ಮುಂಬೈ: ರಾತ್ರಿಪಾಳಿಯಲ್ಲಿದ್ದ ಮಹಿಳಾ ವೈದ್ಯೆ ಮೇಲೆ ರೋಗಿ ಹಾಗೂ ಆತನ ಕುಡುಕ ಗ್ಯಾಂಗ್‌ನಿಂದ ಹಲ್ಲೆ

By Anusha KbFirst Published Aug 18, 2024, 1:02 PM IST
Highlights

ಕೋಲ್ಕತ್ತಾದಲ್ಲಿ  ಮಹಿಳಾ ವೈದ್ಯೆಯ ಕೊಲೆ ಅತ್ಯಾಚಾರ ಘಟನೆ ಮಾಸುವ ಮೊದಲೇ ಮುಂಬೈನಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ವೈದ್ಯೆಯೊಬ್ಬರ ಮೇಲೆ ಹಲ್ಲೆ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ರೋಗಿ ಹಾಗೂ ಆತನ ಸಂಬಂಧಿಕರು ದಾಳಿ ಮಾಡಿದ್ದಾರೆ.

ಮುಂಬೈ: ಕೋಲ್ಕತ್ತಾದಲ್ಲಿ  ಮಹಿಳಾ ವೈದ್ಯೆಯ ಕೊಲೆ ಅತ್ಯಾಚಾರ ಘಟನೆ ಮಾಸುವ ಮೊದಲೇ ಮುಂಬೈನಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ವೈದ್ಯೆಯೊಬ್ಬರ ಮೇಲೆ ಹಲ್ಲೆ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ರೋಗಿ ಹಾಗೂ ಆತನ ಸಂಬಂಧಿಕರು ದಾಳಿ ಮಾಡಿದ್ದಾರೆ. ಇದರಿಂದ ಮಹಿಳಾ ವೈದ್ಯೆಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಮುಂಬೈನ ಸಿಯೊನ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಇದರಿಂದಾಗಿ ಆಸ್ಪತ್ರೆಯಲ್ಲಿ ಜನರ ಜೀವ ಉಳಿಸುವ ಕೆಲಸ ಮಾಡುವ ವೈದ್ಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮೂಡಿದೆ. 

ಆಗಸ್ಟ್ 9ರಂದು ಕೋಲ್ಕತ್ತಾದ ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ ನಡೆದ ಮಹಿಳಾ ವೈದ್ಯೆಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣ ಖಂಡಿಸಿ ದೇಶಾದ್ಯಂತ ವೈದ್ಯ ವಿದ್ಯಾರ್ಥಿಗಳು ಟ್ರೈನಿ ಡಾಕ್ಟರ್‌ಗಳು ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡುತ್ತಿದ್ದು, ಸುರಕ್ಷತೆಯ ಭರವಸೆ ಸಿಗುವವರೆಗೆ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಆಗ್ರಹಿಸುತ್ತಿದ್ದಾರೆ. ಹೀಗಿದ್ದರೂ ಯಾವುದೇ ಭಯ ಇಲ್ಲದೇ ನಿನ್ನೆ ಮುಂಬೈನಲ್ಲಿ ಮತ್ತೊಂದು ನಾಚಿಕೆಗೇಡಿನ ಘಟನೆ ನಡೆದಿದೆ. ಸಿಯೊನ್ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿದ್ದ ಮಹಿಳಾ ವೈದ್ಯೆಯ ಮೇಲೆ ರೋಗಿ ಹಾಗೂ ಆತನ 5ರಿಂದ 6 ಜನರಿದ್ದ ಗ್ಯಾಂಗ್ ಕುಡಿದು ಬಂದು ಹಲ್ಲೆ ಮಾಡಿದ್ದಾರೆ ನಸುಕಿನ ಜಾವ 3.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿ ಆಗಿದೆ. 

Latest Videos

ವೈದ್ಯೆ ಮೇಲೆ ನಡೆದ ಅತ್ಯಾಚಾರ, ಹತ್ಯೆ: ಆಸ್ಪತ್ರೆಗಳಿಗೂ ವಿಮಾನ ನಿಲ್ದಾಣ ರೀತಿ ಸುರಕ್ಷತೆ ವಹಿಸುವಂತೆ ಬೇಡಿಕೆ

ಆರೋಪಿ ರೋಗಿಯೂ ತನ್ನ ಮುಖದ ಮೇಲೆ ಗಾಯ ಮಾಡಿಕೊಂಡು ಆಸ್ಪತ್ರೆಗೆ ಬಂದಿದ್ದು, ಆತನಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ಆತನ ಸಂಬಂಧಿಗಳು ಬಂದು ವೈದ್ಯೆಗೆ ಬೆದರಿಕೆಯೊಡ್ಡಿ ಹಲ್ಲೆ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಈ ಎಲ್ಲರೂ ವೈದ್ಯೆಯ ಮೇಲೆ ಮುಗಿಬಿದ್ದಿದ್ದಾರೆ. ಈ ವೇಳೆ ಆಕೆ ತನ್ನನ್ನು ತಾನು ರಕ್ಷಣೆ ಮಾಡಲು ಮುಂದಾಗಿದ್ದಾಳೆ. ಇದರಿಂದ ವೈದ್ಯೆಗೆ ಗಾಯವಾಗಿದೆ ಎಂದು ಆಕೆಯ ಪೋಷಕರು ಹೇಳಿದ್ದಾರೆ. 

ರೋಗಿಯೂ ಸೇರಿದಂತೆ ಇವರೆಲ್ಲರೂ ಪಾನಮತ್ತರಾಗಿಯೇ ನಸುಕಿನ ಜಾವ 3.30ರ ವೇಳೆಗೆ ಆಸ್ಪತ್ರೆಗೆ ಬಂದಿದ್ದಾರೆ. ನಂತರ ಅಲ್ಲಿದ್ದ  ಮಹಿಳಾ ವೈದ್ಯೆಯ ಜೊತೆ ಜಗಳವಾಡಿ ಹಲ್ಲೆಗೆ ಮುಂದಾಗಿದ್ದಾರೆ. ಮುಂಬೈನಲ್ಲಿ ಇಂತಹ ಘಟನೆ ನಡೆದಿರುವುದು ತೀವ್ರ ಕಳವಳಕಾರಿ ವಿಚಾರ ಎಂದು ಬಿಎಂಸಿ ಮರ್ಡ್‌ನ ಮುಖ್ಯಸ್ಥ ಡಾಕ್ಟರ್ ಅಕ್ಷಯ್ ಮೊರೆ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಘಟನೆಯ ಬಳಿಕ ರೋಗಿ ಹಾಗೂ ಆತನ ಜೊತೆಗೆ ಬಂದಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ವೈದ್ಯೆ ಸಿಯೋನ್ ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡಿದ್ದು, ಎಫ್ಐಆರ್ ದಾಖಲಾಗಿದೆ. 

ನನ್ನ ಮಗಳಿಗೆ ನೋವಾಗುತ್ತೆ... ಪರಿಹಾರ ನಿರಾಕರಿಸಿದ ಕೋಲ್ಕತ್ತಾ ಟ್ರೈನಿ ವೈದ್ಯೆಯ ತಂದೆ

click me!