Taslima Nasrin: ತಸ್ಲೀಮಾ ನಸ್ರಿನ್ ಯಾರು? 20 ವರ್ಷಗಳ ಬಳಿಕ ಕೋಲ್ಕತಾಗೆ ಹೋಗ್ತಿರೋದ್ಯಾಕೆ?

Kannadaprabha News   | Kannada Prabha
Published : Jul 15, 2026, 08:13 AM ISTUpdated : Jul 15, 2026, 11:08 AM IST
Taslima nasrin

ಸಾರಾಂಶ

2007ರಲ್ಲಿ ತಮ್ಮ ಬರಹಗಳ ಕಾರಣದಿಂದ ಸೃಷ್ಟಿಯಾಗಿದ್ದ ವಿರೋಧದಿಂದ ಕೋಲ್ಕತಾ ತೊರೆದಿದ್ದ ಬಾಂಗ್ಲಾದೇಶದ ಲೇಖಕಿ 20 ತಸ್ಲೀಮಾ ನಸ್ರೀನ್‌(Taslima Nasrin) ವರ್ಷಗಳ ಬಳಿಕ ಮತ್ತೆ ಕೋಲ್ಕತಾಗೆ ಮರಳಲು ಸಜ್ಜಾಗಿದ್ದಾರೆ. ಆಗಸ್ಟ್‌ 1 ರಂದು ರವೀಂದ್ರ ಸದನದಲ್ಲಿ ನಡೆಯವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

2007ರಲ್ಲಿ ಕೋಲ್ಕತಾ ತೊರೆದಿದ್ದ ಲೇಖಕಿ ತಸ್ಲೀಮಾ

ಕೋಲ್ಕತಾ (ಜು.15): 2007ರಲ್ಲಿ ತಮ್ಮ ಬರಹಗಳ ಕಾರಣದಿಂದ ಸೃಷ್ಟಿಯಾಗಿದ್ದ ವಿರೋಧದಿಂದ ಕೋಲ್ಕತಾ ತೊರೆದಿದ್ದ ಬಾಂಗ್ಲಾದೇಶದ ಲೇಖಕಿ 20 ತಸ್ಲೀಮಾ ನಸ್ರೀನ್‌(Taslima Nasrin) ವರ್ಷಗಳ ಬಳಿಕ ಮತ್ತೆ ಕೋಲ್ಕತಾಗೆ ಮರಳಲು ಸಜ್ಜಾಗಿದ್ದಾರೆ. ಆಗಸ್ಟ್‌ 1 ರಂದು ರವೀಂದ್ರ ಸದನದಲ್ಲಿ ನಡೆಯವ ಮೂಲಭೂತವಾದ ವಿರೋಧಿ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಕೋಲ್ಕತಾಗೆ ಬರಲಿದ್ದಾರೆ.

ವಿವಾದಿತ ಬರಹಗಳ ಕಾರಣ 2004ರಲ್ಲಿ ಬಾಂಗ್ಲಾ ತೊರೆದು ಭಾರತಕ್ಕೆ ಬಂದಿದ್ದ ತಸ್ಲೀಮಾ 2007ರಲ್ಲಿ ಕೋಲ್ಕತಾದಲ್ಲೂ ವಿರೋಧ ಎದುರಾದ ಕಾರಣ ನಗರ ತೊರೆದಿದ್ದರು.

ಇದೀಗ ಆ.1ಕ್ಕೆ ಅವರು ಕೋಲ್ಕತಾಗೆ ಬರಲಿದ್ದು. ಸೆಕ್ಯುಲರ್ ಮಿಷನ್ ಮತ್ತು ಮಾನವ ಹಕ್ಕುಗಳು ಮತ್ತು ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.

ತಸ್ಲೀಮಾ ನಸ್ರೀನ್ ಯಾರು? ಬಾಂಗ್ಲಾ ತೊರೆದಿದ್ದೇಕೆ?

ಮೂಲತಃ ಬಾಂಗ್ಲಾದೇಶದವರಾದ ತಸ್ಲೀಮಾ ನಸ್ರಿನ್ ಲೇಖಕಿ, ಮಾನವ ಹಕ್ಕುಗಳ ಹೋರಾಟಗಾರ್ತಿ ತಮ್ಮ ಬರಹಗಳಿಂದಲೇ ಜಗತ್ತಿನಾದ್ಯಂತ ಹೆಚ್ಚು ಚರ್ಚೆ ವಿವಾದಗಳಿಗೆ ಒಳಗಾದ ವ್ಯಕ್ತಿಗಳಲ್ಲಿ ಒಬ್ಬರು. ಮಹಿಳೆಯರ ಹಕ್ಕು, ಧಾರ್ಮಿಕ ಮೂಲಭೂತವಾದ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನಿರ್ಭಯವಾಗಿ ಬರೆಯುತ್ತಿದ್ದುದು ಮೂಲಭೂತವಾದಿಗಳಿಗೆ ಕೆಂಗಣ್ಣಿಗೆ ಗುರಿಯಾಗಿ ಜೀವ ಬೆದರಿಕೆಗೆ ಒಳಗಾಗಿ ಬಾಂಗ್ಲಾ ತೊರೆಯುವಂತಾಯ್ತು.

 ತಸ್ಲೀಮಾ ನಸ್ರೀನ್ ಲಜ್ಜಾ ಕಾದಂಬರಿ ವಿವಾದ

1993ರಲ್ಲಿ ಪ್ರಕಟವಾದ ಅವರ 'ಲಜ್ಜಾ'(Lajja) ಕಾದಂಬರಿ ದೊಡ್ಡ ವಿವಾದಕ್ಕೆ ಕಾರಣವಾಯಿತು. ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿದ್ದ ದೌರ್ಜನ್ಯ, ಹಿಂಸಾಚಾರವನ್ನು ಈ ಕಾದಂಬರಿ ಚಿತ್ರಿಸಿತ್ತು. ಕಾದಂಬರಿ ಪ್ರಕಟಗೊಂಡ ಬಳಿಕ ಬಾಂಗ್ಲಾದೇಶದ ಮೂಲಭೂತವಾದಿ ಸಂಘಟನೆಗಳು ತಸ್ಲೀಮಾ ನಸ್ರೀನ್ ವಿರುದ್ಧ ಧರ್ಮನಿಂದನೆ ಆರೋಪಿಸಿ ಪ್ರತಿಭಟನೆ ನಡೆಸಿದ್ದಲ್ಲದೆ ಫತ್ವಾ, ಜೀವ ಬೆದರಿಕೆಗಳು ಬಂದವು.

ಬಾಂಗ್ಲಾದೇಶ ತೊರೆದಿದ್ದು ಏಕೆ?

ಧಾರ್ಮಿಕ ಸಂಘಟನೆಗಳಿಂದ ಜೀವ ಬೆದರಿಕೆ, ಭದ್ರತಾ ಸಮಸ್ಯೆಗಳ ಕಾರಣದಿಂದ 1994ರಲ್ಲಿ ತಸ್ಲೀಮಾ ನಸ್ರೀನ್ ಬಾಂಗ್ಲಾದೇಶ ತೊರೆದರು. ನಂತರ ಅವರು ಸ್ವೀಡನ್ ಸೇರಿದಂತೆ ಹಲವು ಯುರೋಪಿನ ದೇಶಗಳಲ್ಲಿ ವಾಸವಿದ್ದು, ಬಳಿಕ ಭಾರತಕ್ಕೂ ಬಂದರು.

ತಸ್ಲೀಮಾ ನಸ್ರೀನ್ ಭಾರತಕ್ಕೆ ಬಂದಿದ್ದು ಏಕೆ?

ತಸ್ಲೀಮಾ ನಸ್ರೀನ್‌ ಭಾರತಕ್ಕೆ ಒಂದು ಕಾರಣವಿದೆ. ಭಾರತದ ಬಂಗಾಳಿ ಭಾಷೆ, ಸಂಸ್ಕೃತಿಯೊಂದಿಗೆ ನಿಕಟ ಸಂಬಂಧವಿತ್ತು. ಈ ಹಿನ್ನೆಲೆ ಅವರು ಭಾರತಕ್ಕೆ ಬರಲು ಕಾರಣವಾಯ್ತು, ವಿಶೇಷವಾಗಿ ಕೊಲ್ಕತ್ತಾದಲ್ಲಿರಲು ಬಯಿಸಿದರು. ಅದಕ್ಕೆ ಭಾರತ ಸರ್ಕಾರವೂ ಇಲ್ಲಿ ದೇಶದಲ್ಲಿ ನೆಲೆಸಲು ಅನುಕೂಲ ಮಾಡಿಕೊಟ್ಟಿತು. ಆದರೆ 2007ರಲ್ಲಿ ಕೊಲ್ಕತ್ತಾದಲ್ಲಿ ಅವರ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡ ಹಿನ್ನೆಲೆ ಅವರನ್ನ ಕೊಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾಯ್ತು. ಪ್ರಸ್ತುತ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸುವೇಂದು ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂಸಾಚಾರಗಳು ಕಡಿಮೆಯಾಗಿದ್ದು ಸುರಕ್ಷಿತ ವಾತಾವರಣ ನಿರ್ಮಾಣವಾಗಿರುವ ಕಾರಣ ಮತ್ತೆ ಕೊಲ್ಕತ್ತಾಗೆ ಮರಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಷಪೂರಿತ ಹಾವು ಕಚ್ಚಿ ತಾಯಿ ಬಳಿ ಮಲಗಿದ್ದ ಇಬ್ಬರು ಮಕ್ಕಳು ಸಾವು… ಒಂದೇ ರಾತ್ರಿಯಲ್ಲಿ ಸ್ಮಶಾನವಾಯ್ತು ಮನೆ
ಸಂಕಷ್ಟದಲ್ಲಿ ಸಿಲುಕಿದ್ದ ವಿದೇಶಿ ಮಹಿಳೆಗೆ ಸರಿಯಾಗಿ ಸೀರೆ ತೊಡಿಸಿದ ಲೇಡಿ ಪೊಲೀಸ್: ವಿಡಿಯೋ