ಶೇ.5 ಅಥವಾ ಶೇ.18 ಜಿಎಸ್‌ಟಿ?: ಪಾಪ್‌ಕಾರ್ನ್‌ ಬಳಿಕ ಡೋನಟ್‌ಗೂ ಸುತ್ತಿತು ವಿವಾದ

Published : Mar 16, 2025, 10:17 AM ISTUpdated : Mar 16, 2025, 10:21 AM IST
ಶೇ.5 ಅಥವಾ ಶೇ.18 ಜಿಎಸ್‌ಟಿ?: ಪಾಪ್‌ಕಾರ್ನ್‌ ಬಳಿಕ ಡೋನಟ್‌ಗೂ ಸುತ್ತಿತು ವಿವಾದ

ಸಾರಾಂಶ

ಪಾಪ್‌ಕಾರ್ನ್‌ ಬಳಿಕ ಇದೀಗ ಯುವಕರ ಜನಪ್ರಿಯ ತಿನಿಸಾದ ಡೋನಟ್‌ ವಿಚಾರದಲ್ಲೂ ಇದೀಗ ಜಿಎಸ್‌ಟಿ ಗೊಂದಲ ಸೃಷ್ಟಿಯಾಗಿದೆ. ಡೋನಟ್‌ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸಬೇಕೇ ಅಥವಾ ಶೇ.18ರಷ್ಟು ತೆರಿಗೆ ಹೇರಬೇಕೇ ಎಂಬ ಗೊಂದಲ ಇದೀಗ ಬಾಂಬೆ ಕೋರ್ಟ್‌ ಮೆಟ್ಟಿಲೇರಿದೆ.

ನವದೆಹಲಿ (ಮಾ.16): ಪಾಪ್‌ಕಾರ್ನ್‌ ಬಳಿಕ ಇದೀಗ ಯುವಕರ ಜನಪ್ರಿಯ ತಿನಿಸಾದ ಡೋನಟ್‌ ವಿಚಾರದಲ್ಲೂ ಇದೀಗ ಜಿಎಸ್‌ಟಿ ಗೊಂದಲ ಸೃಷ್ಟಿಯಾಗಿದೆ. ಡೋನಟ್‌ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸಬೇಕೇ ಅಥವಾ ಶೇ.18ರಷ್ಟು ತೆರಿಗೆ ಹೇರಬೇಕೇ ಎಂಬ ಗೊಂದಲ ಇದೀಗ ಬಾಂಬೆ ಕೋರ್ಟ್‌ ಮೆಟ್ಟಿಲೇರಿದ್ದು, ಈ ಕುರಿತು 24ರಂದು ವಿಚಾರಣೆ ನಡೆಯಲಿದೆ. ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ ನೀಡಲಿರುವ ತೀರ್ಪು ದೇಶದ ಆಹಾರ ಮತ್ತು ಪಾನೀಯ ಕ್ಷೇತ್ರದ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.

ಏನಿದು ಪ್ರಕರಣ?: ಡೋನಟ್‌ಗಳಿಗೆ ಹೆಸರುವಾಸಿಯಾದ ‘ಮ್ಯಾಡ್‌ ಓವರ್ ಡೋನಟ್ಸ್‌’ ಕಂಪನಿಗೆ 100 ಕೋಟಿ ತೆರಿಗೆ ಕಳ್ಳತನದ ನೋಟಿಸ್‌ ನೀಡಲಾಗಿತ್ತು. ‘ಡೋನಟ್‌ ಬೇಕರಿ ಉತ್ಪನ್ನ. ಆದರೂ ರೆಸ್ಟೋರೆಂಟ್‌ ಸೇವೆ ಎಂದು ಪರಿಗಣಿಸಿ ಶೇ.5 ತೆರಿಗೆ ಪಾವತಿಸುತ್ತಿದ್ದಾರೆ’ ಎಂದು ಅದರಲ್ಲಿ ಆರೋಪಿಸಲಾಗಿತ್ತು. ಆದರೆ ಕಂಪನಿ ಮಾತ್ರ ತನ್ನ ಔಟ್‌ಲೆಟ್‌ಗಳು ರೆಸ್ಟೋರೆಂಟ್‌ ವ್ಯಾಪ್ತಿಗೆ ಬರುತ್ತವೆ. ಬೇಕರಿ ವ್ಯಾಪ್ತಿಗಲ್ಲ. ಯಾಕೆಂದರೆ ಅಲ್ಲಿ ಅಡುಗೆ ಮನೆ ಇದ್ದು, ಡೋನಟ್‌ಗಳನ್ನು ಬಿಸಿ ಮಾಡಿ ಅಂತಿಮ ಸಿದ್ಧತೆ ಮಾಡಿ ಮಾರಾಟ ಮಾಡಲಾಗುತ್ತದೆ ಎಂದು ವಾದಿಸಿದೆ.

ಕಾಂಗ್ರೆಸ್‌ ವ್ಯಂಗ್ಯ: ಡೋನಟ್‌ ಜಿಎಸ್‌ಟಿ ಗೊಂದಲ ಕುರಿತು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದು, ವ್ಯವಹಾರಕ್ಕೆ ಪೂರಕ ವಾತಾವರಣ ನಿರ್ಮಿಸುವುದೆಂದರೆ ಇದು ಎಂದು ವ್ಯಂಗ್ಯವಾಡಿದ್ದಾರೆ. ಜತೆಗೆ, ಜಿಎಸ್‌ಟಿ ತುರ್ತು ಸುಧಾರಣೆಗೆ ಆಗ್ರಹಿಸಿದ್ದಾರೆ.

ತೋರು ಬೆರಳು ಎತ್ತಿದರೆ ಭಯ, ಕಷ್ಟದಲ್ಲಿದ್ದವರಿಗೆ ನೆರವು: ವಿಶಿಷ್ಟ ಪರಿಹಾರ ಪರಿಚಯ

ಡಾನ್ಸ್ ಮಾಡಲ್ಲ ಎಂದರೆ ಸಸ್ಪೆಂಡ್‌: ‘ಕುಣಿಯದೇ ಇದ್ದರೆ ಅಮಾನತು ಮಾಡಬೇಕಾದೀತು’ ಎಂದು ಪೊಲೀಸರಿಗೆ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಅವರ ಪುತ್ರ, ಮಾಜಿ ಸಚಿವ ತೇಜ್‌ ಪ್ರತಾಪ್‌ ಯಾದವ್‌ ಎಚ್ಚರಿಕೆ ನೀಡಿದ್ದಾರೆ. ಇದು ಬಿಜೆಪಿ ಕೆಂಗಣ್ಣಿಗೆ ಕಾರಣವಾಗಿದೆ.ಪಟನಾದಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ಹೋಳಿ ಸಡಗರದಲ್ಲಿ ಮೈಕ್‌ ಹಿಡಿದು ಮಾತನಾಡಿದ ತೇಜ್‌ ‘ಏ ಪೊಲೀಸ್‌, ಇಲ್ಲಿ ನೋಡು, ಹಾಡಿಗೆ ಡಾನ್ಸ್‌ ಮಾಡು. ಇದು ಹೋಳಿ.. ಏನೂ ತೊಂದರೆಯಿಲ್ಲ. ಇಲ್ಲದಿದ್ದರೆ, ಸಸ್ಪೆಂಡ್‌ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಇದರ ಬೆನ್ನಲ್ಲೇ ಪೊಲೀಸ್‌ ಕುಣಿದರು.ಇದಕ್ಕೆ ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲಾ ಖಾರವಾಗಿ ಪ್ರತಿಕ್ರಿಯಿಸಿದ್ದು, ‘ತಂದೆ ಲಾಲು ಸಹ ಹೀಗೆ ಬಿಹಾರವನ್ನು ಜಂಗಲ್‌ ರಾಜ್‌ ಮಾಡಿದ್ದರು. ಈಗ ತೇಜ್ ಸಹ ಅದೇ ಹಾದಿಯಲ್ಲಿದ್ದಾರೆ’ ಎಂದು ಕಿಡಿಕಾರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್‌ ಭಾರತಕ್ಕೆ ಬಂದ ಹೊತ್ತಲ್ಲಿಯೇ ಭಾರತಕ್ಕೆ ಮತ್ತೆ ವಿಲನ್‌ ಆದ ಡೊನಾಲ್ಡ್‌ ಟ್ರಂಪ್‌!
ಭಾರತೀಯರು 2025ರಲ್ಲಿ ಅತಿಹೆಚ್ಚು ಹುಡುಕಾಡಿದ ಪ್ರವಾಸಿ ಸ್ಥಳ ಯಾವುದು? ಟಾಪ್-10ರಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್