252 ಕೋಟಿ ವೆಚ್ಚದಲ್ಲಿ ಕಾಂಗ್ರೆಸ್‌ ಹೊಸ ಕೇಂದ್ರ ಕಚೇರಿ, 6 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ 15 ವರ್ಷ!

By Santosh Naik  |  First Published Jan 15, 2025, 1:50 PM IST

ಸುಮಾರು 46 ವರ್ಷಗಳ ನಂತರ ಕಾಂಗ್ರೆಸ್ ಪಕ್ಷವು ತನ್ನ ಕೇಂದ್ರ ಕಚೇರಿಯನ್ನು 24, ಅಕ್ಬರ್ ರಸ್ತೆಯಿಂದ 9A, ಕೋಟ್ಲಾ ರಸ್ತೆ, ನವದೆಹಲಿಗೆ ಸ್ಥಳಾಂತರಿಸಿದೆ. ಹೊಸ ಕಚೇರಿಯನ್ನು ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ನಾಯಕರು ಉದ್ಘಾಟಿಸಿದರು.


ನವದೆಹಲಿ (ಜ.15): 'Indira Gandhi Bhawan' 9A, Kotla Road, New Delhi' ಇದು ಕಾಂಗ್ರೆಸ್ ಪಕ್ಷದ ಹೊಸ ವಿಳಾಸ. ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಪಕ್ಷದ ನಾಯಕರು ಬುಧವಾರ ಕಾಂಗ್ರೆಸ್‌ ಪಕ್ಷದ ಹೊಸ ಕೇಂದ್ರ ಕಚೇರಿಯನ್ನು ಉದ್ಘಾಟನೆ ಮಾಡಿದರು. ಸುಮಾರು 46 ವರ್ಷಗಳ ನಂತರ ಪಕ್ಷವು ತನ್ನ ವಿಳಾಸವನ್ನು ಬದಲಾಯಿಸಿದೆ. ಇದಕ್ಕೂ ಮೊದಲು ಹಳೆಯ ಕಚೇರಿಯ ವಿಳಾಸ 24, ಅಕ್ಬರ್ ರಸ್ತೆ, ನವದೆಹಲಿ ಆಗಿತ್ತು.. ಹೊಸ ಕಚೇರಿಯ ಅಡಿಪಾಯವನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ 2009 ರಲ್ಲಿ ಹಾಕಿದ್ದರು. 1.82 ಎಕರೆಯಯಲ್ಲಿ 6 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಕಾಂಗ್ರೆಸ್‌ ಪಕ್ಷ 252 ಕೋಟಿ ರೂಪಾಯಿ ವೆಚ್ಚ ಮಾಡಿದ್ದು, ಈ ಕಟ್ಟಡ ನಿರ್ಮಾಣಕ್ಕೆ ಬರೋಬ್ಬರಿ 15 ವರ್ಷಗಳನ್ನು ತೆಗೆದುಕೊಂಡಿದೆ.

ಹೊಸ ಕಚೇರಿ ಬಿಜೆಪಿ ಪ್ರಧಾನ ಕಚೇರಿಯಿಂದ 500 ಮೀಟರ್ ದೂರದಲ್ಲಿದೆ. ಇದರ ನಿರ್ಮಾಣಕ್ಕೆ 252 ಕೋಟಿ ರೂ. ವೆಚ್ಚವಾಗಿದೆ ಎಂದು ವರದಿಯಾಗಿದೆ. ಬಿಜೆಪಿ ತನ್ನ ಕೇಂದ್ರ ಕಚೇರಿಯನ್ನು ಒಂದೂವರೆ ವರ್ಷಗಳಲ್ಲಿ ನಿರ್ಮಾಣ ಮಾಡಿತ್ತು. 2019ರಲ್ಲಿ ಕಾಂಗ್ರೆಸ್‌ ನಾಯಕ ಕಮಲ್‌ನಾಥ್‌ ನೀಡಿದ್ದ ಹೇಳಿಕೆಯನ್ನೇ ನಂಬೋದಾದರೆ, ಬಿಜೆಪಿ ಪ್ರಧಾನ ಕಚೇರಿ ನಿರ್ಮಾಣಕ್ಕೆ 700 ಕೋಟಿ ರೂಪಾಯಿ ವೆಚ್ಚವಾಗಿದೆ.

ದೇಶಾದ್ಯಂತ ಬಿಜೆಪಿ 768 ಕಚೇರಿಗಳನ್ನು ನಿರ್ವಹಿಸುತ್ತಿದೆ. ಈ ಪೈಕಿ 563 ಕಚೇರಿಗಳು ಸಿದ್ಧವಾಗಿದ್ದರೆ, 96 ಕಚೇರಿಗಳ ಕೆಲಸ ನಡೆಯುತ್ತಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಕಳೆದ ವರ್ಷ ಆಗಸ್ಟ್‌ನಲ್ಲಿ ಈ ಮಾಹಿತಿಯನ್ನು ನೀಡಿದ್ದರು. ಕಾಂಗ್ರೆಸ್ ಮಾಧ್ಯಮ ಸಂಯೋಜಕ ಅಮರೀಶ್ ರಂಜನ್‌ ಅವರಿಗೆ ಕಾಂಗ್ರೆಸ್‌ನಸ ಕಚೇರಿಗಳ ಬಗ್ಗೆ ಮಾಹಿತಿ ಕೇಳಿದಾಗ, ದೆಹಲಿಯನ್ನು ಹೊರತುಪಡಿಸಿ, ಪ್ರತಿಯೊಂದು ರಾಜ್ಯ ಮತ್ತು ಜಿಲ್ಲೆಯಲ್ಲಿ ಪಕ್ಷದ ಕಚೇರಿಗಳಿವೆ. ಕೆಲವು ಬ್ಲಾಕ್ ಕಚೇರಿಗಳೂ ಇವೆ. ಆದರೆ, ನಿಖರವಾಗಿ ಎಷ್ಟು ಕಚೇರಿಗಳಿಗೆ ಅನ್ನೋ ಮಾಹಿತಿ ಇಲ್ಲ ಎಂದಿದ್ದಾರೆ.

ಬಿಜೆಪಿಯ ಕಾರಣಕ್ಕೆ ಪ್ರವೇಶದ್ವಾರವನ್ನು ಎರಡು ಬಾರಿ ಬದಲಿಸಿದ್ದ ಕಾಂಗ್ರೆಸ್: ಹೊಸ ಕಾಂಗ್ರೆಸ್ ಕಚೇರಿಯ ಮುಖ್ಯ ದ್ವಾರವನ್ನು ಮುಂಭಾಗದ ಬಾಗಿಲಿಗೆ ಅಲ್ಲ, ಹಿಂಬಾಗಿಲಿಗೆ ಬದಲಾಯಿಸಲಾಗಿದೆ. ಇದಕ್ಕೆ ಕಾರಣ ಬಿಜೆಪಿ. ವಾಸ್ತವವಾಗಿ, ಕಚೇರಿಯ ಮುಂಭಾಗದ ದ್ವಾರವು ದೀನದಯಾಳ್ ಉಪಾಧ್ಯಾಯ ಮಾರ್ಗದಲ್ಲಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಹೆಸರು ವಿಳಾಸದಲ್ಲಿ ಕಾಣಿಸಿಕೊಳ್ಳುತ್ತಿತ್ತು, ಆದ್ದರಿಂದ ಮುಂಭಾಗದ ದ್ವಾರದ ಬದಲಿಗೆ, ಪಕ್ಷವು ಕೋಟ್ಲಾ ರಸ್ತೆಯಲ್ಲಿ ತೆರೆಯುವ ಹಿಂಬಾಗಿಲಿನ ಪ್ರವೇಶವನ್ನು ಆಯ್ಕೆ ಮಾಡಿತು.

70 ರ ದಶಕದಲ್ಲಿ, ಕಾಂಗ್ರೆಸ್ ಕಚೇರಿ ಡಾ. ರಾಜೇಂದ್ರ ಪ್ರಸಾದ್ ರಸ್ತೆಯಲ್ಲಿತ್ತು. ಅದರ ವಿಳಾಸ 3, ರೈಸಿನಾ ರಸ್ತೆ. ಅಟಲ್ ಬಿಹಾರಿ ವಾಜಪೇಯಿ ಅದರ ಎದುರುಗಡೆ, ರೈಸಿನಾ ರಸ್ತೆಯಲ್ಲಿ ವಾಸಿಸುತ್ತಿದ್ದರು, ಆದ್ದರಿಂದ ಕಾಂಗ್ರೆಸ್ ಇಲ್ಲಿಯೂ ಹಿಂಬಾಗಿಲಿನ ಪ್ರವೇಶವನ್ನು ಆರಿಸಿಕೊಂಡಿತು. 1978 ರಲ್ಲಿ ಕಾಂಗ್ರೆಸ್ ವಿಭಜನೆಯಾದ ನಂತರ, ಕಚೇರಿಯನ್ನು ಪಕ್ಷದ ಸಂಸದ ಜಿ ವೆಂಕಟಸ್ವಾಮಿ ಅವರಿಗೆ ನೀಡಲಾದ ಅಕ್ಬರ್ ರಸ್ತೆಯ 24 ನೇ ಬಂಗಲೆಗೆ ಸ್ಥಳಾಂತರಿಸಲಾಯಿತು. ಅಂದಿನಿಂದ ಇದು ಕಾಂಗ್ರೆಸ್ ಪ್ರಧಾನ ಕಚೇರಿಯ ವಿಳಾಸವಾಗಿತ್ತು.

Tap to resize

Latest Videos

ಬರ್ಮಾ ಹೌಸ್ ಕಾಂಗ್ರೆಸ್ಸಿನ ಲಕ್ಕಿ ಚಾರ್ಮ್‌: 24, ಅಕ್ಬರ್ ರಸ್ತೆಯಲ್ಲಿದ್ದ ಬಗಲೆ ಒಂದು ಕಾಲದಲ್ಲಿ ಭಾರತೀಯ ವಾಯುಪಡೆಯ ಮುಖ್ಯಸ್ಥರ ನಿವಾಸವಾಗಿತ್ತು. ಇದಲ್ಲದೆ, ಇದು ಗುಪ್ತಚರ ಬ್ಯೂರೋ (IB) ದ ರಾಜಕೀಯ ಕಣ್ಗಾವಲು ವಿಭಾಗದ ಕಚೇರಿಯೂ ಆಗಿತ್ತು. ಅದಕ್ಕೂ ಮೊದಲು, ಈ ಬಂಗಲೆಯನ್ನು ಬರ್ಮಾ ಹೌಸ್ ಎಂದು ಕರೆಯಲಾಗುತ್ತಿತ್ತು.ಈ ಬಂಗಲೆಗೆ ಪಂಡಿತ್ ಜವಾಹರಲಾಲ್ ನೆಹರು ಈ ಹೆಸರನ್ನು ಇಟ್ಟಿದ್ದರು. ವಾಸ್ತವವಾಗಿ, ಭಾರತದಲ್ಲಿನ ಮ್ಯಾನ್ಮಾರ್ ರಾಯಭಾರಿ ಡಾ. ಖಿನ್ ಕೈ ಈ ಬಂಗಲೆಯಲ್ಲಿ ವಾಸಿಸುತ್ತಿದ್ದರು. ಅವರು ಮ್ಯಾನ್ಮಾರ್‌ನ ಉಕ್ಕಿನ ಮಹಿಳೆ ಎಂದು ಕರೆಯಲ್ಪಡುವ ಆಂಗ್ ಸಾನ್ ಸೂ ಕಿ ಅವರ ತಾಯಿಯಾಗಿದ್ದರು ಮತ್ತು ಆಂಗ್ ಅವರೊಂದಿಗೆ ಸುಮಾರು 15 ವರ್ಷಗಳ ಕಾಲ ಈ ಬಂಗಲೆಯಲ್ಲಿ ವಾಸಿಸುತ್ತಿದ್ದರು.

47 ವರ್ಷ ನಂತರ ಇಂದು ಎಐಸಿಸಿ ಕಚೇರಿ ಬದಲು

ಇಂದಿರಾ ಗಾಂಧಿಯವರು 24, ಅಕ್ಬರ್ ರಸ್ತೆಯನ್ನು ಕಾಂಗ್ರೆಸ್ ಪ್ರಧಾನ ಕಚೇರಿಯಾಗಿ ಆಯ್ಕೆ ಮಾಡಿದಾಗ, ಪಕ್ಷವು ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಿತ್ತು. ಆದರೆ ಈ ಕಚೇರಿ ಕಾಂಗ್ರೆಸ್ ಮತ್ತು ಇಂದಿರಾ ಇಬ್ಬರಿಗೂ ತುಂಬಾ ಅದೃಷ್ಟಶಾಲಿಯಾಗಿತ್ತು.1980 ರ ಮಧ್ಯಾವಧಿ ಚುನಾವಣೆಯಲ್ಲಿ, ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿತು. ಈ ಕಚೇರಿಯು ನಾಲ್ಕು ಪ್ರಧಾನ ಮಂತ್ರಿಗಳನ್ನು ಕಂಡಿದೆ: ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿ.ವಿ. ನರಸಿಂಹ ರಾವ್ ಮತ್ತು ಮನಮೋಹನ್ ಸಿಂಗ್.

Belagavi: ಕುಂದಾನಗರಿಯ ಬೆಚ್ಚಿಬೀಳಿಸಿದ ಸಾಮೂಹಿಕ ಅತ್ಯಾಚಾರ, ರೇಪಿಸ್ಟ್‌ಗಳ ಪ್ಲ್ಯಾನ್‌ಗೆ ಪೊಲೀಸರ ಶಾಕ್‌!

click me!