ಬ್ರಿಜ್‌ಭೂಷಣ್‌ ವಿರುದ್ಧ ರೆಸ್ಲರ್ಸ್‌ FIR: ಬ್ರೀತ್‌ ಚೆಕ್‌ ನೆಪದಲ್ಲಿ ಟೀಶರ್ಟ್‌ ತೆಗೆಸಿದ್ದರು, ವೈದ್ಯಕೀಯ ಭತ್ಯೆಗಾಗಿ ಸೆಕ್ಸ್‌!

By Santosh NaikFirst Published Jun 2, 2023, 11:54 AM IST
Highlights

ಪ್ರತಿಭಟನಾ ನಿರತ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಆರೋಪದ ಮೇಲೆ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ 10 ದೂರುಗಳು ಮತ್ತು ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಬ್ರಿಜ್‌ ಭೂಷಣ್‌ ವಿರುದ್ಧ ದಾಖಲಾದ ಎರಡು ಎಫ್‌ಐಆರ್‌ ವಿವರಗಳು ಇಲ್ಲಿವೆ.
 

ನವದೆಹಲಿ (ಜೂ.2):ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದಾಖಲಾಗಿರುವ ಎರಡೂ ಎಫ್‌ಐಆರ್‌ಗಳು ಈಗ ಮುನ್ನೆಲೆಗೆ ಬಂದಿವೆ. ಮಾಧ್ಯಮ ವರದಿಗಳ ಪ್ರಕಾರ, ಬ್ರಿಜ್ ಭೂಷಣ್ ಮತ್ತು ಕಾರ್ಯದರ್ಶಿ ವಿನೋದ್ ತೋಮರ್ ಇದರಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ. ವಯಸ್ಕ ಕುಸ್ತಿಪಟುಗಳಿಗೆ ಬ್ರಿಜ್ ಭೂಷಣ್ ಹಲವಾರು ಬಾರಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಹಲವಾರು ಬಾರಿ ಬ್ಯಾಡ್‌ ಟಚ್‌ ಮಾಡಿದ್ದ ಬ್ರಿಜ್‌ ಭೂಷಣ್‌, ಬ್ರೀತ್‌ ಚೆಕ್‌ ನೆಪದಲ್ಲ ಮಹಿಳಾ ರೆಸ್ಲರ್‌ಗಳ ಟಿ-ಶರ್ಟ್‌ ಕೂಡ ತೆಗೆಸಿದ್ದಲ್ಲದೆ, ಅವರ ಎದೆಯ ಮೇಲೆ ಕೈಯಿಟ್ಟು ಪರೀಕ್ಷೆ ಮಾಡಿದ್ದರು ಎಂದು ಆರೋಪ ಮಾಡಲಾಗಿದೆ. ಎಫ್ಐಆರ್ ಪ್ರಕಾರ, ಕುಸ್ತಿಪಟುಗಳು ಬ್ರಿಜ್ ಭೂಷಣ್ ತಮ್ಮ ಹೊಟ್ಟೆಯನ್ನು ಮುಟ್ಟಿದ್ದಾರೆ ಮಹಿಳಾ ರೆಸ್ಲರ್‌ಗಳು ಆರೋಪಿಸಿದ್ದಾರೆ. ಗಾಯಾಳುವಾಗಿರುವ ಮಹಿಳಾ ರೆಸ್ಲರ್‌ನ ತಮ್ಮ ವೆಚ್ಚವನ್ನು ಡಬ್ಲ್ಯುಎಫ್‌ಐನಿಂದ ಕೇಳಿದ್ದರು, ಇದಕ್ಕಾಗಿ ಬ್ರಿಜ್‌ ಭೂಷಣ್‌ ಸೆಕ್ಸ್‌ಗೆ ಸೇಡಿಕೆ ಇರಿಸಿದ್ದರು. ಆದರೆ, ಇದನ್ನು ರೆಸ್ಲರ್‌ ನಿರಾಕರಿದಾಗ ಆಯ್ಕೆ ಟ್ರಯಲ್ಸ್‌ನಲ್ಲಿ ಅವರಿಗೆ ಹೆಚ್ಚಿನ ಅವಕಾಶ ನೀಡಿರಲಿಲ್ಲ ಎನ್ನಲಾಗಿದೆ. ಇನ್ನೊಂದು ಎಫ್‌ಐಆರ್‌ನಲ್ಲಿ ಬ್ರಿಜ್‌ ಭೂಷಣ್‌ ಸಿಂಗ್‌, ಅಪ್ರಾಪ್ತ ರೆಸ್ಲರ್‌ಅನ್ನು ಯಾವುದೋ ನೆಪ ಹಿಡಿದು ತಮ್ಮ ಕೋಣೆಗೆ ಕರೆದಿದ್ದು, ಮಾತ್ರವಲ್ಲದೆ ದೈಹಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದ. ಆದರೆ, ಆಕೆ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಳು ಎನ್ನಲಾಗಿದೆ.

ಎರಡು ಎಫ್‌ಐಆರ್‌ನೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಕನಿಷ್ಟ 10 ದೂರುಗಳು ಅವರ ವಿರುದ್ಧ ದಾಖಲಾಗಿವೆ. ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧದ ದೂರುಗಳಲ್ಲಿ ಅನುಚಿತವಾಗಿ ಸ್ಪರ್ಶಿಸುವುದು, ಹುಡುಗಿಯರ ಎದೆಯ ಮೇಲೆ ಕೈ ಹಾಕುವುದು, ಎದೆ ಮತ್ತು ಬೆನ್ನಿನ ಮೇಲೆ ಕೈಗಳನ್ನು ಇಡುವುದು ಸೇರಿದಂತೆ ಇತ್ಯಾದಿ ಆರೋಪಗಳನ್ನು ಮಾಡಲಾಗಿದೆ. ಬ್ರಿಜ್‌ ಭೂಷಣ್‌ ವಿರುದ್ಧ ಏಪ್ರಿಲ್‌ 21 ರಂದು 10 ದೂರುಗಳು ದಾಖಲಾಗಿದ್ದರೆ, ಏಪ್ರಿಲ್‌ 28 ರಂದು ಎಫ್‌ಐಆರ್‌ ದಾಖಲಾಗಿದೆ. ಮೂರು ವರ್ಷಗಳ ಜೈಲು ಶಿಕ್ಷೆಗೆ ಕಾರಣವಾಗುವ ಸೆಕ್ಷನ್ 354, 354 (ಎ), 354 (ಡಿ) ಮತ್ತು 34 ರ ಅಡಿಯಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.

ಮೊದಲ ಎಫ್‌ಐಆರ್‌ನಲ್ಲಿ ಆರು ಒಲಿಂಪಿಯನ್‌ಗಳ ಆರೋಪಗಳನ್ನು ಉಲ್ಲೇಖಿಸಿದ್ದರೆ, ಎರಡನೆಯದು ಅಪ್ರಾಪ್ತ ವಯಸ್ಕನ ತಂದೆ ಮಾಡಿದ ಆರೋಪಗಳನ್ನು ಉಲ್ಲೇಖಿಸುತ್ತದೆ. ಚಿತ್ರ ಕ್ಲಿಕ್ಕಿಸುವ ನೆಪದಲ್ಲಿ ಬ್ರಿಜ್ ಭೂಷಣ್ ಸಿಂಗ್ ತನ್ನನ್ನು ಬಿಗಿಯಾಗಿ ಹಿಡಿದಿದ್ದರು ಎಂದು ಅಪ್ರಾಪ್ತ ರೆಸ್ಲರ್‌ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಬ್ರಿಜ್‌ ಭೂಷಣ್‌ ಆಕೆಯ ಭುಜವನ್ನು ಒತ್ತಿ ಮತ್ತು ಉದ್ದೇಶಪೂರ್ವಕವಾಗಿ ಅನುಚಿತವಾಗಿ ಮುಟ್ಟಿದ್ದ ಎಂದು ಆಕೆಯ ತಂದೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಅದಲ್ಲದೆ, ನನ್ನನ್ನು ಫಾಲೋ ಮಾಡದಂತೆ ಬ್ರಿಜ್‌ ಭೂಷಣ್‌ಗೆ ಸ್ಪಷ್ಟವಾಗಿ ತಿಳಿಸಿದ್ದೆ ಎಂದೂ ಅಪ್ರಾಪ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

ರೆಸ್ಲರ್‌ಗಳ ದೂರುಗಳು
- ರೆಸ್ಟೋರೆಂಟ್‌ನ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದಾಗ ಡಬ್ಲ್ಯುಎಫ್‌ಐ ಕೋಚ್‌ ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದು ಮಾತ್ರವಲ್ಲದೆ, ಬ್ಯಾಡ್‌ ಟಚ್‌ ಕೂಡ ಮಾಡಿದ್ದರು. ಅದಲ್ಲದೆ, ಬ್ರಿಜ್‌ ಭೂಷಣ್‌ ಸಿಂಗ್ ತನ್ನ ಭುಜಗಳು, ಮೊಣಕಾಲುಗಳು ಮತ್ತು ಅಂಗೈ ಮೇಲೆ ಕೈಇರಿಸಿದ್ದರು. ಬ್ರೀತ್‌ ಚೆಕ್‌ ಮಾಡುವ ನೆಪದಲ್ಲಿ ಎದೆ ಮತ್ತು ಹೊಟ್ಟೆಯನ್ನು ಸ್ಪರ್ಶ ಮಾಡಿದ್ದ.

- ಡಬ್ಲ್ಯುಎಫ್‌ಐ ಮುಖ್ಯಸ್ಥರು ಕುಸ್ತಿಪಟುವನ್ನು ತಬ್ಬಿಕೊಂಡಿದ್ದರು.ಯಾರಿಗೂ ಹೇಳದಂತೆ ಲಂಚ ಕೂಡ ನೀಡಿದ್ದರು ಎನ್ನುವ ಆರೋಪ.

- ಬ್ರೀತ್‌ ಚೆಕ್‌ ಮಾಡುವ ನೆಪದಲ್ಲಿ  ಡಬ್ಲ್ಯುಎಫ್‌ಐ ಮುಖ್ಯಸ್ಥರು ಹೊಟ್ಟೆಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎನ್ನುವ ಅರೋಪ.

- ತಾನು ಸಾಲಿನಲ್ಲಿ ನಿಂತಿದ್ದಾಗ ಡಬ್ಲ್ಯುಎಫ್‌ಐ ಮುಖ್ಯಸ್ಥರು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎನ್ನುವ ದೂರು. ದೂರ ಸರಿಯಲು ಯತ್ನಿಸಿದಾಗ ಸಿಂಗ್ ತನ್ನ ಭುಜವನ್ನು ಹಿಡಿದುಕೊಂಡರು ಎನ್ನುವ ಆರೋಪ.

ಗೆದ್ದ ಪದಕಗಳನ್ನು ಹರಿದ್ವಾರದಲ್ಲಿ ಗಂಗಾ ನದಿಗೆ ಎಸೆಯಲಿರುವ ಕುಸ್ತಿಪಟುಗಳು!

- ಇನ್ನೊಬ್ಬ ಕುಸ್ತಿಪಟು ಸಿಂಗ್ ತನ್ನ ಭುಜದ ಮೇಲೆ ಕೈ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.

ಜೈಲಿನಿಂದ ಬಿಡುಗಡೆಯಾದ ಬಳಿಕ ಸಿಧು ಸಕ್ರಿಯ, ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ಭಾಗಿ!

click me!