ಆಪರೇಷನ್‌ ಸಿಂದೂರ್‌ ವೇಳೆ 5 ಪಾಕಿಸ್ತಾನಿ ಜೆಟ್‌, 1 ಎಫ್‌ 16 ಧ್ವಂಸ: ಏರ್‌ ಫೋರ್ಸ್‌ ಚೀಫ್‌ ಅಧಿಕೃತ ಮಾಹಿತಿ

Published : Aug 09, 2025, 01:13 PM ISTUpdated : Aug 09, 2025, 01:36 PM IST
Air Chief Marshal AP Singh

ಸಾರಾಂಶ

ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ವಾಯುಪಡೆಯು ಐದು ಪಾಕಿಸ್ತಾನಿ ಯುದ್ಧ ವಿಮಾನಗಳು ಮತ್ತು ಒಂದು ದೊಡ್ಡ ವಿಮಾನವನ್ನು ಹೊಡೆದುರುಳಿಸಿದೆ. ಕ್ಷಿಪಣಿ ದಾಳಿಯಲ್ಲಿ ಹ್ಯಾಂಗರ್‌ನಲ್ಲಿದ್ದ ಎರಡು ಯುದ್ಧವಿಮಾನಗಳು ನಾಶವಾಗಿವೆ. 

ಬೆಂಗಳೂರು (ಆ.9): ಆಪರೇಷನ್ ಸಿಂಧೂರ್ ಸಮಯದಲ್ಲಿ ಐದು ಪಾಕಿಸ್ತಾನಿ ಯುದ್ಧ ವಿಮಾನಗಳು ಮತ್ತು ಇನ್ನೊಂದು ದೊಡ್ಡ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಶನಿವಾರ ಅಧಿಕೃತವಾಗಿ ಹೇಳಿದ್ದಾರೆ. ಮೆಗಾ ಮಿಲಿಟರಿ ಕಾರ್ಯಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನದ ವಾಯುಪಡೆಗೆ ಆದ ಹಾನಿಯ ಪ್ರಮಾಣವನ್ನು ಇದೇ ಮೊದಲ ಬಾರಿಗೆ ಭಾರತದ ವಾಯುಪಡೆ ಬಹಿರಂಗವಾಗಿ ಹೇಳಿದೆ. ಆಕಾಶದಲ್ಲಿದ್ದ ಪಾಕಿಸ್ತಾನದ ಆರು ಯುದ್ಧವಿಮಾನಗಳನ್ನು ಹೊಡೆದುರುಳಿಸಿದ್ದು ಮಾತ್ರವಲ್ಲದೆ, ಆಪರೇಷನ್‌ ಸಿಂದೂರ್‌ ದಾಳಿಯ ಸಮಯದಲ್ಲಿ ಹ್ಯಾಂಗರ್‌ನಲ್ಲಿದ್ದ (ಏರ್‌ಫೀಲ್ಡ್‌ನಲ್ಲಿ ಯುದ್ಧವಿಮಾನ ಇರಿಸುವ ಸ್ಥಳ) ಕನಿಷ್ಠ ಎರಡು ಯುದ್ಧವಿಮಾನಗಳು ಕ್ಷಿಪಣಿ ದಾಳಿಯಲ್ಲಿ ನಾಶವಾಗಿದೆ ಎಂದು ಏರ್‌ ಫೋರ್ಸ್‌ ಚೀಫ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ವಾರ್ಷಿಕ 16 ನೇ ಏರ್ ಚೀಫ್ ಮಾರ್ಷಲ್ ಎಲ್ ಎಂ ಕತ್ರೆ ಉಪನ್ಯಾಸದಲ್ಲಿ ಮಾತನಾಡಿದ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್, ಸಾಕಾಶ ಮಾರ್ಗದಲ್ಲಿ ಪಾಕಿಸ್ತಾನದ ಯುದ್ಧವಿಮಾನಗಳನ್ನು ಹೊಡೆದುರುಳಿಸಲು ರಷ್ಯಾ ನಿರ್ಮಿತ ಎಸ್‌-400 ವಾಯು ರಕ್ಷಣಾ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗಿತ್ತು ಎಂದಿದ್ದಾರೆ.

ಹೊಡೆದುರುಳಿಸಿದ "ಬಿಗ್‌ ಬರ್ಡ್‌" ಬಹುಶಃ AWACS (ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ) ಅಥವಾ ಎಲೆಕ್ಟ್ರಾನಿಕ್ ಗುಪ್ತಚರ ವ್ಯವಸ್ಥೆ ಆಗಿರುವ ಸಾಧ್ಯತೆ ಹೆಚ್ಚಿದೆ. ಇದರ ನಷ್ಟವು ಪಾಕಿಸ್ತಾನದ ವಾಯು ಬಲಕ್ಕೆ ಭಾರಿ ಹೊಡೆತವನ್ನು ನೀಡಲಿದೆ ಎಂದು ಅಂದಾಜಿಸಲಾಗಿದೆ. ಮೇ 7 ರ ದಾಳಿಯ ಸಮಯದಲ್ಲಿ ದಾಳಿಗೊಳಗಾದ ಭಯೋತ್ಪಾದಕ ಗುರಿಗಳ ಉಪಗ್ರಹ ಚಿತ್ರಗಳನ್ನು ಏರ್ ಚೀಫ್ ಮಾರ್ಷಲ್ ಸಿಂಗ್ ಹಂಚಿಕೊಂಡಿದ್ದಾರೆ.

ನಾವು ಕನಿಷ್ಠ ಐದು ಫೈಟರ್‌ಗಳ ಕಿಲ್‌ ಕನ್ಫರ್ಮ್‌ ಮಾಡುತ್ತೇವೆ. ಅದರೊಂದಿಗೆ ಒಂದು ದೊಡ್ಡ ಏರ್‌ಕ್ರಾಫ್ಟ್‌ ಕೂಡ ಪತನವಾಗಿದೆ. ಇದು ಅದು ELINT ವಿಮಾನ ಅಥವಾ AEW &C ವಿಮಾನವಾಗಿರಬಹುದು, ಇದನ್ನು ಸುಮಾರು 300 ಕಿಲೋಮೀಟರ್ ದೂರದಿಂದಲೇ ಹೊಡೆದುಹಾಕಲಾಗಿದೆ. ಸರ್ಫೇಸ್‌ ಟು ಏರ್‌ ಕಿಲ್‌ ವಿಚಾರದಲ್ಲಿ ನಾವು ಮಾತನಾಡಬಹುದಾದ ಅತಿದೊಡ್ಡ ದಾಳಿ ಇದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ದಾಳಿಗೊಳಗಾದ ಪ್ರಮುಖ ವಾಯುನೆಲೆಗಳಲ್ಲಿ ಒಂದು ಶಹಬಾಜ್ ಜಕೋಬಾಬಾದ್ ವಾಯುನೆಲೆ. ಇಲ್ಲಿ ಎಫ್ -16 ಹ್ಯಾಂಗರ್ ಇದೆ. ಹ್ಯಾಂಗರ್‌ನ ಅರ್ಧದಷ್ಟು ಭಾಗ ಸಂಪೂರ್ಣವಾಗಿ ಹೋಗಿದೆ. ಮತ್ತು ಒಳಗೆ ಕೆಲವು ವಿಮಾನಗಳು ಹಾನಿಗೊಳಗಾಗಿವೆ ಎನ್ನುವುದು ಖಚಿತ ಮಾಹಿತಿ. ನಾವು ಮುರಿಡ್ಕೆ ಮತ್ತು ಚಕ್ಲಾಲಾದಂತಹ ಕನಿಷ್ಠ ಎರಡು ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳ ಮೇಲೂ ದಾಳಿ ಮಾಡಲು ಸಾಧ್ಯವಾಗಿದೆ. ಕನಿಷ್ಠ 6 ರಾಡಾರ್‌ಗಳು, ಕೆಲವು ದೊಡ್ಡದು ಹಾಗೂ ಇನ್ನೂ ಕೆಲವು ಸಣ್ಣದು ಹಾನಿಯಾಗಿದೆ. ಆ AEW&C ಹ್ಯಾಂಗರ್‌ನಲ್ಲಿ ಕನಿಷ್ಠ ಒಂದು AEW&C ಮತ್ತು ಕೆಲವು F-16 ಗಳ ಹೋಗಿರುವ ಸೂಚನೆ ಸಿಕ್ಕಿದೆ. ಅಲ್ಲಿ ಅವುಗಳ ನಿರ್ವಹಣೆ ನಡೆಯುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ.

"ನಾವು (ಬಹಾವಲ್ಪುರ್ - ಜೆಇಎಂ ಪ್ರಧಾನ ಕಚೇರಿಯಲ್ಲಿ) ಉಂಟುಮಾಡಿದ ಹಾನಿಯ ಮೊದಲು ಮತ್ತು ನಂತರದ ಚಿತ್ರಗಳು ಇವು. ಇಲ್ಲಿ ಯಾವುದೇ ಕಟ್ಟಡಗಳೇ ಇಲ್ಲ. ಪಕ್ಕದ ಕಟ್ಟಡಗಳು ಸಾಕಷ್ಟು ಸುರಕ್ಷಿತವಾಗಿವೆ. ನಮ್ಮಲ್ಲಿ ಉಪಗ್ರಹ ಚಿತ್ರಗಳು ಮಾತ್ರವಲ್ಲದೆ, ಸ್ಥಳೀಯ ಮಾಧ್ಯಮಗಳಿಂದ ಈ ಕಟ್ಟಡದ ಒಳಗಿನ ಚಿತ್ರವನ್ನೂ ಪಡೆದುಕೊಂಡಿದ್ದೇವೆ' ಎಂದು ಅವರು ಹೇಳಿದ್ದಾರೆ.

ರಾಜಕೀಯ ಅಡೆತಡೆ ಇದ್ದಿರಲಿಲ್ಲ ಎಂದ ಏರ್‌ಚೀಫ್‌

ವಾಯುಪಡೆಗೆ ಯಾವುದೇ ರಾಜಕೀಯ ಅಡೆತಡೆಗಳು ಎದುರಾಗಲಿಲ್ಲ ಮತ್ತು ದಾಳಿಗಳನ್ನು ಯೋಜಿಸಲು ಮತ್ತು ಕಾರ್ಯಗತಗೊಳಿಸಲು ಸಂಪೂರ್ಣ ಸ್ವಾತಂತ್ರ್ಯವಿತ್ತು ಎಂದು ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಹೇಳಿದ್ದಾರೆ. "ಯಶಸ್ಸಿಗೆ ಪ್ರಮುಖ ಕಾರಣ ರಾಜಕೀಯ ಇಚ್ಛಾಶಕ್ತಿಯ ಉಪಸ್ಥಿತಿ. ನಮಗೆ ಸ್ಪಷ್ಟವಾದ ನಿರ್ದೇಶನಗಳನ್ನು ನೀಡಲಾಗಿತ್ತು. ನಮ್ಮ ಮೇಲೆ ಯಾವುದೇ ನಿರ್ಬಂಧಗಳನ್ನು ವಿಧಿಸಿರಲಿಲ್ಲ. ಯಾವುದೇ ನಿರ್ಬಂಧಗಳಿದ್ದರೆ, ಅವು ಸ್ವಯಂ ನಿರ್ಮಿತವಾಗಿದ್ದವು. ನಾವು ಎಷ್ಟು ದಾಳಿ ಮಾಡಬೇಕು ಅನ್ನೋದನ್ನು ನಾವೇ ನಿರ್ಧರಿಸಿದ್ದೆವು. ಯೋಜನೆ ಮತ್ತು ಕಾರ್ಯಗತಗೊಳಿಸಲು ನಮಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು. ನಾವು ಅದರ ಬಗ್ಗೆ ಪ್ರಬುದ್ಧವಾಗಿರಬೇಕು ಬಯಸಿದ್ದರಿಂದ ನಮ್ಮ ದಾಳಿಗಳನ್ನು ಕ್ಯಾಬಿರೇಟ್‌ ಮಾಡಲಾಯಿತು," ಎಂದು ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಸಿಂಗ್ ಹೇಳಿದರು.

ಏಪ್ರಿಲ್ 22 ರಂದು 26 ಅಮಾಯಕರ ಜೀವಗಳನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ, ಭಾರತವು ಮೇ 7 ರಂದು 'ಆಪರೇಷನ್‌ ಸಿಂದೂರ್' ಎಂಬ ಸಂಕೇತನಾಮದ ಮಿಲಿಟರಿ ದಾಳಿಯಲ್ಲಿ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ದಾಳಿ ಮಾಡಿ ನೂರಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಿತ್ತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India News Live: ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂ ಬರ್ಬರ ಹ*ತ್ಯೆ
ಕ್ರೀಡಾ ಕ್ಷೇತ್ರದಲ್ಲಿದ್ದ ಪಕ್ಷಪಾತಕ್ಕೆ ಹಿಂದೆಯೇ ಕಡಿವಾಣ : ಪ್ರಧಾನಿ ನರೇಂದ್ರ ಮೋದಿ