ಭಾರತಕ್ಕೆ ಆಗಮಿಸಿದ ಜಪಾನ್ ಪ್ರಧಾನಿ : ಪುಮಿಯೊ ಕಿಶಿದಾ ಸ್ವಾಗತಿಸಿದ ರಾಜೀವ್ ಚಂದ್ರಶೇಖರ್

Published : Mar 20, 2023, 11:59 AM ISTUpdated : Mar 20, 2023, 12:25 PM IST
ಭಾರತಕ್ಕೆ ಆಗಮಿಸಿದ ಜಪಾನ್ ಪ್ರಧಾನಿ :  ಪುಮಿಯೊ ಕಿಶಿದಾ ಸ್ವಾಗತಿಸಿದ ರಾಜೀವ್ ಚಂದ್ರಶೇಖರ್

ಸಾರಾಂಶ

ಜಪಾನ್ ಪ್ರಧಾನಿ Fumio Kishida ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಕೇಂದ್ರ ಸಚಿವ  ರಾಜೀವ್ ಚಂದ್ರಶೇಖರ್ ಬರ ಮಾಡಿಕೊಂಡರು. 

ನವದೆಹಲಿ:  ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಕೇಂದ್ರ ಸಚಿವ  ರಾಜೀವ್ ಚಂದ್ರಶೇಖರ್ ಬರ ಮಾಡಿಕೊಂಡರು. 

ಎರಡು ದಿನಗಳ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿರುವ ಫುಮಿಯೊ ಕಿಶಿದಾ, ಉಭಯ ರಾಷ್ಟ್ರಗಳ ಸಂಬಂಧ, ದ್ವಿಪಕ್ಷೀಯ ಒಪ್ಪಂದ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.  ಇನ್ನು ಇದೆ ವೇಳೆ G20 ಹಾಗೂ G7 ಬಗೆಗಿನ ಸಹಕಾರದ ಬಗ್ಗೆಯು ಚರ್ಚೆ ಆಗಲಿದೆ. ಪ್ರಸ್ತುತ G20 ಅಧ್ಯಕ್ಷತೆಯನ್ನು ಭಾರತ ಹೊಂದಿದ್ದರೆ,  G7ನ  ಅಧ್ಯಕ್ಷತೆಯನ್ನು ಜಪಾನ್ ಹೊಂದಿದೆ.   ಈ ಹಿಂದೆ ಜಪಾನ್ ಪ್ರಧಾನಿಯಾಗಿದ್ದ ಶಿಂಜೊ ಅಬೆ ಹಾಗೂ ಪ್ರಧಾನಿ ಮೋದಿ ಬಾಂಧವ್ಯ ಉತ್ತಮವಾಗಿತ್ತು.  ಅದೇ ನಿಟ್ಟಿನಲ್ಲಿ ಇದೀಗ ಕಿಶಿದಾ  ಮುಂದುವರಿಯಲ್ಲಿದ್ದಾರೆ ಎನ್ನಲಾಗಿದೆ. ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಎರಡು ದೇಶಗಳ ಪ್ರಧಾನಿಗಳು ಭೇಟಿಯಾಗಲಿದ್ದು ಚರ್ಚೆ ನಡೆಸಲಿದ್ದಾರೆ. 

ಭಾರತಕ್ಕೆ ತನ್ನ ಎರಡು ದಿನಗಳ ಭೇಟಿಯ ಸಮಯದಲ್ಲಿ ಉಚಿತ ಮತ್ತು ಮುಕ್ತ ಇಂಡೋ-ಪೆಸಿಫಿಕ್ ಕುರಿತು ಹೊಸ ಯೋಜನೆಯನ್ನು ಪ್ರಕಟಿಸಲಾಗುವುದು ಮತ್ತು  ಭವಿಷ್ಯದ ಬಗ್ಗೆ ಹಲವು ಕಾಲ್ಪನಿಕ ಯೋಜನೆಗಳ ವಿಚಾರ ಪ್ರಸ್ತುತಪಡಿಸುವುದಾಗಿ ಕಿಶಿದಾ ಹೇಳಿದ್ದರು. 

ಜಪಾನ್ ಪಿಎಂಒದ ಅಧಿಕೃತ ಟ್ವಿಟರ್ ಹ್ಯಾಂಡಲ್ ಪ್ರಕಾರ, ಈ ವರ್ಷ, ಜಪಾನ್ ಜಿ 7 ಅಧ್ಯಕ್ಷ ಸ್ಥಾನವನ್ನು ಹೊಂದಿದೆ ಮತ್ತು ಭಾರತವು ಜಿ 20 ಅಧ್ಯಕ್ಷತೆಯನ್ನು ಹೊಂದಿದೆ. ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಸವಾಲುಗಳನ್ನು ಪರಿಹರಿಸಲು ನಾವು ಕೆಲಸ ಮಾಡುವಾಗ ನಮ್ಮ ಎರಡು ದೇಶಗಳು ವಹಿಸಬೇಕಾದ ಪಾತ್ರದ ಕುರಿತು ಪ್ರಧಾನಿ ಮೋದಿ ಮತ್ತು ನಾನು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ ಎಂದು ಬರೆದುಕೊಂಡಿದ್ದಾರೆ. 

ಜಂಟಿ ಹೇಳಿಕೆ ಬಿಡುಗಡೆಗೆ ಜಿ20 ವಿಫಲ: ಕೆಲ ಅಂಶಗಳಿಗೆ ರಷ್ಯಾ, ಚೀನಾ ವಿರೋಧ

ಹಾಗೆಯೇ  "ಭಾರತ ಮತ್ತು ಜಪಾನ್ ನಡುವಿನ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ನಾನು ಉದ್ದೇಶಿಸಿದ್ದೇನೆ. ಜೊತೆಗೆ, ನಾನು ಭಾರತದಲ್ಲಿ ಇರುವ ಸಮಯದಲ್ಲಿ, ನಾನು ಉಚಿತ ಮತ್ತು ಮುಕ್ತ ಇಂಡೋ-ಪೆಸಿಫಿಕ್ (ಇಂಡೋ-ಪೆಸಿಫಿಕ್) ಗೆ ಸಂಬಂಧಿಸಿದ ಹೊಸ ಯೋಜನೆಯನ್ನು ಪ್ರಕಟಿಸುತ್ತೇನೆ.  ಐತಿಹಾಸಿಕ ತಿರುವು ಹೊಂದಿರುವ ಮುಕ್ತ ಮತ್ತು ಮುಕ್ತ ಇಂಡೋ-ಪೆಸಿಫಿಕ್‌ಗಾಗಿ ಭವಿಷ್ಯವು ಹೇಗೆ ನೋಡಬೇಕು ಎಂಬುದರ ಕುರಿತು ನನ್ನ ಆಲೋಚನೆಯನ್ನು ನಾನು ವಿವರಿಸಲಿದ್ದೇನೆ ಎಂದಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು