
ಆಗ್ರಾ: ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ವಿದೇಶಿ ಪ್ರವಾಸಿ ಮಹಿಳೆಗೆ ಕ್ರಮಬದ್ಧವಾಗಿ ಸೀರೆ ತೊಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆಗೆ ಕಾರಣವಾಗಿದೆ. ಅರ್ಜಂಟೈನ್ ಮೂಲದ ಪ್ರವಾಸಿ ಮಹಿಳೆಯೊಬ್ಬರು ಭಾರತೀಯ ಸಂಪ್ರದಾಯದಂತೆ ಸೀರೆ ಧರಿಸಿಕೊಂಡು ಆಗ್ರಾದಲ್ಲಿರುವ ತಾಜ್ ಮಹಲ್ ವೀಕ್ಷಣೆಗೆ ಬಂದಿದ್ದರು. ಆದ್ರೆ ಸೀರೆ ಸರಿಯಾಗಿ ಧರಿಸಿದ ಕಾರಣ, ಪ್ರವಾಸಿ ಮಹಿಳೆ ತೊಂದರೆ ಅನುಭವಿಸುತ್ತಿದ್ದರು. ಪ್ರವಾಸಿ ಮಹಿಳೆಯ ಅವ್ಯವಸ್ಥೆಯನ್ನು ಕಂಡು ಡ್ಯುಟಿಯಲ್ಲಿದ್ದ ಲೇಡಿ ಪೊಲೀಸ್ ಅಧಿಕಾರಿ ಸಹಾಯಕ್ಕೆ ಮುಂದಾಗಿದ್ದಾರೆ.
ವಿದೇಶಿ ಮಹಿಳೆಯನ್ನು ತಡೆದ ಪೊಲೀಸ್ ಕಾನ್ಸ್‌ಟೇಬಲ್ ಗುಡ್ಡಿ ದೇವಿ ಅವರು, ಸೀರೆ ತೊಡಲು ಸಹಾಯ ಮಾಡಿದ್ದಾರೆ. ಅವರೇ ನೆರಿಗೆ ಸಿದ್ಧಪಡಿಸಿ, ಸೆರಗು ಹಾಕಿ ಅಂದದ ಪ್ರವಾಸಿ ಮಹಿಳೆಗೆ ಚೆಂದವಾಗಿ ಸೀರೆ ತೊಡಿಸಿದ್ದಾರೆ. ತಾಜ್ ಮಹಲ್ ಬಳಿಯಲ್ಲಿ ಘಟನೆಯನ್ನು ಸ್ಥಳೀಯರೊಬ್ಬರು ದೂರದಿಂದ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಂಗಳವಾರ ಬೆಳಗ್ಗೆ ಅರ್ಜೆಂಟೀನಾದ ಪ್ರವಾಸಿಗರ ಗುಂಪು ತಾಜ್ ಮಹಲ್ ವೀಕ್ಷಣೆಗೆ ಆಗಮಿಸಿತ್ತು. ಈ ಪ್ರವಾಸಿಗರ ಗುಂಪಿನಲ್ಲಿದ್ದ ಮಹಿಳೆಯೊಬ್ಬರು ಸೀರೆ ಧರಿಸಿಕೊಂಡು ಬಂದಿದ್ರು. ಆದ್ರೆ ವಿದೇಶಿ ಮಹಿಳೆಗೆ ಸರಿಯಾಗಿ ಸೀರೆ ಧರಿಸಲು ಬಾರದ ಕಾರಣ ಅದು ಪದೇ ಪದೇ ಬಿಚ್ಚಿಕೊಳ್ಳಲಾರಂಭಿಸಿತ್ತು. ಇದರಿಂದ ವಿದೇಶಿ ಮಹಿಳೆ ತೊಂದರೆ ಅನುಭವಿಸುತ್ತಿದ್ದರು. ಈ ವೇಳೆ ತಾಜ್ ಮಹಲ್ ಭದ್ರತಾ ಪೊಲೀಸರ ತಂಡದಲ್ಲಿದ್ದ ಗುಡ್ಡಿದೇವಿ ಅವರ ಗಮನಕ್ಕೆ ಬಂದಿದೆ.
ಕೂಡಲೇ ವಿದೇಶಿ ಮಹಿಳೆಯನ್ನು ಪಕ್ಕದಲ್ಲಿ ಕರೆದುಕೊಂಡ ಹೋದ ಗುಡ್ಡಿದೇವಿಯವರು, ಕ್ರಮಬದ್ಧವಾಗಿ ಸೀರೆ ಧರಿಸಲು ಸಹಾಯ ಮಾಡಿದ್ದಾರೆ. ಪೊಲೀಸ್ ಅಧಿಕಾರಿಯ ಸಹಾಯಕ್ಕೆ ಪ್ರವಾಸಿ ಮಹಿಳೆ ತುಂಬು ಹೃದಯದಿಂದ ಉತ್ತರಪ್ರದೇಶ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು, ಅತಿಥಿ ದೇವೋ ಭವ ಮತ್ತು "ವಸುಧೈವ ಕುಟುಂಬಕಂ" ಎಂದು ಕಮೆಂಟ್ ಮಾಡುತ್ತಿದ್ದಾರೆ. ನಮ್ಮ ದೇಶಕ್ಕೆ ಬಂದವರನ್ನು ಗೌರವಿಸೋದು ನಮ್ಮ ಕರ್ತವ್ಯ. ಹಾಗೆಯೇ ನಮ್ಮ ಸಂಸ್ಕೃತಿಯಂತೆ ಬಟ್ಟೆ ಧರಿಸಿದ ಪ್ರವಾಸಿ ಮಹಿಳೆ ಬಗ್ಗೆಯೂ ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸಿದ್ದಾರೆ,
ಇದನ್ನೂ ಓದಿ: ಇವರು ಯಾರು ಅಂತ ಗೊತ್ತಾಯ್ತಾ? ಮದುವೆ, ಹೆಂಡ್ತಿ ಬಗ್ಗೆ ಅಜ್ಜನ ಹೃದಯ ಸ್ಪರ್ಶಿ ಮಾತು
ತಾಜ್ ಮಹಲ್ ಭಾರತದ ಅತಿ ಹೆಚ್ಚು ಭೇಟಿ ನೀಡುವ ಪರಂಪರೆಯ ತಾಣಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಲಕ್ಷಾಂತರ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಇದನ್ನೂ ಓದಿ: ನನ್ನ ಹೆಂಡ್ತಿಯನ್ನು ಕಳುಹಿಸಿ; ನಾನು ಆಕೆಯ ಗಂಡ ಎಂದು ಪೊಲೀಸ್ ಸ್ಟೇಶನ್‌ಗೆ ಬಂದ ಯುವತಿ
आगरा के ताजमहल पर यूपी पुलिस की संवेदनशील और फ्रेंडली पुलिसिंग की मिसाल। अर्जेंटीना से आई महिला पर्यटक साड़ी संभालने में असहज हुई तो ताज सुरक्षा पुलिस की महिला आरक्षी गुड्डी देवी ने मदद की। प्रभावित पर्यटक ने कहा, "Thanks UP Police"। #Agra #TajMahal #UPPolice #AtithiDevoBhava pic.twitter.com/UZh50WJO7g
— Ajendra chauhan (@Ajendra38789723) July 14, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ