ಕೈತಪ್ಪಿ ಹೋದ ಎನ್‌ಸಿಪಿ, ಹೊಸ ಹೆಸರು ಪಡೆದುಕೊಂಡ ಶರದ್‌ ಪವಾರ್‌ ಬಣ!

By Santosh NaikFirst Published Feb 7, 2024, 7:42 PM IST
Highlights


ಅಜಿತ್‌ ಪವಾರ್‌ ಬಣವನ್ನು ಕೇಂದ್ರ ಚುನಾವಣಾ ಆಯೋಗ ನಿಜವಾದ ಎನ್‌ಸಿಪಿ ಎಂದು ಘೋಷಣೆ ಮಾಡಿದ ಬಳಿಕ, ಚುನಾವಣಾ ಆಯೋಗ ಶರದ್‌ ಪವಾರ್‌ ನೇತೃತ್ವದ ಬಣಕ್ಕೆ ಬುಧವಾರ ಹೊಸ ಹೆಸರನ್ನು ನೀಡಿದೆ.

ನವದೆಹಲಿ (ಫೆ.7): ಚುನಾವಣಾ ಆಯೋಗವು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣಕ್ಕೆ ಹೊಸ ಹೆಸರನ್ನು ನೀಡಿದೆ. ಶರದ್‌ ಪವಾರ್‌ ಅವರ ಬಣ ಇನ್ನು 'ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್ಚಂದ್ರ ಪವಾರ್' ಎಂದು ಗುರುತಿಸಿಕೊಳ್ಳಲಿದೆ. ತಮ್ಮ ರಾಜಕೀಯ ಬಣಕ್ಕೆ ಮೂರು ಸಂಭಾವ್ಯ ಹೆಸರುಗಳು ಹಾಗೂ ಚಿನ್ಹೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಕೆಲವೇ ಹೊತ್ತಿನಲ್ಲಿ ಆಯೋಗ ತನ್ನ ನಿರ್ಧಾರವನ್ನು ತಿಳಿಸಿದೆ. ಅಜಿತ್ ಪವಾರ್ ಬಣವೇ 'ನಿಜವಾದ ಎನ್‌ಸಿಪಿ' ಎಂದು ಚುನಾವಣಾ ಆಯೋಗ ಮಂಗಳವಾರ ಘೋಷಿಸಿದ ನಂತರ ಶರದ್ ಪವಾರ್ ಬಣಕ್ಕೆ ಅವರ ರಾಜಕೀಯ ಬಣಕ್ಕೆ ಹೊಸ ಹೆಸರುಗಳನ್ನು ಸಲ್ಲಿಸುವಂತೆ ಕೇಳಲಾಯಿತು. ಆಯೋಗವು ಅಜಿತ್ ಪವಾರ್ ನೇತೃತ್ವದ ಗುಂಪಿಗೆ ಎನ್‌ಸಿಪಿ ಹೆಸರು ಹಾಗೂ  'ಗಡಿಯಾರ'ದ ಚಿನ್ಹೆಯನ್ನು ನೀಡಿದೆ. ಫೆಬ್ರವರಿ 27 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯ ಉದ್ದೇಶಕ್ಕಾಗಿ ಈ ಹೆಸರನ್ನು ಇಡಲಾಗಿದೆ.

ಮೂಲಗಳ ಪ್ರಕಾರ, ಶರದ್ ಪವಾರ್ ಅವರ ಬಣವು ಮೂರು ಹೆಸರುಗಳನ್ನು ಪ್ರಸ್ತಾಪ ಮಾಡಿದ್ದು, ಇದರಲ್ಲಿ ಒಂದು ಹೆಸರು ಅಂತಿಮವಾಗುವ ಸಾಧ್ಯತೆ ಇದೆ. ಶರದ್ ಪವಾರ್ ಕಾಂಗ್ರೆಸ್, ಮಿ ರಾಷ್ಟ್ರವಾದಿ, ಶರದ್ ಸ್ವಾಭಿಮಾನಿ ಎನ್ನುವ ಹೆಸರನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ.  ಅದರೊಂದಿಗೆ 'ಟೀ ಕಪ್', 'ಸೂರ್ಯಕಾಂತಿ' ಮತ್ತು 'ಉದಯವಾಗುತ್ತಿರುವ ಸೂರ್ಯ'ನ ಚಿನ್ಹೆಯನ್ನು ಬಣ ನೀಡಿದೆ.

ತಮಗಿರುವ ಬಹುಮತಕ್ಕೆ ಆದ್ಯತೆ ಸಿಕ್ಕಿದೆ ಎಂದು ಅಜಿತ್‌ ಪವಾರ್‌ ಬಣ, ಚುನಾವಣಾ ಆಯೋಗ ನಿರ್ಧಾರವನ್ನು ಸ್ವಾಗತಿಸಿದರೆ, ಶರದ್‌ ಪವಾರ್‌ ಅವರ ಬಣ ಇದು ಪ್ರಜಾಪ್ರಭುತ್ವದ ಕೊಲೆ ಎಂದು ಹೇಳಿದೆ. ಅದಲ್ಲದೆ, ಚುನಾವಣಾ ಆಯೋಗದ ನಿರ್ಧಾರದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದೆ.

ಇದು ಆಗುತ್ತದೆ ಎಂದು ಮೊದಲೇ ತಿಳಿದಿತ್ತು. ನಮ್ಮೆಲ್ಲರಿಗೂ ಇದರ ಬಗ್ಗೆ ಅರಿವಿತ್ತು. ಇಂದು ಅಜಿತ್‌ ಪವಾರ್‌, ಶರದ್‌ ಪವಾರ್‌ ಅವರನ್ನು ರಾಜಕೀಯವಾಗಿ ಚೋಕ್‌ ಮಾಡಿದ್ದಾರೆ. ಕೇವಲ ಅಜಿತ್‌ ಪವಾರ್‌ ಮಾತ್ರ ಇದರ ಹಿಂದಿದ್ದಾರೆ. ಈ ಹಂತದಲ್ಲಿ ಯಾರಾದರೂ ತಲೆತಗ್ಗಿಸಬೇಕು ಅಂತಿದ್ದಲ್ಲಿ ಅದು ಚುನಾವಣಾ ಆಯೋಗ ಮಾತ್ರ. ಶರದ್‌ ಪವಾರ್‌ ಫಿನಿಕ್ಸ್‌ ರೀತಿ. ಬೂದಿಯಿಂದ ಅವರು ಎದ್ದು ಬರುತ್ತಾರೆ. ಶರದ್‌ ಪವಾರ್‌ ಇರುವ ಏಕೈಕ ಕಾರಣಕ್ಕೆ ನಮಗೆ ಇನ್ನೂ ಶಕ್ತಿ ಇದೆ. ನಾವು ಸುಪ್ರೀಂ ಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಲಿದ್ದೇವೆ ಎಂದು ಶರದ್‌ ಪವಾರ್‌ ಬಣದ ಜೀತೇಂದ್ರ ಅಹ್ವದ್‌ ಹೇಳಿದ್ದಾರೆ.

Breaking: ಶರದ್‌ ಪವಾರ್‌ಗೆ ಬಿಗ್‌ ಶಾಕ್‌, 'ಗಡಿಯಾರ' ಕಳೆದುಕೊಂಡ ಎನ್‌ಸಿಪಿ ನಾಯಕ!

ಈ ನಡುವೆ, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣವು ಚುನಾವಣಾ ಆಯೋಗವು ತಮ್ಮ ಬಣವನ್ನು "ನಿಜವಾದ ಎನ್‌ಸಿಪಿ" ಎಂದು ಘೋಷಿಸುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ತಮ್ಮ ವಾದವನ್ನು ಮಂಡಿಸಲು ಅವಕಾಶವಿದೆ ಎಂದು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಅರ್ಜಿಯನ್ನು ಸಲ್ಲಿಸಿದೆ.ಅಜಿತ್ ಪವಾರ್ ಕಳೆದ ವರ್ಷ ಜುಲೈನಲ್ಲಿ ಬಹುಪಾಲು ಎನ್‌ಸಿಪಿ ಶಾಸಕರೊಂದಿಗೆ ದೂರ ಸರಿದಿದ್ದರು ಮತ್ತು ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ-ಶಿವಸೇನೆ ಸರ್ಕಾರವನ್ನು ಬೆಂಬಲಿಸಿದ್ದರು.

ಖರ್ಗೆ ಪ್ರಧಾನಿ ಅಭ್ಯರ್ಥಿಗೆ ಇಂಡಿಯಾದಲ್ಲೀಗ ಭಿನ್ನ ರಾಗ, ಶರದ್‌ ಪವಾರ್ ಅಪಸ್ವರ

click me!