ಹೆಂಡತಿ ಪ್ರಶಸ್ತಿಯನ್ನು ಪಡೆದ ನಂತರ ಕುಣಿದು ಕುಪ್ಪಳಿಸಿದ ಹೆಮ್ಮೆಯ ಪತಿ

Published : Apr 21, 2022, 11:43 AM IST
ಹೆಂಡತಿ ಪ್ರಶಸ್ತಿಯನ್ನು ಪಡೆದ ನಂತರ ಕುಣಿದು ಕುಪ್ಪಳಿಸಿದ ಹೆಮ್ಮೆಯ ಪತಿ

ಸಾರಾಂಶ

ಗಂಡ ಹೆಂಡತಿ ಪ್ರೀತಿಗೆ ಸಾಕ್ಷಿಯಾದ ಕಾರ್ಯಕ್ರಮ ಕಂಬಳಿ ನೇಯ್ದು ಪ್ರಶಸ್ತಿ ಪಡೆದ ಪತ್ನಿ ಪತ್ನಿಗೆ ಪ್ರಶಸ್ತಿ ಬಂದಿದ್ದು ನೋಡಿ ಕುಣಿದು ಕುಪ್ಪಳಿಸಿದ ಗಂಡ

ನೀವು ಜೀವನದಲ್ಲಿ ಏನನ್ನಾದರೂ ಸಾಧಿಸಿದಾಗ ನಿಮ್ಮನ್ನು ಹುರಿದುಂಬಿಸುವ ಯಾರಾದರೂ ಇದ್ದಾರೆ ಎಂದು ತಿಳಿದಾಗ ಆ ಸಾಧಿಸಿದ ಖುಷಿ ಮತ್ತಷ್ಟು ಇಮ್ಮಡಿಯಾಗುತ್ತದೆ. ನಿಮ್ಮ ಕುಟುಂಬದ ಸದಸ್ಯರು, ಒಡಹುಟ್ಟಿದವರು ಅಥವಾ ನಿಮ್ಮ ಬದುಕಿನ ಪ್ರಮುಖ ವ್ಯಕ್ತಿಯಾಗಿರಲಿ, ನಿಮ್ಮ ಸಾಧನೆಗಳ ಬಗ್ಗೆ ಯಾರಾದರೂ ಹೆಮ್ಮೆಪಡುವುದು ಒಂದು ಆಶೀರ್ವಾದ. ಹಾಗೆಯೇ ನಮ್ಮೆಲ್ಲಾ ಕಷ್ಟ ಸುಖಗಳಿಗೂ ಜೊತೆಯಾಗಿ ನಿಂತು ಪ್ರೀತಿ ತುಂಬುವ ವ್ಯಕ್ತಿಯೊಬ್ಬರು ನಮ್ಮೊಂದಿಗೆ ಇದ್ದಾರೆ ಎಂದರೆ ಅದಕ್ಕಿಂತ ದೊಡ್ಡ ಆಸ್ತಿ ಬೇರೆ ಬೇಕಿಲ್ಲ. 

ಹಾಗೆಯೇ ಇಲ್ಲೊಂದು ವಿಡಿಯೋದಲ್ಲಿ ತನ್ನ ಹೆಂಡತಿ ಪ್ರಶಸ್ತಿ ಗೆದ್ದಿರುವುದನ್ನು ನೋಡಿ ಆಕೆಯ ಹೆಮ್ಮೆಯ ಪತಿ  ಸಂಭ್ರಮಿಸುತ್ತಿರುವ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಂಬಳಿ ನೇಯ್ಗೆಯಲ್ಲಿ ನುರಿತ ಗ್ರಾಮೀಣ ಕುಶಲಕರ್ಮಿಗಳಿಗೆ ಜೀವನೋಪಾಯವನ್ನು ಒದಗಿಸುವ ಜೈಪುರ ರಗ್ಸ್ ಫೌಂಡೇಶನ್‌ನ (Jaipur Rugs Foundation) ಇನ್‌ಸ್ಟಾಗ್ರಾಮ್ (Instagram) ಖಾತೆಯಿಂದ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ.

ಇಂಥಾ ವಿಚಾರಗಳನ್ನು ಹೆಂಡ್ತಿ ಗಂಡನಿಂದ ಮುಚ್ಚಿಡೋದ್ರಲ್ಲಿ ತಪ್ಪೇನಿಲ್ವಂತೆ !

ವೀಡಿಯೋದಲ್ಲಿ (Video) ಸುಶೀಲಾ ಎಂಬುವವರು ಸುಂದರ ಮಂಚದ ಕಂಬಳಿ ನೇಯ್ದು ಪ್ರಶಸ್ತಿ ಪಡೆದಿದ್ದಾರೆ. ಆದರೆ ಈ ವೇಳೆ ಆಕೆಯ ಪತಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅವರು ತನ್ನ ಹೆಂಡತಿಯ ಬಗ್ಗೆ ಎಷ್ಟು ಹೆಮ್ಮೆಪಡುತ್ತಿದ್ದರೆಂದರೆ, ಕುಳಿತು ನಿಂತು ಪ್ರತಿ ಕೋನದಿಂದಲೂ ಆಕೆಯ ಫೋಟೋಗಳನ್ನು (photo) ಕ್ಲಿಕ್ಕಿಸಿದರು. ನಂತರ ವೇದಿಕೆ ಮೇಲೆಯೇ  ಸುತ್ತಲು ಕುಣಿದು ಕುಪ್ಪಳಿಸಿದರು. ಆತನ ನೃತ್ಯ ನೋಡಿ ಪತ್ನಿ (wife) ನಾಚಿ ನೀರಾಗಿದ್ದಲ್ಲದೇ ಅವರ ಮುಖ ತಾವು ಉಟ್ಟಿದ್ದ ಕೆಂಪು ಸೀರೆಯ ಬಣ್ಣಕ್ಕೆ ಸ್ಪರ್ಧೆ ನೀಡುವಂತಿತ್ತು. 

 

'ಸುಶೀಲಾ (Shushila) ಪ್ರಶಸ್ತಿಯನ್ನು(Award) ಗೆದ್ದರು ಆದರೆ ಅವರ ಪತಿ ಇಡೀ ಕಾರ್ಯಕ್ರಮವನ್ನು ಗೆದ್ದರು ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಪತ್ನಿ ವೇದಿಕೆಗೆ ಬಂದ ತಕ್ಷಣ ಕೈಲಾಶ್ ಅವರ ಮುಂದೆ, ಮೊಣಕಾಲುಗಳ ಮೇಲೆ ಕುಳಿತು ಸಾಧ್ಯವಿರುವ ಎಲ್ಲ ಕೋನಗಳಿಂದ ಅವಳನ್ನು ಕ್ಲಿಕ್ ಮಾಡಿದರು. ಅವರು ಮನಸ್ಪೂರ್ತಿಯಾಗಿ ನೃತ್ಯ ಮಾಡಿದರು. ಅವರ ಮುಖದಲ್ಲಿ ಹೇಳಿಕೊಳ್ಳಲು ಸಾಧ್ಯವಿಲ್ಲದಷ್ಟು ಹೆಮ್ಮೆ ಎದ್ದು ಕಾಣುತ್ತಿತ್ತು.

ಪತಿ ಇನ್ನಷ್ಟು ಹತ್ತಿರ ಬರಬೇಕೆಂದ್ರೆ ಇಲ್ಲಿದೆ ಮ್ಯಾಜಿಕ್ ಮಂತ್ರ
ಇವತ್ತಿನ ಮದುವೆಗಳಲ್ಲಿ ಗಂಡು ಹೆಣ್ಣಿನ ನಡುವೆ ಇಂತಹ ಆತ್ಮೀಯತೆ ಒಡನಾಟ ಕಾಣಬರುವುದು ತುಂಬಾ ಕಡಿಮೆ ಹಾಗಾಗಿ ಇಬ್ಬರ ನಡುವಿನ ಈ ಸುಂದರ ಒಡನಾಟದ ಹಿಂದಿನ ರಹಸ್ಯವನ್ನು ನಾವು ಸುಶೀಲಾ ಬಳಿ ಏನಿದರ ರಹಸ್ಯ ಎಂದು ಕೇಳಿದೆವು. 'ರಹಸ್ಯ? ಏನು ರಹಸ್ಯ? ನಾವು ಪರಸ್ಪರರ ನಡುವೆ ರಹಸ್ಯಗಳನ್ನು ಇಟ್ಟುಕೊಳ್ಳುವುದಿಲ್ಲ ಎಂದು ಅವರು ಉತ್ತರಿಸಿದರು. ಮತ್ತು ಅವರು ನಮ್ಮ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದು ನಮಗೆ ತಿಳಿದಿದ್ದರೂ, ಅವಳ ಉತ್ತರವು ನಮಗೆ ಉತ್ತಮ ಸಲಹೆಯಾಗಿತ್ತು ಎಂದು ವಿಡಿಯೋ ಪೋಸ್ಟ್ ಮಾಡಿದವರು ಬರೆದಿದ್ದಾರೆ.

ಇತ್ತ ಈ ವಿಡಿಯೋಗೆ ಕಾಮೆಂಟ್‌ಗಳ ಸುರಿಮಳೆಯೇ ಬಂದಿದೆ. ಪತ್ನಿ ಮೇಲಿನ ಪತಿಯ (Husband) ಅಭಿಮಾನಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಳ್ಳೆಯ ಪುರುಷರು ಅಸ್ತಿತ್ವದಲ್ಲಿದ್ದಾರೆ ನೋಡಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವರು ಎಷ್ಟು ಪ್ರಾಮಾಣಿಕವಾಗಿ ಸಂತೋಷದಿಂದ ಸಂಭ್ರಮಿಸುವುದನ್ನು ನೋಡಲು ಖುಷಿಯಾಗುತ್ತಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!