'ಚಾರ್ ಮಿನಾರ್ ಕಟ್ಟಿದ್ದು ನಮ್ಮಪ್ಪ, ನಿಮ್ಮಪ್ಪ ಅಲ್ಲ'| ಎಐಎಂಐಎಂ ಅಕ್ಬರುದ್ದೀನ್ ಒವೈಸಿ ವಿವಾದಾತ್ಮಕ ಹೇಳಿಕೆ| ಪ್ರಧಾನಿ ಮೋದಿ ರಾಷ್ಟ್ರಧ್ವಜ ಹಾರಿಸುವ ಕೆಂಪುಕೋಟೆ ನಮ್ಮ ಪೂರ್ವಿಕರು ಕಟ್ಟಿದ್ದು ಎಂದ ಜ್ಯೂ.ಒವೈಸಿ| ಸಿಎಎ, ಎನ್‌ಆರ್‌ಸಿ ಜಾರಿ ಮಾಡಲು ಬಿಡುವುದಿಲ್ಲ ಎಂದ ಅಕ್ಬರುದ್ದೀನ್ ಒವೈಸಿ|
ಹೈದರಾಬಾದ್(ಜ.22): ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗಿವ ಎಐಎಂಐಎಂ ಶಾಸಕ ಅಕ್ಬರುದ್ದೀನ್ ಒವೈಸಿ, ಸಿಎಎ ಹಾಗೂ ಎನ್‌ಆರ್‌ಸಿ ಜಾರಿ ವಿರೋಧಿಸಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಎನ್‌ಆರ್‌ಸಿ ಹಾಗೂ ಸಿಎಎ ನೆಪದಲ್ಲಿ ಪೌರತ್ವ ಪ್ರಮಾಣಪತ್ರ ಕೇಳಲು ಬರುವವರಿಗೆ, 'ಚಾರ್ ಮಿನಾರ್ ಕಟ್ಟಿದ್ದು ನಮ್ಮಪ್ಪ, ನಿಮ್ಮಪ್ಪ ಅಲ್ಲ..' ಎಂದು ಹೇಳಿ ಎಂದು ಅಕ್ಬರುದ್ದೀನ್ ಒವೈಸಿ ಹೇಳಿದ್ದಾರೆ.
ಗಡ್ಡದಾರಿ ವ್ಯಕ್ತಿಯೊಂದಿಗೆ.....ಶಾಗೆ ಸಲಹೆ ನೀಡಿದ ಒವೈಸಿ!
ಕೇವಲ ಚಾರ್ ಮಿನಾರ್ ಅಷ್ಟೇ ಅಲ್ಲ, ಪ್ರಧಾನಿ ಮೋದಿ ಪ್ರತಿವರ್ಷ ರಾಷ್ಟ್ರಧ್ವಜ ಹಾರಿಸುವ ಕೆಂಪು ಕೋಟೆ ಕೂಡ ನಮ್ಮ ಪೂರ್ವಜರೇ ಕಟ್ಟಿದ್ದು ಎಂದು ಹೇಳಿ ಎಂದು ಒವೈಸಿ ಜನತೆಗೆ ಕರೆ ನೀಡಿದ್ದಾರೆ.
Our work is our identity https://t.co/udG8wdZFcF
— AIMIM (@aimim_national)ಸಿಎಎ, ಎನ್‌ಆರ್‌ಸಿ ಜಾರಿ ಮಾಡಲು ಬಿಡುವುದಿಲ್ಲ ಎಂದಿರುವ ಅಕ್ಬರುದ್ದೀನ್ ಒವೈಸಿ, ಯಾವುದೇ ಕಾರಣಕ್ಕೂ ಅಲ್ಪಸಂಖ್ಯಾತರು ಹೆದರುವ ಅವಶ್ಯಕತೆ ಇಲ್ಲ ಎಂದು ಭರವಸೆ ನೀಡಿದರು. ಈ ದೇಶಕ್ಕೆ ನಾವು ನೀಡಿರುವ ಕೊಡುಗೆ ಸ್ಪಷ್ಟವಾಗಿ ಕಣ್ಣಿಗೆ ಕಾಣಿಸುತ್ತಿದ್ದು, ನಮ್ಮ ಕೆಲಸವೇ ನಮ್ಮ ಗುರುತು ಎಂದು ಒವೈಸಿ ಅಭಿಪ್ರಾಯಪಟ್ಟರು.
ಪ್ರಧಾನಿ ಮೋದಿಗೆ ಅಕ್ಬರುದ್ದಿನ್ ಓವೈಸಿ ಚಾಲೆಂಜ್
ಕರೀಂನಗರದಲ್ಲಿ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅಕ್ಬರುದ್ದೀನ್, ಸಿಎಎ ಜಾರಿಯ ಮೂಲಕ ಮುಸ್ಲಿಮರಲ್ಲಿ ಭಯ ಹುಟ್ಟಿಸುವ ಪ್ರಯತ್ನ ನಡೆಯುತ್ತಿದ್ದು, ಮೋದಿ ಸರ್ಕಾರದ ಈ ಹುನ್ನಾರವನ್ನು ನಾವು ವಿಫಲಗೊಳಿಸುತ್ತೇವೆ ಎಂದು ಹರಿಹಾಯ್ದರು.