The Real Kerala Story: ಕೇರಳದ ಇನ್ನೊಂದು ಕಥೆ: ವೈರಲ್ ಆಯ್ತು ಆ ಸೌಹಾರ್ದ ವಿಡಿಯೋ!

Published : Feb 28, 2026, 01:32 PM IST
Keralas Unity

ಸಾರಾಂಶ

'ಕೇರಳ ಸ್ಟೋರಿ' ಚಿತ್ರದ ವಿವಾದದ ನಡುವೆ, 'ದಿ ರಿಯಲ್ ಕೇರಳ ಸ್ಟೋರಿ' ಎಂಬ ಶೀರ್ಷಿಕೆಯಡಿ ಕೋಮು ಸೌಹಾರ್ದತೆ ಸಾರುವ ಘಟನೆಗಳು ವೈರಲ್ ಆಗಿವೆ. ಕೊಚ್ಚಿ ಮೆಟ್ರೋ ಪಿಲ್ಲರ್ ಮೇಲಿದ್ದ ಬೆಕ್ಕಿನ ರಕ್ಷಣೆ ಹಾಗೂ ಆಟ್ಟುಕಾಲ್ ಪೊಂಗಲ್ ಹಬ್ಬದ ವೇಳೆ ಪಾಳಯಂ ಇಮಾಮ್ ನೀಡಿದ ಪ್ರೀತಿಯ ಸಂದೇಶವೇ ಇದಕ್ಕೆ ಸಾಕ್ಷಿಯಾಗಿದೆ.

ತಿರುವನಂತಪುರಂ: ವಿವಾದಿತ 'ಕೇರಳ ಸ್ಟೋರಿ' ಸಿನಿಮಾದ ಎರಡನೇ ಭಾಗ ನೋಡೋಕೆ ಕೇರಳದ ಥಿಯೇಟರ್‌ಗಳಲ್ಲಿ ಜನರೇ ಇಲ್ಲ. ಇಂಥಾ ಹೊತ್ತಲ್ಲೇ, ಸೋಷಿಯಲ್ ಮೀಡಿಯಾದಲ್ಲಿ ಒಂದು ಎಐ ವಿಡಿಯೋ ಸಖತ್ ಸದ್ದು ಮಾಡ್ತಿದೆ.

ಕೊಚ್ಚಿ ಮೆಟ್ರೋ ಪಿಲ್ಲರ್ ಮೇಲೆ ಸಿಲುಕಿದ್ದ ಬೆಕ್ಕೊಂದನ್ನು ರಕ್ಷಣೆ ಮಾಡಿದ ಘಟನೆಯ ಎಐ ವಿಡಿಯೋ ಇದಾಗಿದ್ದು, 'ದಿ ರಿಯಲ್ ಕೇರಳ ಸ್ಟೋರಿ' ಅನ್ನೋ ಹೆಸರಲ್ಲಿ ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ, ಕೊಚ್ಚಿ ಮೆಟ್ರೋ ಪಿಲ್ಲರ್ ಮೇಲೆ ಹಲವು ದಿನಗಳಿಂದ ಸಿಲುಕಿದ್ದ ಬೆಕ್ಕನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದರು. ಈ ಘಟನೆ ಒಂದು ಕಡೆಯಾದರೆ, ಇನ್ನೊಂದು ಹೃದಯಸ್ಪರ್ಶಿ ಘಟನೆ ಕೂಡ ನಡೆದಿದೆ.

 

 

ಇಮಾಮ್ ಸಂದೇಶ 

ತಿರುವನಂತಪುರಂನಲ್ಲಿ ಆಟ್ಟುಕಾಲ್ ಪೊಂಗಲ್ ಹಬ್ಬಕ್ಕೆ ಸಿದ್ಧತೆ ನಡೆಯುತ್ತಿದೆ. ಈ ವೇಳೆ, ಪೊಂಗಲ್ ಹಬ್ಬಕ್ಕೆ ಬರುವ ಭಕ್ತರಿಗೆ ಸಹಾಯ ಮಾಡುವಂತೆ ಪಾಳಯಂ ಇಮಾಮ್ ನೀಡಿದ ಸಂದೇಶ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ದ್ವೇಷ,  ವಿಭಜನೆ ಹೆಚ್ಚುತ್ತಿರುವ ಈ ಕಾಲದಲ್ಲಿ, ಇದೇ ನಿಜವಾದ ಕೇರಳ ಸ್ಟೋರಿ ಅಂತ ಜನ ಇಮಾಮ್ ಅವರ ಸಂದೇಶವನ್ನು ಶ್ಲಾಘಿಸುತ್ತಿದ್ದಾರೆ.

'ರಂಜಾನ್ ಉಪವಾಸದ ಸಮಯವಾದ್ದರಿಂದ, ಪೊಂಗಲ್ ಹಬ್ಬಕ್ಕೆ ಬರುವವರಿಗೆ ತಂಪು ಪಾನೀಯ, ಸಾಧ್ಯವಾದರೆ ಊಟದ ವ್ಯವಸ್ಥೆ ಮಾಡಿ. ದ್ವೇಷ ಮತ್ತು ಇಸ್ಲಾಮೋಫೋಬಿಯಾವನ್ನು ನಾವು ಹೀಗೆಯೇ ಎದುರಿಸಬೇಕು. ಪ್ರೀತಿ, ಸಹೋದರತೆಗಾಗಿ ನಾವು ಜಾತಿ-ಧರ್ಮ ಮೀರಿ ಮಾಡುವ ಇಂಥ ಪ್ರಯತ್ನಗಳನ್ನು ಅಲ್ಲಾ ಮೆಚ್ಚುತ್ತಾನೆ' ಅಂತ ಪಾಳಯಂ ಮಸೀದಿಯ ಇಮಾಮ್ ಸುಹೈಬ್ ಮೌಲವಿ ಅವರು ಜುಮ್ಮಾ ನಮಾಜ್ ವೇಳೆ ಹೇಳಿದ್ದರು.

ಭಕ್ತರಿಗಾಗಿ ಬಾಗಿಲು ತೆರೆಯುವ ಮಸೀದಿ ಮತ್ತು ಚರ್ಚ್

ಪ್ರತಿ ವರ್ಷವೂ ಪೊಂಗಲ್ ಹಬ್ಬದ ದಿನ, ಸುಡು ಬಿಸಿಲಿನಲ್ಲಿರುವ ಭಕ್ತರಿಗಾಗಿ ಪಾಳಯಂ ಮಸೀದಿ ಮತ್ತು ಸೆಂಟ್ ಜೋಸೆಫ್ ಚರ್ಚ್ ತಮ್ಮ ಬಾಗಿಲುಗಳನ್ನು ತೆರೆಯುತ್ತವೆ. ಭಕ್ತರು ವಿಶ್ರಾಂತಿ ಪಡೆಯಲು, ಶೌಚಾಲಯ ಬಳಸಲು ಅನುಕೂಲವಾಗುವಂತೆ ಮಸೀದಿಯಲ್ಲಿ ಪ್ರಾರ್ಥನಾ ಸಮಯವನ್ನು ಕೂಡ ಬದಲಾಯಿಸುತ್ತಾರೆ.

ಕೇರಳ ಸ್ಟೋರಿ-2 ಬಿಡುಗಡೆಗೆ ಹೈಕೋರ್ಟ್‌ ಗ್ರೀನ್ ಸಿಗ್ನಲ್‌

ವಿವಾದಕ್ಕೆ ಕಾರಣವಾಗಿರುವ ಬಹು ನಿರೀಕ್ಷಿತರ ಕೇರಳ ಸ್ಟೋರಿ- 2 ಸಿನಿಮಾದ ಬಿಡುಗಡೆಗೆ ಕೊನೆಗೂ ಗ್ರೀನ್ ಸಿಗ್ನಲ್‌ ದೊರಕಿದೆ. ಚಿತ್ರದ ಬಿಡುಗಡೆಗೆ ತಡೆ ನೀಡಿದ್ದ ಕೇರಳ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ತೀರ್ಪಿಗೆ ವಿಭಾಗೀಯ ಪೀಠ 2 ವಾರ ತಡೆಯಾಜ್ಞೆ ನೀಡಿದೆ.

ಶುಕ್ರವಾರ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಏಕಸದಸ್ಯ ಪೀಠ 15 ದಿನ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ನಿರ್ಮಾಪಕ ವಿಪುಲ್‌ ಅಮೃತ್‌ಲಾಲ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ। ಎಸ್‌.ಎ. ಧರ್ಮಾಧಿಕಾರಿ ಹಾಗೂ ಪಿ.ವಿ. ಬಾಲಕೃಷ್ಣನ್‌ ಅವರಿದ್ದ ಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ಕೊಟ್ಟಿದೆ.

ಇದನ್ನೂ ಓದಿ: ₹100ಗೆ ಮನೆಗೆಲಸ; ಕಂಪನಿಗಳಿಗೆ ಕೋಟಿ ಕೋಟಿ ನಷ್ಟ, ಕೆಲಸಗಾರರಿಗೆ ಭಾರಿ ಸಂಬಳ.. ಇದೆಷ್ಟು ದಿನ ನಡೆಯುತ್ತೋ?

‘ಚಿತ್ರಕ್ಕೆ ಪ್ರಮಾಣಪತ್ರ ನೀಡುವ ವೇಳೆ ಸೆನ್ಸಾರ್‌ ಮಂಡಳಿಯು ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ’ ಎಂದು ಏಕ ಸದಸ್ಯ ಪೀಠ ಸಿನಿಮಾ ಬಿಡುಗಡೆಗೆ ಮಧ್ಯಂತರ ತಡೆ ನೀಡಿತ್ತು. ಹೀಗಾಗಿ ಶುಕ್ರವಾರ ಚಿತ್ರ ಬಿಡುಗಡೆ ಆಗಿರಲಿಲ್ಲ. ಟಿಕೆಟ್ ಹಣವನ್ನು ಚಿತ್ರ ತಂಡ ರೀಫಂಡ್ ಮಾಡಿತ್ತು.

ಇದನ್ನೂ ಓದಿ: Amitabh Bachchan: "ನಿಷ್ಠಾವಂತ ಪುರುಷರು ಜಗತ್ತಿನ ಪ್ರತಿಯೊಂದು ಮೂಲೆಯಲ್ಲೂ ಸಿಗುತ್ತಾರೆ, ಆದರೆ ದುರದೃಷ್ಟವಶಾತ್ ಭೂಮಿ ಉರುಟಾಗಿದೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಳಪತಿ ವಿಜಯ್ ಪತ್ನಿ ಸಂಗೀತಾ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ನಟಿ ತ್ರಿಷಾ ಕೃಷ್ಣನ್ ವಿರುದ್ಧ ಭಾರೀ ಸೈಬರ್ ದಾಳಿ
ಸ್ಟಾರ್‌ ನಟಿ ಜೊತೆ ಅಕ್ರಮ ಸಂಬಂಧ, ಆಕೆಯ ಜೊತೆ ಫಾರಿನ್‌ ಟ್ರಿಪ್‌: ವಿಚ್ಛೇದನಕ್ಕೆ ಕಾರಣ ತಿಳಿಸಿದ ವಿಜಯ್‌ ಪತ್ನಿ