ಅಗ್ನಿ-1 ಕ್ಷಿಪಣಿ ಉಡಾವಣೆ: ದೇಶೀಯವಾಗಿ ಅಭಿವೃದ್ಧಿ ಪಡಿಸಿದ ರಕ್ಷಣಾ ತಂತ್ರಜ್ಞಾನದ ಸಾಮರ್ಥ್ಯವಿದು!

Published : Jun 02, 2023, 01:31 PM ISTUpdated : Jun 02, 2023, 01:33 PM IST
ಅಗ್ನಿ-1 ಕ್ಷಿಪಣಿ ಉಡಾವಣೆ: ದೇಶೀಯವಾಗಿ ಅಭಿವೃದ್ಧಿ ಪಡಿಸಿದ ರಕ್ಷಣಾ ತಂತ್ರಜ್ಞಾನದ ಸಾಮರ್ಥ್ಯವಿದು!

ಸಾರಾಂಶ

ಒಡಿಶಾದ ಕರಾವಳಿ ದೇಶೀಯವಾಗಿ ಅಭಿವೃದ್ಧಿ ಪಡಿಸಿದ, ಸಣ್ಣ ವ್ಯಾಪ್ತಿಯ, ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಬ್ಯಾಲಿಸ್ಟಿಕ್ ಕ್ಷಿಪಣಿಯ ಯಶಸ್ವಿ ಉಡಾವಣೆಗೆ ಸಾಕ್ಷಿಯಾಯಿತು

ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಒಡಿಶಾ:  ಗುರುವಾರದಂದು ಒಡಿಶಾದ ಕರಾವಳಿ ದೇಶೀಯವಾಗಿ ಅಭಿವೃದ್ಧಿ ಪಡಿಸಿದ, ಸಣ್ಣ ವ್ಯಾಪ್ತಿಯ, ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಬ್ಯಾಲಿಸ್ಟಿಕ್ ಕ್ಷಿಪಣಿಯ ಯಶಸ್ವಿ ಉಡಾವಣೆಗೆ ಸಾಕ್ಷಿಯಾಯಿತು. ಗುರುವಾರ ಬೆಳಗ್ಗೆ 8:30ರ ಸಮಯದಲ್ಲಿ, ಕಡಿಮೆ ವ್ಯಾಪ್ತಿಯ ಅಣ್ವಸ್ತ್ರ ಸಿಡಿತಲೆ ಒಯ್ಯುವ ಅಗ್ನಿ-1 ಕ್ಷಿಪಣಿಯನ್ನು ಈ ಮೊದಲು ವೀಲರ್ ದ್ವೀಪ ಎಂದು ಕರೆಯಲ್ಪಡುತ್ತಿದ್ದ, ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದ ಪ್ಯಾಡ್ 4ನಲ್ಲಿದ್ದ ಮೊಬೈಲ್ ಲಾಂಚರ್‌ನಿಂದ ಉಡಾಯಿಸಲಾಯಿತು.

ಈ ಕ್ಷಿಪಣಿಯ ಉಡಾವಣೆ ತಮ್ಮ ಕಾರ್ಯಾಚರಣಾ ಸಿದ್ಧತೆಯನ್ನು ಪರಿಶೀಲಿಸುವ ಸಲುವಾಗಿ, ಭಾರತೀಯ ಸೇನೆಯ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಕೈಗೊಳ್ಳುವ ಅಭ್ಯಾಸದ ಅಂಗವಾಗಿ ನೆರವೇರಿಸಲಾಯಿತು.  ರಕ್ಷಣಾ ಇಲಾಖೆಯ ಅಧಿಕಾರಿಗಳು ಈ ಪರೀಕ್ಷಾ ಉಡಾವಣೆಯನ್ನು 'ಸಂಪೂರ್ಣ ಯಶಸ್ವಿ' ಎಂದು ಘೋಷಿಸಿದ್ದು, ಕಾರ್ಯಾಚರಣೆಯು ಎಲ್ಲ ಗುರಿಗಳನ್ನು ಸಮರ್ಥವಾಗಿ ಪೂರೈಸಿದೆ ಎಂದರು.

ಇದು ಎಲ್ಲ ಗುರಿಗಳನ್ನು ಯಶಸ್ವಿಯಾಗಿ ಈಡೇರಿಸಿದ ಅಗ್ನಿ-1 ಕ್ಷಿಪಣಿಯ ಹದಿನೆಂಟನೇ ಆವೃತ್ತಿಯ ಉಡಾವಣೆಯಾಗಿತ್ತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಓ) ಮೂಲಗಳು ನಾವು ಈಗಾಗಲೇ ಭಾರತದ ಅತ್ಯಧಿಕ ವ್ಯಾಪ್ತಿಯ ಅಣ್ವಸ್ತ್ರ ಕ್ಷಿಪಣಿ ಅಗ್ನಿ-5 ಅನ್ನು ಜನವರಿ 18, 2023ರಂದು ಪರೀಕ್ಷಿಸಿರುವುದಾಗಿ ತಿಳಿಸಿವೆ.

ಟಾರ್ಗೆಟ್‌ ಅಮೆರಿಕಾ, ಕ್ಷಿಪಣಿ ಉಡಾಯಿಸಿ ನಡುಕ ಹುಟ್ಟಿಸಿದ ಕಿಂಗ್‌ ಜಾಂಗ್‌ ಉನ್‌!

ಅಗ್ನಿ-1 ಕ್ಷಿಪಣಿಯ ಕುರಿತ ವಿಚಾರಗಳು

• ಅಗ್ನಿ-1 ಕಡಿಮೆ ವ್ಯಾಪ್ತಿಯ, ಅಣ್ವಸ್ತ್ರ ಸಾಮರ್ಥ್ಯವುಳ್ಳ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, 700 ಕಿಲೋಮೀಟರ್‌ಗೂ ಹೆಚ್ಚಿನ ವ್ಯಾಪ್ತಿ ಹೊಂದಿದೆ.

• 2004ರಲ್ಲಿ ದೇಶೀಯವಾಗಿ ನಿರ್ಮಿಸಿದ, ಏಕ ಹಂತದ ಭೂಮಿಯಿಂದ ಭೂಮಿಗೆ ದಾಳಿ ನಡೆಸಬಲ್ಲ ಅಗ್ನಿ-1 ಕ್ಷಿಪಣಿಯನ್ನು ಭಾರತೀಯ ಸೇನಾಪಡೆಗಳ ಬತ್ತಳಿಕೆಗೆ ಸೇರಿಸಲಾಯಿತು.

• ಸೇನಾಪಡೆಗಳು ತಮ್ಮ ಕಡ್ಡಾಯ ತರಬೇತಿ ಕಾರ್ಯಾಚರಣಾ ಅಂಗವಾಗಿ ಹೈಟೆಕ್ ಮಿಸೈಲ್ ಪ್ರೊಪಲ್ಷನ್ ವ್ಯವಸ್ಥೆಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿವೆ. ಈ ವ್ಯವಸ್ಥೆ ಘನ ರಾಕೆಟ್ ಇಂಧನ ಆಧಾರಿತವಾಗಿದೆ.

• ಅಗ್ನಿ-1 ಒಂದು ಅತ್ಯಾಧುನಿಕ ಕ್ಷಿಪಣಿಯಾಗಿದ್ದು, ಇದರಲ್ಲಿ ಸಂಚರಣ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದು ಕ್ಷಿಪಣಿ ಅತ್ಯಂತ ನಿಖರವಾಗಿ ತನ್ನ ಉದ್ದೇಶಿತ ಗುರಿಯನ್ನು ತಲುಪುವಂತೆ ಮಾಡಲು ಸಹಾಯಕವಾಗಿದೆ.

• ರಕ್ಷಣಾ ಇಲಾಖೆಯ ಮೂಲಗಳು ಅಗ್ನಿ-1 ಕ್ಷಿಪಣಿಯ ಉಡಾವಣೆಯನ್ನು ಕೂಲಂಕಷವಾಗಿ ಪರಿಶೀಲಿಸಿವೆ. ಇದಕ್ಕಾಗಿ ವಿವಿಧ ರೀತಿಯ ಅತ್ಯಾಧುನಿಕ ರೇಡಾರ್‌ಗಳು, ಟೆಲಿಮೆಟ್ರಿ ವೀಕ್ಷಣಾ ಬಿಂದುಗಳು, ಇಲೆಕ್ಟ್ರೋ ಆಪ್ಟಿಕ್ ಉಪಕರಣಗಳು ಹಾಗೂ ನೌಕಾಪಡೆಯ ಹಡಗುಗಳನ್ನು ಬಳಸಿಕೊಂಡು, ಕ್ಷಿಪಣಿಯ ಉಡಾವಣಾ ಸ್ಥಾನದಿಂದ ಗುರಿಯ ತನಕದ ಪಯಣವನ್ನು ಅತ್ಯಂತ ನಿಖರವಾಗಿ ಗುರುತಿಸಲಾಗಿದೆ.

• ಭಾರತೀಯ ಸೇನಾಪಡೆಗಳು ಈಗಾಗಲೇ ಅಗ್ನಿ-1 ಕ್ಷಿಪಣಿಯನ್ನು ತಮ್ಮ ಆಯುಧ ಸಂಗ್ರಹಕ್ಕೆ ಸೇರ್ಡೆಗೊಳಿಸಿದ್ದು, ವ್ಯಾಪ್ತಿ, ನಿಖರತೆ, ಹಾಗೂ ಮಾರಕತೆಗೆ ಸಂಬಂಧಿಸಿದಂತೆ ಕ್ಷಿಪಣಿಯ ಪ್ರದರ್ಶನವನ್ನು ಗಮನಿಸಿವೆ ಎಂದು ರಕ್ಷಣಾ ಇಲಾಖೆಯ ಮೂಲಗಳು ವರದಿ ಮಾಡಿವೆ. ಇತ್ತೀಚಿನ ಪ್ರಾಯೋಗಿಕ ಉಡಾವಣೆ ಭಾರತೀಯ ಸೇನಾಪಡೆ ಅತ್ಯಂತ ಕಡಿಮೆ ಅವಧಿಯಲ್ಲೂ ಈ ಕ್ಷಿಪಣಿಯನ್ನು ಉಡಾವಣೆಗೊಳಿಸುವ ಸಾಮರ್ಥ್ಯ ಗಳಿಸಿದೆ ಎನ್ನುವುದನ್ನು ಸಾಬೀತುಪಡಿಸಿದೆ.

• ಬಹುತೇಕ 12 ಟನ್ ತೂಕ ಹೊಂದಿರುವ ಅಗ್ನಿ-1 ಕ್ಷಿಪಣಿ 15 ಮೀಟರ್ ಉದ್ದವಾಗಿದೆ. ಇದು ಅಂದಾಜು 1,000 ಕೆಜಿಗಳಷ್ಟು ಭಾರದ ಪೇಲೋಡ್ ಹೊತ್ತೊಯ್ಯಲು ಸಮರ್ಥವಾಗಿದೆ.

• ಅಣ್ವಸ್ತ್ರ ಸಿಡಿತಲೆಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿರುವ ಅಗ್ನಿ-1 ಕ್ಷಿಪಣಿ 700 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಲ್ಲಿರುವ ಗುರಿಯ ಮೇಲೆ ಕರಾರುವಾಕ್ಕಾಗಿ ದಾಳಿ ನಡೆಸಬಲ್ಲದು.

• ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಓ) ಭಾಗವಾಗಿರುವ ಅಡ್ವಾನ್ಸ್ಡ್ ಸಿಸ್ಟಮ್ಸ್ ಲ್ಯಾಬೋರೇಟರಿ (ಎಎಸ್ಎಲ್) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ (ಡಿಆರ್‌ಡಿಎಲ್) ಹಾಗೂ ರಿಸರ್ಚ್ ಸೆಂಟರ್ ಇಮಾರತ್ (ಆರ್‌ಸಿಐ) ಜೊತೆ ಸಹಯೋಗ ಹೊಂದಿ ಅಗ್ನಿ-1 ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿದೆ.

• ಹೈದರಾಬಾದಿನ ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಸಂಸ್ಥೆ ಅಗ್ನಿ-1 ಕ್ಷಿಪಣಿಯನ್ನು ಸಂಯೋಜಿಸಿದೆ. ನವೆಂಬರ್ 22, 2016ರಂದು ಇದೇ ನೆಲೆಯಿಂದ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಾ ಪ್ರಯೋಗಕ್ಕೆ ಒಳಪಡಿಸಲಾಯಿತು.

ಭಾರತದ ಕ್ಷಿಪಣಿ ಕಾರ್ಯಕ್ರಮಗಳಲ್ಲಿ ಮಹಿಳೆಯರ ಪಾತ್ರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

india Latest News Live: ನ್ಯಾಷನಲ್‌ ಹೆರಾಲ್ಡ್ ಕೇಸು: ಹೈಕೋರ್ಟ್‌ ಮೊರೆ ಹೋದ ಜಾರಿ ನಿರ್ದೇಶನಾಲಯ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!