
ಮುಂಬೈ: ಇಲ್ಲಿನ ಕಲ್ಯಾಣ್‌ನಲ್ಲಿ ಮತ್ತೊಮ್ಮೆ ಮರಾಠಿ ಹಾಗೂ ಮರಾಠಿಯೇತರ ವಿವಾದ ನಡೆದಿದೆ. ಅನ್ಯ ಭಾಷೆಯಲ್ಲಿ ಹೋಟೆಲ್ ಫಲಕ ಹಾಕಿದ ಸಂಬಂಧ ಮಹಾರಾಷ್ಟ್ರ ನವನಿರ್ಮಾಣ ಸೇನಾ ಕಾರ್ಯಕರ್ತರು ದಕ್ಷಿಣ ಭಾರತದ ಇಡ್ಲಿ ಹೋಟೆಲ್ ಮಾಲೀಕನೊಬ್ಬನನ್ನು ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಂತರ, ಹೋಟೆಲ್ ಚಾಲಕ ಕ್ಷಮೆಯಾಚಿಸಿದ್ದಾರೆ. ಈ ಘಟನೆ ಕಲ್ಯಾಣ್ ಪೂರ್ವ ದುರ್ಗಾ ಮಾತಾ ದೇವಾಲಯ ಪ್ರದೇಶದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.
'ನಾವು ಹಿಂದೂಗಳೇ ವಿನಾ ಹಿಂದಿಗಳಲ್ಲ'; ಹಿಂದಿ ಹೇರಿಕೆ ವಿರುದ್ಧ ಮಹಾರಾಷ್ಟ್ರದಲ್ಲೂ ಕಿಡಿ!
ಹಿಂದಿ ಹೇರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ಜತೆ ದಕ್ಷಿಣದ ರಾಜ್ಯಗಳು ತೊಡೆತಟ್ಟಿರುವ ಮಧ್ಯೆಯೇ ಮಹಾರಾಷ್ಟ್ರ ಸರ್ಕಾರ 1-5ನೇ ತರಗತಿಯ ಮಕ್ಕಳಿಗೆ 3ನೇ ಭಾಷೆಯಾಗಿ ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಪಕ್ಷಗಳು ಕಿಡಿಕಾರಿದ್ದರೆ, ಸರ್ಕಾರ ಸಮರ್ಥಿಸಿಕೊಂಡಿದೆ.
ಹಿಂದಿ ಕಲಿಕೆಯು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರ ಜಾರಿಯ ಭಾಗವಾಗಿದೆ. ಮಹಾರಾಷ್ಟ್ರದಲ್ಲಿ ಸದ್ಯ 1ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಮೊದಲ ಭಾಷೆಯಾಗಿ ಮರಾಠಿ ಮತ್ತು ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ಮಾತ್ರ ಕಡ್ಡಾಯವಾಗಿದೆ. ಇನ್ನು ಮುಂದೆ ಹಿಂದಿಯನ್ನು ಕೂಡ ಕಡ್ಡಾಯಗೊಳಿಸಲಾಗುತ್ತಿದೆ. ಅದು 3ನೇ ಭಾಷೆಯಾಗಿ 1ರಿಂದ 4ನೇ ತರಗತಿ ಮಕ್ಕಳ ಜತೆಗೆ 5ನೇ ತರಗತಿಯ ಮಕ್ಕಳಿಗೂ (ಒಟ್ಟಾರೆ 1ರಿಂದ 5ನೇ ತರಗತಿ) 2025-26ರಿಂದಲೇ ಜಾರಿಗೆ ಬರಲಿದೆ. ಇದರಿಂದ ತ್ರಿಭಾಷಾ ಸೂತ್ರ ಜಾರಿಗೆ ಈ ತರಗತಿಗಳಿಗೆ ಬಂದಂತಾಗಲಿದೆ.
ಇನ್ನು ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) 1ನೇ ತರಗತಿಗೆ ಈ ನೀತಿ 2025-26ನೇ ಸಾಲಿನಿಂದ ಜಾರಿಗೆ ಬರಲಿದ್ದು 2, 3, 4 ಮತ್ತು 6ನೇ ಕ್ಲಾಸಿಗೆ 2026-27ನೇ ಸಾಲಿನಿಂದ, 5,9 ಮತ್ತು 11ನೇ ಕ್ಲಾಸ್ ಮಕ್ಕಳಿಗೆ 2027-28ನೇ ಸಾಲಿನಿಂದ ಹಾಗೆ 8, 10 ಮತ್ತು 12ನೇ ತರಗತಿಯ ಮಕ್ಕಳಿಗೆ 2028-29ರಿಂದ ಅನ್ವಯವಾಗಲಿದೆ ಎಂದು ಸರ್ಕಾರದ ಆದೇಶ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ