ಎಷ್ಟು ವರ್ಷದ ಬಳಿಕ ಆಧಾರ್ ಕಾರ್ಡ್ ಫೋಟೋ ಚೇಂಜ್ ಮಾಡಿಸಬೇಕು?

By Mahmad Rafik  |  First Published Jan 15, 2025, 3:12 PM IST

ಆಧಾರ್ ಕಾರ್ಡ್ ಫೋಟೋ ಬದಲಾವಣೆ ಕುರಿತು ಗೊಂದಲದಲ್ಲಿದ್ದೀರಾ? ಆಧಾರ್ ಕಾರ್ಡ್ ಫೋಟೋ ಬದಲಾವಣೆ ಕುರಿತು ಹಲವು ವದಂತಿಗಳಿವೆ. ಈ ವದಂತಿಗಳ ಕುರಿತ ಮಾಹಿತಿ ಇಲ್ಲಿದೆ.


ನವದೆಹಲಿ: ಭಾರತದಲ್ಲಿರುವ ನಿವಾಸಿಗಳ ಬಳಿ ಕೆಲ ದಾಖಲೆ ಪತ್ರಗಳು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ. ಈ ದಾಖಲೆಗಳು ಯಾವುದಾದರೂ ಸಮಯದಲ್ಲಿ ಬೇಕಾಗುತ್ತದೆ. ಈ ದಾಖಲೆಗಳು ಕಡ್ಡಾಯ ಮತ್ತು ಅನಿವಾರ್ಯವಾಗುತ್ತವೆ. ಮತದಾನದ ಗುರುತಿನ ಚೀಟಿ, ಪಡಿತರ ಚೀಟಿ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಮತ್ತು ಆಧಾರ್  ಕಾರ್ಡ್‌ಗಳು ಪ್ರಮುಖ ದಾಖಲೆಗಳಾಗಿವೆ. ಈ ದಾಖಲೆಗಳು ನಿಮ್ಮನ್ನು ಭಾರತೀಯರು ಎಂದು ಹೇಳುತ್ತವೆ.  ಕಳೆದ ಒಂದೂವರೆ ದಶಕಗಳಿಂದ  ಆಧಾರ್ ಕಾರ್ಡ್ ಬಳಕೆ ಅತ್ಯಧಿಕವಾಗಿದೆ. ಡಿಜಿಟಲ್ ಡ್ಯಾಕೂಮೆಂಟ್ ಆಗಿರುವ ಕಾರಣ ಯಾವುದೇ ಕಾರ್ಯವಾದ್ರೂ  ಆಧಾರ್ ಕಾರ್ಡ್ ಕಡ್ಡಾಯವಾಗಿವೆ. ದೇಶದ ಶೇ.90ರಷ್ಟು ಜನರು ಆಧಾರ್ ಕಾರ್ಡ್ ಹೊಂದಿದ್ದಾರೆ  ಎಂದು ಕೆಲ ವರದಿಗಳು ಹೇಳಿವೆ.

ಶಾಲೆ-ಕಾಲೇಜುಗಳಲ್ಲಿ ದಾಖಲಾತಿಯಿಂದ ಹಿಡಿದು ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಸೇರಿದಂತೆ ಮರಣೋತ್ತರ ಪ್ರಮಾಣಪತ್ರ ತೆಗೆದುಕೊಳ್ಳಲು ಸಹ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಭಾರತದಲ್ಲಿ UIDAI ಮೂಲಕ ಆಧಾರ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಆಧಾರ್ ಕಾರ್ಡ್‌ನಲ್ಲಿನ ಮಾಹಿತಿ ತಪ್ಪಾಗಿದ್ದರೆ ಅದನ್ನು ಸರಿ ಮಾಡುವ ಅಯ್ಕೆಗಳನ್ನು ಸಹ ನೀಡಲಾಗುತ್ತದೆ. ಇದೇ ರೀತಿ ಆಧಾರ್ ಕಾರ್ಡ್ ಫೋಟೋ ಸಹ ಅಪ್‌ಡೇಟ್ ಮಾಡಬೇಕು. ಎಷ್ಟು ವರ್ಷದ ಬಳಿಕ ಆಧಾರ್ ಕಾರ್ಡ್ ಫೋಟೋ ಬದಲಾವಣೆ ಮಾಡಬೇಕು ಎಂದು ಹಲವು ರೀಲ್ಸ್‌ಗಳು ವೈರಲ್ ಆಗುತ್ತಿರುತ್ತವೆ. ಈ ಕುರಿತ ಮಾಹಿತಿ ಇಲ್ಲಿದೆ.

Tap to resize

Latest Videos

ಆಧಾರ್ ಕಾರ್ಡ್‌ ಫೋಟೋವನ್ನು ಅಪ್‌ಡೇಟ್ ಮಾಡಬೇಕು ಎಂಬ ಯಾವುದೇ  ನಿಯಮವಿಲ್ಲ. ಆದ್ರೂ ಕೆಲ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಮಾಹಿತಿಯುಳ್ಳ ಫೋಟೋ ಮತ್ತು ವಿಡಿಯೋಗಳು ಹರಿದಾಡುತ್ತಿರುತ್ತವೆ. ಆದರೂ ಕೆಲವರು ಫೋಟೋಗಳನ್ನು ಅಪ್‌ಡೇಟ್ ಮಾಡಬೇಕು ಎಂದು ಹೇಳುತ್ತಿರುತ್ತಾರೆ. ಒಂದಿಷ್ಟು ಮಂದಿ ಆಧಾರ್ ಕಾರ್ಡ್ ಕೇಂದ್ರಕ್ಕೆ ತೆರಳಿ ಫೋಟೋ ಚೇಂಜ್ ಮಾಡಿಕೊಳ್ಳಲು ಹೋಗುತ್ತಿರುತ್ತಾರೆ.

ಇದನ್ನೂ ಓದಿ: ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳಿವೆ ಎಂದು ಕಂಡುಹಿಡಿಯುವುದು ಹೇಗೆ?

ಈ ನಡುವೆ ಆಧಾರ್ ಕಾರ್ಡ್ ಫೋಟೋವನ್ನು 10 ವರ್ಷಗಳಿಗೊಮ್ಮೆ ನವೀಕರಿಸಬೇಕು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಅಂದರೆ ಯುಐಡಿಎಐ ಸಲಹೆ ನೀಡಿದೆ. 5 ವರ್ಷದ ಮಕ್ಕಳ ಆಧಾರ್ ಕಾರ್ಡ್ ಮಾಡಿಸೋದರಿಂದ ಮಗು ದೊಡ್ಡದಾದ ನಂತರ ಅಂದ್ರೆ 15ನೇ ವಯಸ್ಸಿಗೆ ಬಯೋಮೆಟ್ರಿಕ್ ಅಪ್‌ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ಬಯೋಮೆಟ್ರಿಕ್ ಅಪ್‌ಡೇಟ್ ಮಾಡುವ ಸಂದರ್ಭದಲ್ಲಿ ಫೋಟೋ ಸಹ ಬದಲಿಸಿಕೊಳ್ಳಬಹುದು.

ಫೋಟೋ ಅಪ್‌ಡೇಟ್ ಮಾಡೋದು ಹೇಗೆ?
ಕೆಲವರು ಫೋಟೋ ಸರಿ  ಬಂದಿಲ್ಲ ಅಂತ ಹೇಳುತ್ತಿರುತ್ತಾರೆ. ನಿಮಗೆ ಈ ರೀತಿ ಅನ್ನಿಸಿದರೆ ನೀವು ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಬೇಕು. ಇದಕ್ಕಾಗಿ ಆನ್‌ಲೈನ್‌ನಲ್ಲಿಯೂ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬಹುದು. ಅಲ್ಲಿನ ಅಧಿಕಾರಿಗಳು ನೀಡುವ  ಫಾರಂನ್ನು ಭರ್ತಿ ಮಾಡಬೇಕು. ಆಗ ಅಧಿಕಾರಿಗಳು ಆಧಾರ್ ಕಾರ್ಡ್‌ಗೆ ಹೊಸ ಫೋಟೋ ತೆಗೆದುಕೊಳ್ಳಲಾಗುತ್ತದೆ. 

ಇದನ್ನೂ ಓದಿ: ನಿಮ್ಮ ಆಧಾರ್ ಕಾರ್ಡ್ ಎಷ್ಟು ಸೇಫ್? ಬಯೋಮೆಟ್ರಿಕ್ ಲಾಕ್ ಮಾಡೋದು ಹೇಗೆ?

click me!