ಜಡೆ ಜಗಳ: ಟೋಲ್ ಪ್ಲಾಜಾ ಮುಂದೆ ಜುಟ್ಟು ಹಿಡಿದು ಹೊಡೆದಾಡಿದ ಇಬ್ಬರು ಮಹಿಳೆಯರು

Published : Sep 15, 2022, 05:01 PM ISTUpdated : Sep 15, 2022, 05:12 PM IST
ಜಡೆ ಜಗಳ: ಟೋಲ್ ಪ್ಲಾಜಾ ಮುಂದೆ ಜುಟ್ಟು ಹಿಡಿದು ಹೊಡೆದಾಡಿದ ಇಬ್ಬರು ಮಹಿಳೆಯರು

ಸಾರಾಂಶ

ಯಾರ ಜಗಳವಾದರೂ ಬಿಡಿಸಬಹುದು ಆದರೆ ಮಹಿಳೆಯರ ಜಗಳ ಮಾತ್ರ ಬಿಡಿಸಲಾಗದು ಎಂಬ ಮಾತಿದೆ. ಅದೇ ರೀತಿ ಈಗ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಇಬ್ಬರು ಮಹಿಳೆಯರು ನಡುರಸ್ತೆಯಲ್ಲಿ ಪರಸ್ಪರ ಹೊಡೆದಾಡಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಾಸಿಕ್‌: ಯಾರ ಜಗಳವಾದರೂ ಬಿಡಿಸಬಹುದು ಆದರೆ ಮಹಿಳೆಯರ ಜಗಳ ಮಾತ್ರ ಬಿಡಿಸಲಾಗದು ಎಂಬ ಮಾತಿದೆ. ಅದೇ ರೀತಿ ಈಗ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಇಬ್ಬರು ಮಹಿಳೆಯರು ನಡುರಸ್ತೆಯಲ್ಲಿ ಪರಸ್ಪರ ಹೊಡೆದಾಡಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಸಿಕ್ ಸಮೀಪದ ಪಿಂಪಲಗಾಂವ್ ಟೋಲ್ ಪ್ಲಾಜಾದ ಮುಂದೆ ಈ ನಾಚಿಕೆಗೇಡಿನ ಘಟನೆ ನಡೆದಿದೆ. ಇಬ್ಬರು ಮಹಿಳೆಯರು ಪರಸ್ಪರ ಜುಟ್ಟು ಹಿಡಿದುಕೊಂಡು ಹೊಡೆದಾಡಿದ್ದಾರೆ. 

ನಿನ್ನೆ ಈ ಘಟನೆ ನಡೆದಿದ್ದು, ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ(CC camera) ದೃಶ್ಯ ಸೆರೆ ಆಗಿದೆ. ಬಳಿಕ ಅದು ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಪಿಂಪಲಗಾಂವ್ ಟೋಲ್ ಬೂತ್‌ನ ಉದ್ಯೋಗಿಯಾಗಿರುವ ಮಹಿಳೆ ಹಾಗೂ ಮಹಿಳಾ(Woman) ಪ್ರಯಾಣಿಕರೊಬ್ಬರ ಮಧ್ಯೆ ಹೊಡೆದಾಟ ನಡೆದಿದೆ. ಟೋಲ್‌ನಲ್ಲಿ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಈ ಗಲಾಟೆ ನಡೆದಿದೆ. 

 

ಇಬ್ಬರು ಪರಸ್ಪರ ದೈಹಿಕವಾಗಿ ಹೊಡೆದಾಡಿಕೊಂಡಿದ್ದು, ಪರಸ್ಪರ ತಲೆ ಕೂದಲನ್ನು ಎಳೆದಾಡಿಕೊಂಡು (Hair Pulling) ಗಲಾಟೆ ಮಾಡಿದ್ದಾರೆ. ಜೊತೆಗೆ ಪರಸ್ಪರ ಅಸಭ್ಯವಾಗಿ ನಿಂದಿಸಿಕೊಂಡಿದ್ದಾರೆ. ಹಲವು ನಿಮಿಷಗಳವರೆಗೆ ಈ ಹೊಡೆದಾಟ ನಡೆದಿದೆ. ಈ ವೇಳೆ ಅಲ್ಲೇ ಇದ್ದ ಅನೇಕರು ಈ ಹೊಡೆದಾಟ ಬಿಡಿಸಲು ಯತ್ನಿಸಿದ್ದಾರಾದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಅಲ್ಲೇ ಇದ್ದ ಅನೇಕರು ತಮ್ಮ ಮೊಬೈಲ್‌ನಲ್ಲಿ ಈ ಘಟನೆಯನ್ನು ಸೆರೆ ಹಿಡಿದಿದ್ದಾರೆ. ಕೇಂದ್ರ ರಿಸರ್ವ್‌ ಪೊಲೀಸ್ ಪಡೆಯಲ್ಲಿ ಅಧಿಕಾರಿಯಾಗಿರುವ ಮಹಿಳೆಯ ಪತಿ ಕೂಡ ಟೋಲ್ ಬೂತ್ ಉದ್ಯೋಗಿಯೊಂದಿಗೆ ವಾದ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆ ಆಗಿದೆ. 

ನಡುರಸ್ತೆಯಲ್ಲಿ ಕೂದಲು ಎಳೆದುಕೊಂಡು ಕಿತ್ತಾಡಿದ ಯುವತಿಯರು, ವಿಡಿಯೋ ವೈರಲ್

ಈ ವಿಡಿಯೋವನ್ನು ಟ್ವಿಟ್ಟರ್ (Twitter) ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದು, ನಾಸಿಕ್‌ನ (Nasik) ಪಿಂಪಲಗಾವ್ ಟೋಲ್ ಬೂತ್ (tOll booth) ಬಳಿ ಮಹಿಳೆಯರಿಬ್ಬರು ಹೊಡೆದಾಡುತ್ತಿರುವ ಆಘಾತಕಾರಿ ದೃಶ್ಯ ಎಂದು ಬರೆದುಕೊಂಡಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸಲು ಶುರು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಮಹಿಳೆಯರು ಯುವತಿಯರು ಕೂಡ ನಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಸಾರ್ವಜನಿಕ ಸ್ಥಳಗಳಲ್ಲಿ ಡಾನ್‌ಗಳ ರೀತಿ ಹೊಡೆದಾಡುವ ಪ್ರಕರಣಗಳು ಹೆಚ್ಚೆಚ್ಚು ನಡೆಯುತ್ತಿವೆ.

ಕಾಲೇಜ್ ಆವರಣದಲ್ಲಿ ಕೂದಲಿಡಿದು ಕಿತ್ತಾಡಿಕೊಂಡ ಹುಡುಗಿಯರು, ನೋಡಿ ಮಜಾ ತಗೊಂಡ ಹುಡುಗ್ರು

ಮೊದಲೆಲ್ಲಾ ಕಾಲೇಜು ಆವರಣದಲ್ಲಿ ಹುಡುಗರು ಗ್ಯಾಂಗ್ ಕಟ್ಟಿಕೊಂಡು ತಿರುಗುವುದು. ಪರಸ್ಪರ ಹೊಡೆದಾಡಿಕೊಳ್ಳುವುದು. ಕಾಲೇಜಿನಿಂದ ಈ ಕಾರಣಕ್ಕೆ ಸಸ್ಪೆಂಡ್ ಆಗಿರುವುದು ಮುಂತಾದ ಘಟನೆಗಳು ನಡೆಯುತ್ತಿದ್ದವು. ಅದೇ ರೀತಿ ಕೆಲ ದಿನಗಳ ಹಿಂದೆ  ಶಾಲೆಯ ಮುಂಭಾಗದಲ್ಲಿ ವಿದ್ಯಾರ್ಥಿನಿಯರು ಪರಸ್ಪರ ಜುಟ್ಟು ಹಿಡಿದುಕೊಂಡು ಹೊಡೆದಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹಾಗಂತ ಇದೇನು ಕೇವಲ ಇಬ್ಬರ ನಡುವಿನ ಜಗಳವಾಗಿ ಉಳಿದಿಲ್ಲ. ಸಿನಿಮಾ ಸ್ಟೈಲ್‌ನಲ್ಲಿ ಈ ಕಿತ್ತಾಟ ನಡೆದಿದ್ದು, ಹುಡುಗಿಯರು ಬೇರೆ ಬೇರೆ ಗುಂಪುಗಳಾಗಿ ಪರಸ್ಪರ ಹೊಡೆದಾಡಿರುವ ವಿಡಿಯೋ ವೈರಲ್ ಆಗಿತ್ತು. ಆದರೆ ಯಾಕೆ ಈ ಹೊಡೆದಾಟ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. 

ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಯೊಂದರ ಮುಂಭಾಗ ನಡೆದ ಘಟನೆ ಇದು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು. ಆದರೆ ಘಟನೆ ಯಾವಾಗ ನಡೆದಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಹೊಡೆದಾಟದ ಕಾರಣವೂ ಅಧಿಕೃತವಾಗಿ ತಿಳಿದು ಬಂದಿಲ್ಲ. ಆದರೆ ಕೆಲವು ವಿದ್ಯಾರ್ಥಿನಿಯರು ಶಾಲಾ ಸಮವಸ್ತ್ರದಲ್ಲಿದ್ದರೆ ಮತ್ತೆ ಕೆಲವರು ಮಾಮೂಲಿ ಡ್ರೆಸ್‌ನಲ್ಲಿದ್ದಾರೆ. ಜಗಳದಲ್ಲಿ ತೊಡಗಿದ್ದ ವಿದ್ಯಾರ್ಥಿನಿಯರ ಸಮವಸ್ತ್ರವನ್ನು ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು ಈ ಹೊಡೆದಾಟವು ಎರಡು ಶಾಲೆಗಳ ವಿದ್ಯಾರ್ಥಿನಿಯರ ನಡುವಿನ ಘರ್ಷಣೆಯಂತಿದೆ  ಅವುಗಳಲ್ಲಿ ಒಂದು ಬೆಂಗಳೂರಿನ ಪ್ರಸಿದ್ಧ ಬಿಷಪ್ ಕಾಟನ್ ಬಾಲಕಿಯರ ಶಾಲೆ ಎಂದು ಕಾಮೆಂಟ್ ಮಾಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?