ಮುಂಬೈ (ಡಿ.11): ಮಹಾರಾಷ್ಟ್ರದಲ್ಲಿ ( Maharashtra) ಕೊರೊನಾ ರೂಪಾಂತರಿ ತಳಿ ಒಮಿಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್ ಲಾಕ್ ಮಾದರಿ ಟಫ್ ರೂಲ್ಸ್ ಜಾರಿ ಮಾಡಲಾಗಿದೆ. ಮುಂಬೈನಲ್ಲಿ (Mumbai) ಡಿಸೆಂಬರ್ 11 ಮತ್ತು 12 ರಂದು ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, 48 ಗಂಟೆ ಕಾಲ ಸೆಕ್ಷನ್ 144 (Section 144) ಜಾರಿ ಮಾಡಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ರ್ಯಾಲಿ, ಪ್ರತಿಭಟನೆ, ಮೆರವಣಿಗೆಗಳಿಗೆ ನಿಷೇಧಾಜ್ಞೆ ಹೇರಲಾಗಿದೆ. ಜನರು ಗುಂಪು ಸೇರುವಂತಿಲ್ಲ. ಸರಕಾರದ ನಿಯಮ ಉಲ್ಲಂಘಿಸಿದರೆ ಸೆಕ್ಷನ್ 188 ಅಡಿಯಲ್ಲಿ ಕೇಸ್ ಅಂತು ಕಟ್ಟಿಟ್ಟ ಬುತ್ತಿ.
COVID-19 ನ ಹೊಸ ರೂಪಾಂತರಿ ಒಮಿಕ್ರಾನ್ (omicron) ನಿಂದ ಆಗುವ ಅಪಾಯವನ್ನು ತಡೆಗಟ್ಟಲು ಮತ್ತು ಅಮರಾವತಿ, ಮಾಲೆಗಾಂವ್ ಮತ್ತು ನಾಂದೇಡ್‌ನಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಉಪ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
undefined
ಈ ಮಧ್ಯೆ ಶುಕ್ರವಾರ ಒಂದೇ ದಿನ ಒಮಿಕ್ರಾನ್ ನ 7 ಹೊಸ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿವೆ. ಮುಂಬೈನಲ್ಲಿ 3 ಮತ್ತು ಪುಣೆಯಲ್ಲಿ 4 ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ರಾಜ್ಯದಲ್ಲಿ ಪತ್ತೆಯಾದ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ನಾಲ್ವರು ರೋಗಲಕ್ಷಣ ರಹಿತರಾಗಿದ್ದು, ಮೂವರಿಗೆ ಸಣ್ಣ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೊಸ ಪ್ರಕರಣಗಳ ಪೈಕಿ ನಾಲ್ವರು ಪೂರ್ಣ ಪ್ರಮಾಣದ ಲಸಿಕೆ ತೆಗೆದುಕೊಂಡಿದ್ದರೆ, ಮತ್ತೋರ್ವರು ಒಂದು ಡೋಸ್ ಲಸಿಕೆ ಪಡೆದಿದ್ದಾರೆ. ಇನ್ನೂ ಒಬ್ಬರು ಈ ವರೆಗೆ ಲಸಿಕೆಯನ್ನು ಪಡೆದಿಲ್ಲ.
Video Icon Covid Fear in Airport : ಪಿಪಿಇ ಕಿಟ್ ಹಾಕದೇ ಬಂದ ಇಬ್ಬರು ಸೋಂಕಿತ ಪ್ರಯಾಣಿಕರು
ಪುಣೆಯಲ್ಲಿ (Pune) ಪತ್ತೆಯಾದ ಒಮಿಕ್ರಾನ್ ಸೋಂಕಿತರಲ್ಲಿ ಮೂರೂವರೆ ವರ್ಷದ ಮಗು ಕೂಡಾ ಸೇರಿರುವುದು ಆತಂಕಕ್ಕೆ ಕಾರಣವಾಗಿದೆ. ಮುಂಬೈನಲ್ಲಿ ಪತ್ತೆಯಾದ ಒಮಿಕ್ರಾನ್ ಸೋಂಕಿತರು 48, 25 ಮತ್ತು 37 ವರ್ಷ ವಯಸ್ಸಿನ ಪುರುಷರಾಗಿದ್ದು, ಯುಕೆ, ದಕ್ಷಿಣ ಆಫ್ರಿಕಾ (South Africa) ಮತ್ತು ತಾಂಜಾನಿಯಾಗೆ ಪ್ರಯಾಣಿಸಿದ್ದರು ಎಂದು ತಿಳಿದುಬಂದಿದೆ. ಮುಂಬೈ, ಪುಣೆ ಮತ್ತು ನಾಗ್ಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತೀವ್ರ ಕಟ್ತೆಚ್ಚರ ವಹಿಸಲಾಗಿದ್ದು, ತಪಾಸಣೆ ತೀವ್ರಗೊಳಿಸಲಾಗಿದೆ.
High Alert in KIA Airport : ಒಮಿಕ್ರಾನ್ ಆತಂಕ : ಹೈ ರಿಸ್ಕ್ ದೇಶದ ಪ್ರಯಾಣಿಕರ ಮೇಲೆ ನಿಗಾ
ಡಿಸೆಂಬರ್ 1 ರಿಂದ, ಒಟ್ಟು 93 ಅಂತರಾಷ್ಟ್ರೀಯ ಪ್ರಯಾಣಿಕರಿಗೆ COVID-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಇವುಗಳಲ್ಲಿ 83 ಒಮಿಕ್ರಾನ್ ಅಪಾಯದಲ್ಲಿರುವ ರಾಷ್ಟ್ರಗಳಿಂದ ಬಂದವರೇ ಆಗಿದ್ದಾರೆ, ಉಳಿದ 13 ಮಂದಿ ಇತರ ದೇಶಗಳಿಂದ ಬಂದವರು. ಇದುವರೆಗೆ 59 ದೇಶಗಳಲ್ಲಿ ಒಮಿಕ್ರಾನ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ.
ಇನ್ನು ಭಾರತದಲ್ಲಿ(India) ಈವರೆಗೆ ಒಟ್ಟು 33 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ, ಮಹಾರಾಷ್ಟ್ರ- 17, ರಾಜಸ್ಥಾನ- 9, ಗುಜರಾತ್- 3, ದೆಹಲಿ- 2 ಮತ್ತು ಕರ್ನಾಟಕದಲ್ಲಿ- 2 ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆ ಶಿಸ್ತುಕ್ರಮಗಳನ್ನು ಜಾರಿಗೊಳಿಸುವುದಕ್ಕೆ ಸರ್ಕಾರ ಮುಂದಾಗಿದೆ. ಮಾಸ್ಕ್ ಬಳಕೆ ಮತ್ತು ಸುರಕ್ಷತಾ ಮಾನದಂಡಗಳ ಪಾಲನೆಯು ಕಡಿಮೆ ಆಗುತ್ತಿರುವುದರ ಬಗ್ಗೆ ಸರ್ಕಾರ ಎಚ್ಚರಿಕೆ ನೀಡಿದೆ.
ನವೆಂಬರ್ 24 ರವರೆಗೆ ಕೇವಲ 2 ದೇಶಗಳಲ್ಲಿ ಮಾತ್ರ ಒಮಿಕ್ರಾನ್ ಪ್ರಕರಣಗಳು ವರದಿಯಾಗಿತ್ತು, ಈಗ, 59 ದೇಶಗಳಲ್ಲಿ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ವಿಶ್ವದಾದ್ಯಂತ 2,936 ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಇದಲ್ಲದೇ, 78,054 ಸಂಭವನೀಯ ಪ್ರಕರಣಗಳು ಪತ್ತೆಯಾಗಿವೆ.