈಲಟ್ ವಿಮಾನಗಳು ಮತ್ತು ಜೋಡಿ ಮತ್ತು ಬಹು-ಸಿಬ್ಬಂದಿ ವಿಮಾನಗಳಲ್ಲಿ ವೆಪನ್ ಸಿಸ್ಟಮ್ ಆಪರೇಟರ್‌ಗಳನ್ನು ನಿರ್ವಹಿಸುತ್ತದೆ" ಎಂದು ಹೇಳಿದ್ದಾರೆ. "ಫ್ಲೈಯಿಂಗ್ ತರಬೇತಿಗಾಗಿ ಮಾಡುವ ಖರ್ಚು ಇದರಿಂದ ಬಹುತೇಕವಾಗಿ ಕಡಿಮೆಯಾಗಲಿದೆ. ಈ ಶಾಖೆಯ ರಚನೆಯು 3,400 ಕೋಟಿ ರೂ.ಗಿಂತ ಹೆಚ್ಚಿನ ಉಳಿತಾಯಕ್ಕೆ ಕಾರಣವಾಗುತ್ತದೆ" ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶನಿವಾರ ಬೆಳಗ್ಗೆ ಇಲ್ಲಿನ ವಾಯುಪಡೆ ಸ್ಟೇಷನ್‌ನಲ್ಲಿ ಪಥಸಂಚಲನ ನಡೆಸಲಾಯಿತು. ಚೌಧರಿ ಪಥಸಂಚಲನವನ್ನು ಪರಿಶೀಲಿಸಿದರು, ನಂತರ ಮಾರ್ಚ್ ಪಾರ್ಸ್ ಕೂಡ ನಡೆಯಿತು. ವೆಸ್ಟರ್ನ್ ಏರ್ ಕಮಾಂಡ್, ಏರ್-ಆಫೀಸರ್ ಕಮಾಂಡಿಂಗ್-ಇನ್-ಚೀಫ್, ಏರ್ ಮಾರ್ಷಲ್ ಶ್ರೀಕುಮಾರ್ ಪ್ರಭಾಕರನ್ (Sri kumarnan Prabhakaran) ಸೇರಿದಂತೆ ಹಿರಿಯ ಐಎಎಫ್ (IAF) ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ವರ್ಷ ಐಎಎಫ್ ದಿನದ ಗಮನವು ಆತ್ಮನಿರ್ಭರತ ಅಥವಾ ಸ್ವದೇಶೀಕರಣದ ಮೇಲೆ ಕೇಂದ್ರೀಕೃತವಾಗಿದೆ. ಹಲವಾರು ಮೇಡ್-ಇನ್-ಇಂಡಿಯಾ ಪ್ಲಾಟ್‌ಫಾರ್ಮ್‌ಗಳು ಐಎಎಫ್ ದಿನದಂದು ಪ್ರದರ್ಶನವಾಗಲಿದೆ. ಕಳೆದ ವಾರವಷ್ಟೇ ಸೇನೆಗೆ ಹೊಸದಾಗಿ ಸೇರ್ಪಡೆಗೊಂಡ ಪ್ರಚಂಡ್ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್‌ಗಳು (Prachand Light Combat Helicopters) ಸೇರಿದಂತೆ, ಹಲವು ದೇಶೀಯ ನಿರ್ಮಿತ ಯುದ್ಧೋತ್ಪನಗಳ ಪ್ರದರ್ಶನ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಮುಖ್ಯ ಅತಿಥಿಯಾಗಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬೆಳಿಗ್ಗೆ ಮತ್ತು ಮಧ್ಯಾಹ್ನದವರೆಗೆ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
Rajasthanದಲ್ಲಿ ಅದಾನಿ 65000 ಕೋಟಿ ರೂ. ಹೂಡಿಕೆ: ಕೈಗೆ ಬಿಜೆಪಿ ಟಾಂಗ್
ಏರ್‌ಪೋರ್ಸ್‌ನ ಹೊಸ ಯುದ್ಧ ಸಮವಸ್ತ್ರ ಅನಾವರಣ: ಈ ಸಂದರ್ಭದಲ್ಲಿ ವಾಯುಪಡೆಯ ಯುದ್ಧ ಸಮವಸ್ತ್ರದ ಹೊಸ ಮಾದರಿಯನ್ನು ವಾಯುಪಡೆಯ ಮುಖ್ಯಸ್ಥರು ಬಿಡುಗಡೆ ಮಾಡಿದ್ದಾರೆ. ಸುಖ್ನಾ ಸರೋವರದಲ್ಲಿ ಮಧ್ಯಾಹ್ನ 2:30 ರಿಂದ ಸಂಜೆ 5:30 ರವರೆಗೆ ನಡೆಯುವ ಏರ್ ಶೋನಲ್ಲಿ(Air Show) ಸುಮಾರು 80 ಕ್ಕೂ ಹೆಚ್ಚು ವಿಮಾನಗಳು ಭಾಗವಹಿಸುತ್ತವೆ. ಇದರಲ್ಲಿ ರಫೇಲ್, ಚಿನೂಕ್, ತೇಜಸ್, ಜಾಗ್ವಾರ್, ಮಿಗ್-29 ಮತ್ತು ಮಿರಾಜ್-2000 ಸೇರಿದಂತೆ ಯುದ್ಧ ವಿಮಾನಗಳು ಆಗಸದಲ್ಲಿ ತಮ್ಮ ಚಮತ್ಕಾರದಿಂದ ಜನರನ್ನು ರೋಮಾಂಚನಗೊಳಿಸಲಿವೆ.
Maharashtra: ನಾಸಿಕ್‌ನಲ್ಲಿ ಭೀಕರ ಅಪಘಾತ: ಮಗು ಸೇರಿ 11 ಮಂದಿ ಸಜೀವ ದಹನ, 38 ಜನರಿಗೆ ಗಾಯ
1932 ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ರಾಯಲ್ ಏರ್ ಫೋರ್ಸ್‌ನ ಪೋಷಕ ಪಡೆಯಾಗಿ ಭಾರತೀಯ ವಾಯುಪಡೆಯ ಅಧಿಕೃತ ಸೇರ್ಪಡೆಯನ್ನು ಏರ್ ಫೋರ್ಸ್ ಡೇ ಗುರುತಿಸುತ್ತದೆ. ಪ್ರತಿ ವರ್ಷ, ಭಾರತೀಯ ವಾಯುಪಡೆಯ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಐಎಎಫ್‌ನ ವಿಂಟೇಜ್ ಏರ್‌ಕ್ರಾಫ್ಟ್ ಹಾರ್ವರ್ಡ್ ಮತ್ತು ಡಕೋಟಾ ಕೂಡ ಏರ್ ಶೋನಲ್ಲಿ ಕಾಣಿಸಿಕೊಳ್ಳಲಿದೆ. ಒಂಬತ್ತು ಹಾಕ್ ವಿಮಾನವನ್ನು ಒಳಗೊಂಡ ಸೂರ್ಯ ಕಿರಣ್ ಟೀಮ್ ಹಾಗೂ ನಾಲ್ಕು ಧ್ರುವ ಚಾಪರ್‌ಗಳನ್ನು ಒಳಗೊಂಡ ಸಾರಂಗ್ ಹೆಲಿಕಾಪ್ಟರ್ ಡಿಸ್‌ಪ್ಲೇ ಟೀಮ್ ಕೂಡ ಏರ್ ಶೋನಲ್ಲಿ ಕಾಣಿಸಿಕೊಳ್ಳಲಿದೆ. C-130 J ಮತ್ತು Sukhoi-30 ಅನ್ನು ಒಳಗೊಂಡಿರುವ ವಜ್ರಂಗ್ ರಚನೆ ಮತ್ತು ವಾಯುಗಾಮಿ ಮುಂಚಿನ ಎಚ್ಚರಿಕೆ ಮತ್ತು ನಿಯಂತ್ರಣ ವಿಮಾನಗಳು ಮತ್ತು ಸುಖೋಯ್-30 ಮತ್ತು Mig 29 ಫೈಟರ್ ಜೆಟ್‌ಗಳಿಂದ ನೇತ್ರ ರಚನೆಯೂ ಸಹ ಇರುತ್ತದೆ.