LG ಮೆಡಿಕಲ್ ಕಾಲೇಜು ಇನ್ಮುಂದೆ ಪ್ರಧಾನಿ Narendra Modi ಕಾಲೇಜು, ಮರುನಾಮಕರಣದ ಹಿಂದಿದೆ ರೋಚಕ ಕಾರಣ!

By Suvarna NewsFirst Published Sep 15, 2022, 5:35 PM IST
Highlights

ಅಹಮ್ಮದಾಬಾದ್‌ ಮಣಿನಗರದಲ್ಲಿರುವ ಎಲ್‌ಜಿ ಮೆಡಿಕಲ್ ಕಾಲೇಜಿನ ಹೆಸರು ಬದಲಿಸಲು ನಿರ್ಧರಿಸಲಾಗಿದೆ. ಈ ಕುರಿತು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ. ಶೀಘ್ರದಲ್ಲೇ ಎಲ್‌ಜಿ ಮೆಡಿಕಲ್ ಕಾಲೇಜಿನ ಹೆಸರು ಪ್ರಧಾನಿ ನರೇಂದ್ರ ಮೋದಿ ಕಾಲೇಜು ಎಂದು ಬದಲಾಗಲಿದೆ. ಇದಕ್ಕೆ ಒಂದು ಕಾರಣವೂ ಇದೆ.
 

ಅಹಮ್ಮದಾಬಾದ್(ಸೆ.15):  ಮಣಿನಗರದಲ್ಲಿರುವ ಪ್ರತಿಷ್ಠಿತ LG ಮೆಡಿಕಲ್ ಕಾಲೇಜು ಹೆಸರನ್ನು ಮರುನಾಮಕರಣ ಮಾಡಲು ಅಹಮ್ಮದಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಮುಂದಾಗಿದೆ. ಈ ಕುರಿತು ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಹಾಗೂ ಮುನ್ಸಿಪಲ್ ಕಾರ್ಪೋರೇಶನ್ ಮಹತ್ವದ ಸಭೆ ನಡೆಸಿದೆ. ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿರುವ ಹಿನ್ನಲೆಯಲ್ಲಿ LG ಮೆಡಿಕಲ್ ಕಾಲೇಜು ಇನ್ಮುಂದೆ ಪ್ರಧಾನಿ ನರೇಂದ್ರ ಮೋದಿ ಕಾಲೇಜು ಎಂದು ಬದಲಾಗಲಿದೆ. ಮೋದಿ ಹೆಸರಿಡಲು ಒಂದು ಕಾರಣವೂ ಇದೆ. ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿ ಭಾರಿ ಸಂಚಲನ ಸೃಷ್ಟಿಸಿದ್ದರು.  ಅಹಮ್ಮದಾಬಾದ್‌ನ ಮಣಿನಗರ  ಕ್ಷೇತ್ರದಿಂದ 11 ಬಾರಿ ಆಯ್ಕೆಯಾಗಿರುವ ಮೋದಿಗೆ ಗೌರವ ಸೂಚಿಸುವ ಈ ನಿರ್ಧಾರ ಕೈಗೊಂಡಿರುವುದಾಗಿ ಅಹಮ್ಮದಾಬಾದ್ ಮುನ್ಸಿಪಾಲ್ ಕಾರ್ಪೋರೇಶನ್ ಹೇಳಿದೆ. ಸತತ 11 ವರ್ಷ ಅಹಮ್ಮದಾಬಾದ್ ಮಣಿನಗರ  ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇದೀಗ ಪ್ರಧಾನಿಯಾದ ಬಳಿಕವೂ ಗುಜರಾತ್ ಹಾಗೂ ಇಡೀ ದೇಶದ ಅಭಿವೃದ್ಧಿ ಮಾಡುತ್ತಿದ್ದಾರೆ. ಹೀಗಾಗಿ ಮಣಿನಗರದ ಕಾಲೇಜಿಗೆ ಮೋದಿ ಹೆಸರಿಡಲು ನಿರ್ಧರಿಸಲಾಗಿದೆ ಎಂದು ಅಹಮ್ಮದಾಬಾದ್ ಕಾರ್ಪೋರೇಶನ್ ಸ್ಪಷ್ಟಪಡಿಸಿದೆ.

ಮಣಿನಗರ ಕ್ಷೇತ್ರದmaninagar constituency) ಶಾಸಕರಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. ಡಿಸೆಂಬರ್ 2002ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ(Gujarat Assembly Election) ನರೇಂದ್ರ ಮೋದಿ ಮೊದಲ ಬಾರಿಗೆ ಮಣಿನಗರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. 2003ರಲ್ಲಿ ಮಣಿನಗರದಲ್ಲಿ ಮೋದಿ(Narendra Modi) ಕಚೇರಿ ಆರಂಭಿಸಿದ್ದರು. ಬಳಿಕ ಈ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸಿದ್ದರು. ಇಷ್ಟೇ ಅಲ್ಲ ಈ ಕಚೇರಿಗೆ ಕ್ಷೇತ್ರದ ಜನರೂ ಯಾವುದೇ ಸಮಯದಲ್ಲಿ ಬಂದು ದೂರು, ಮನವಿಗಳನ್ನು ನೀಡಲು ಅವಕಾಶ ಮಾಡಿಕೊಟ್ಟಿದ್ದರು. 

ಈ ಸಾರಿ ಮೈಸೂರು ದಸರಾಗೆ ಬರ್ತಾರಾ ಪ್ರಧಾನಿ? ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಾ ಕರುನಾಡು?

ಮಣಿನಗರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಬಳಿಕ ಹಳ್ಳ ಹಿಡಿದಿದ್ದ  LG ಮೆಡಿಕಲ್ ಕಾಲೇಜಿಗೆ(Medical College) ಹೊಸ ಘನತೆ ಬಂದಿತ್ತು.  LG ಮೆಡಿಕಲ್ ಕಾಲೇಜಿನ ಸಂಪೂರ್ಣ ಚಿತ್ರಣ ಬದಲಿಸಿದರು. ಹೊಸ ಮೆಡಿಕಲ್ ಕಾಲೇಜು ಕಟ್ಟಡ ಆರಂಭಿಸಲಾಗಿತ್ತು. ದಂತ್ಯವೈದ್ಯ ಕಾಲೇಜು ಸೇರಿಸಲಾಗಿತ್ತು. ಮೋದಿ ಶ್ರಮದಿಂದ  LG ಮೆಡಿಕಲ್ ಕಾಲೇಜು ಗಜುರಾತ್‌ನಲ್ಲಿ ಪ್ರತಿಷ್ಠಿತ ಕಾಲೇಜಾಗಿ(Narendra Modi College) ಹೊರಹೊಮ್ಮಿತು. ಮಣಿನಗರಕ್ಕೆ ಗುಜರಾತ್‌ನಲ್ಲಿ ಪ್ರಮುಖ ಸ್ಥಾನಮಾನ ಸಿಕ್ಕಿದ್ದು ನರೇಂದ್ರ ಮೋದಿಯಿಂದ. ಹೀಗಾಗಿ ಇಡೀ ಕ್ಷೇತ್ರದ ಜನರು ಮೋದಿ ಹೆಸರನ್ನು ಕಾಲೇಜಿಗೆ ಇಡಬೇಕು ಎಂದು ಮನವಿ ಸಲ್ಲಿಸಿದ್ದರು. ಕಳೆದ ಹಲವು ವರ್ಷಗಳಿಂದ ಈ ಮನವಿ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಇತ್ತೀಚೀಗೆ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿ ಎಲ್ಲರ ಅಭಿಪ್ರಾಯ ಪಡೆದು ಮರುನಾಮಕರಣಕ್ಕೆ ನಿರ್ಧರಿಸಲಾಗಿದೆ ಎಂದು ಅಹಮ್ಮದಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಹೇಳಿದೆ.

ಈ ಬಾರಿ ಮೋದಿ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಿದ ಬಿಜೆಪಿ

 LG ಮೆಡಿಕಲ್ ಕಾಲೇಜು ಇಂದು ಅತೀ ದೊಡ್ಡ ಹಾಗೂ ಸುಸಜ್ಜಿತ ಕಾಲೇಜು ಹಾಗೂ ಆಸ್ಪತ್ರೆಯನ್ನು ಹೊಂದಿದೆ. ಇದರಿಂದ ಮಣಿನಗರ ಮಾತ್ರವಲ್ಲ ಗುಜರಾತ್‌ನ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಬಡವರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಆರೋಗ್ಯ ತಪಾಸಣೆ, ಚಿಕಿತ್ಸೆ ಸಿಗುತ್ತಿದೆ. ಇದೆಲ್ಲವೂ ಮೋದಿ ಪರಿಶ್ರಮದಿಂದ ಆಗಿದೆ. ಮೋದಿ ಶಾಸಕರಾಗಿದ್ದಾಗಲೇ ರೂಪುರೇಷೆ ಸಿದ್ದಮಾಡಿ ಕಾರ್ಯಪ್ರವೃತ್ತರಾಗಿದ್ದರು ಎಂದು ಮುನ್ಸಿಪಲ್ ಕಾರ್ಪೋರೇಶನ್ ಹೇಳಿದೆ.

click me!