ಪ್ರಧಾನಿ ಮೋದಿ ಅವರ ಜೀವನದ ಕುರಿತು ಇಂದು 3 ಗಂಟೆ ಕುತೂಹಲಕಾರಿ ಪಾಡ್‌ ಕಾಸ್ಟ್‌

Published : Mar 16, 2025, 09:31 AM ISTUpdated : Mar 16, 2025, 09:32 AM IST
ಪ್ರಧಾನಿ ಮೋದಿ ಅವರ ಜೀವನದ ಕುರಿತು ಇಂದು 3 ಗಂಟೆ ಕುತೂಹಲಕಾರಿ ಪಾಡ್‌ ಕಾಸ್ಟ್‌

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ಜೀವನದ ಕುರಿತು ಕುತೂಹಲಕಾರಿ ಅಂಶಗಳುಳ್ಳ 3 ತಾಸಿನ ಪಾಡ್‌ಕಾಸ್ಟ್‌ ಭಾನುವಾರ ಸಂಜೆ 5.30ಕ್ಕೆ ಪ್ರಸಾರವಾಗಲಿದೆ. ಕೃತಕ ಬುದ್ಧಿಮತ್ತೆ ಸಂಶೋಧಕ ಹಾಗೂ ಖ್ಯಾತ ಪಾಡ್‌ಕಾಸ್ಟರ್‌ ಲೆಕ್ಸ್ ಫ್ರಿಡ್‌ಮನ್ ಅವರು ಮೋದಿ ಸಂದರ್ಶನ ನಡೆಸಿದ್ದಾರೆ.

ನವದೆಹಲಿ (ಮಾ.16): ಪ್ರಧಾನಿ ನರೇಂದ್ರ ಮೋದಿ ಅವರ ಜೀವನದ ಕುರಿತು ಕುತೂಹಲಕಾರಿ ಅಂಶಗಳುಳ್ಳ 3 ತಾಸಿನ ಪಾಡ್‌ಕಾಸ್ಟ್‌ ಭಾನುವಾರ ಸಂಜೆ 5.30ಕ್ಕೆ ಪ್ರಸಾರವಾಗಲಿದೆ. ಕೃತಕ ಬುದ್ಧಿಮತ್ತೆ ಸಂಶೋಧಕ ಹಾಗೂ ಖ್ಯಾತ ಪಾಡ್‌ಕಾಸ್ಟರ್‌ ಲೆಕ್ಸ್ ಫ್ರಿಡ್‌ಮನ್ ಅವರು ಮೋದಿ ಸಂದರ್ಶನ ನಡೆಸಿದ್ದಾರೆ.‘ಇದು ನಿಜಕ್ಕೂ ಫ್ರಿಡ್‌ಮನ್‌ ಅವರೊಂದಿಗಿನ ಆಕರ್ಷಕ ಸಂಭಾಷಣೆಯಾಗಿತ್ತು, ನನ್ನ ಬಾಲ್ಯ, ಹಿಮಾಲಯದಲ್ಲಿನ ವರ್ಷಗಳು ಮತ್ತು ಸಾರ್ವಜನಿಕ ಜೀವನದ ಪ್ರಯಾಣವನ್ನು ನೆನಪಿಸಿಕೊಳ್ಳುವುದು ಸೇರಿದಂತೆ ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿದೆ. ಟ್ಯೂನ್ ಮಾಡಿ ಮತ್ತು ಈ ಸಂವಾದದ ಭಾಗವಾಗಿರಿ!’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಫ್ರಿಡ್‌ಮನ್‌ ಟ್ವೀಟ್‌ ಮಾಡಿ, ‘ಇದು ನನ್ನ ಜೀವನದ ಅತ್ಯಂತ ಶಕ್ತಿಶಾಲಿ ಸಂಭಾಷಣೆಗಳಲ್ಲಿ ಒಂದಾಗಿದೆ’ ಎಂದಿದ್ದಾರೆ. ಅಲ್ಲದೆ, ‘ಮೋದಿ ನವರಾತ್ರಿ ವೇಳೆ 9 ದಿನ ಉಪವಾಸ ಮಾಡುತ್ತಾರೆ. ನಾನು ಕೂಡ ಮೋದಿ ಜತೆ ಮಾತಾಡುವ ಮುನ್ನ 3 ದಿನ ಉಪವಾಸ ಮಾಡಿದೆ’ ಎಂದಿದ್ದಾರೆ. ಫ್ರಿಡ್‌ಮನ್ ಈ ಹಿಂದೆ ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್, ಮಾರ್ಕ್ ಜುಕರ್‌ಬರ್ಗ್, ಜೆಫ್ ಬೆಜೋಸ್ ಮತ್ತು ವೊಲೊಡಿಮಿರ್ ಜೆಲೆನ್ಸ್ಕಿ ಸೇರಿ ಉನ್ನತ ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗೆ ಪಾಡ್‌ಕಾಸ್ಟ್‌ ನಡೆಸಿದ್ದಾರೆ. ಇತ್ತೀಚೆಗೆ ನವೋದ್ಯಮಿ ನಿಖಿಲ್‌ ಕಾಮತ್‌ ಜತೆ ಮೋದಿ ಪಾಡ್‌ಕಾಸ್ಟ್‌ ನಡೆಸಿದ್ದರು.

ವಿದ್ಯಾರ್ಥಿ ಆಗಿದ್ದಾಗ 7 ದಿನ ಜೈಲೂಟ ತಿಂದಿದ್ದೆ: ಕೇಂದ್ರ ಸಚಿವ ಅಮಿತ್ ಶಾ

ಕುಂಭಮೇಳ ಗಂಗಾಜಲ ನೀಡಿದ ಮೋದಿ: ಎರಡು ದಿನಗಳ ಮಾರಿಷಸ್‌ ಪ್ರವಾಸ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಮಾರಿಷಸ್‌ ಅಧ್ಯಕ್ಷ ಧರಮ್ ಗೋಕುಲ್ ಅವರನ್ನು ಭೇಟಿಯಾಗಿ ಮಹಾಕುಂಭ ಮೇಳದ ಪವಿತ್ರ ಗಂಗಾ ಜಲವನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ, ಅವರ ಪತ್ನಿಗೆ ಬನಾರಸಿ ಸೀರೆ ಕಾಣಿಕೆ ನೀಡಿದ್ದಾರೆ. ಮಾರಿಷಸ್‌ ಅಧ್ಯಕ್ಷರನ್ನು ಭೇಟಿ ಮಾಡಿದ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಅಧ್ಯಕ್ಷ ದಂಪತಿಗೆ ಗಂಗಾಜಲ ಹಾಗೂ ಬನಾರಸಿ ಸೀರೆ ಸೇರಿದಂತೆ ಹಲವು ಉಡುಗೊರೆ ನೀಡಿದರು. 2015ರ ಬಳಿಕ ಇದೇ ಮೊದಲ ಬಾರಿಗೆ ಮಾರಿಷಸ್‌ಗೆ ಪ್ರಯಾಣಿಸುತ್ತಿರುವ ಪ್ರಧಾನಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿತು. ಗೋಕುಲ್ ಅವರ ಭೇಟಿಗೂ ಮುನ್ನ ಮಾರಿಷಸ್‌ ಪ್ರಧಾನಿ ನವಿನ್‌ಚಂದ್ರ ರಾಮಗೂಲಂ ಅವರನ್ನೂ ಭೇಟಿ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್