Krishna Janmabhoomi: ಅಯೋಧ್ಯೆ ಆಯ್ತು, ಇದೀಗ ಮಥುರೆ ಸಿದ್ಧತೆ: UP ಡಿಸಿಎಂ ಕೇಶವ ಪ್ರಸಾದ್‌ ಮೌರ್ಯ!

By Kannadaprabha NewsFirst Published Dec 2, 2021, 6:26 AM IST
Highlights

*2023ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ
*ಶ್ರೀಕೃಷ್ಣ ಜನ್ಮಸ್ಥಳದಲ್ಲಿ ದೇವಸ್ಥಾನ: ಮೌರ್ಯ ಸುಳಿವು
*ಜಿಲ್ಲಾಡಳಿತದಿಂದ ಮಥುರಾದಲ್ಲಿ ನಿಷೇಧಾಜ್ಞೆ ಜಾರಿ

ಲಖನೌ(ಡಿ. 02): ಅಯೋಧ್ಯೆಯ ರಾಮಜನ್ಮಭೂಮಿ (Ayodhya Ram Temple) ಸ್ಥಳದಲ್ಲಿ ಮಂದಿರ ನಿರ್ಮಾಣ ಮಾಡುತ್ತಿರುವಂತೆ ಶ್ರೀಕೃಷ್ಣ ಜನ್ಮಸ್ಥಳವಾದ ಮಥುರೆಯಲ್ಲಿ (Krishna Janmabhoomi in Mathura) ಭವ್ಯ ದೇಗುಲ ನಿರ್ಮಾಣ ಮಾಡುವ ಸುಳಿವನ್ನು ಉತ್ತರ ಪ್ರದೇಶ ಉಪಮುಖ್ಯಮಂತ್ರಿ (Uttar Pradesh) ಕೇಶವ ಪ್ರಸಾದ್‌ ಮೌರ್ಯ (Keshav Prasad Maurya) ನೀಡಿದ್ದಾರೆ. ‘ಅಯೋಧ್ಯೆ ಮತ್ತು ಕಾಶಿಯಲ್ಲಿ ವೈಭವಯುತ ದೇಗುಲ ನಿರ್ಮಾಣ ಕೆಲಸ ಜಾರಿಯಲ್ಲಿದೆ; ಮಥುರಾದಲ್ಲಿ ಸಿದ್ಧತೆ ನಡೆಯುತ್ತಿದೆ’ ಎಂದು ಮೌರ್ಯ ಟ್ವೀಟ್‌ (Tweet) ಮಾಡಿದ್ದಾರೆ. 

ಅಯೋಧ್ಯೆಯಂತೆ ಮಥುರೆಯೂ ಹಿಂದು-ಮುಸ್ಲಿಮರ (Hindu- Muslim) ನಡುವೆ ವಿವಾದದ ಕೇಂದ್ರ ಬಿಂದುವಾಗಿದ್ದು, ಮುಂದಿನ ವರ್ಷದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly Elections) ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಅವರು ನೀಡಿರುವ ಹೇಳಿಕೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಅಯೋಧ್ಯೆ-ಕಾಶಿಯ ಬಳಿಕ ಮಥುರಾ ಅಭಿವೃದ್ಧಿಯನ್ನು ಬಿಜೆಪಿ ತನ್ನ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

 

अयोध्या काशी भव्य मंदिर निर्माण जारी है
मथुरा की तैयारी है

— Keshav Prasad Maurya (@kpmaurya1)

 

ವಿವಾದ:

ಕೆಲ ದಿನಗಳ ಹಿಂದಷ್ಟೇ ಹಲವು ಹಿಂದೂ ಸಂಘಟನೆಗಳು (Hindu Organisations) , ಬಾಬ್ರಿ ಮಸೀದಿ ಧ್ವಂಸದ ದಿನವಾದ ಡಿ.6ರಂದು ಕೃಷ್ಣನ ಮೂಲ ಜನಸ್ಥಳ ಎನ್ನಲಾದ ಮತ್ತು ಹಾಲಿ ಮಸೀದಿಯಾಗಿ ಪರಿವರ್ತನೆಗೊಂಡಿರುವ ಮಥುರಾದ ಶಾಹಿ ಈದ್ಗಾ ಮಸೀದಿಯಲ್ಲಿ (Shahi Mosque Eidgah) ಕೃಷ್ಣನ ವಿಗ್ರಹ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದವು. ಜೊತೆಗೆ ಅಂದು ಕೃಷ್ಣ ದೇವಸ್ಥಾನದ ಕಡೆಗೆ ಬೃಹತ್‌ ಪಾದಯಾತ್ರೆ ನಡೆಸುವುದಾಗಿ ಹೇಳಿದ್ದವು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತವು ಮಥುರಾದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತ್ತು.

ಜಿಲ್ಲಾಡಳಿತದಿಂದ ಮಥುರಾದಲ್ಲಿ ನಿಷೇಧಾಜ್ಞೆ ಜಾರಿ

ಕೃಷ್ಣ ದೇಗುಲಕ್ಕೆ  (Temple) ಹೊಂದಿಕೊಂಡಂತೆ ಇರುವ ಮಸೀದಿಯು (Masjid) ಕೃಷ್ಣನ ನಿಜವಾದ ಜನ್ಮಸ್ಥಳವಾಗಿದ್ದು (Janmabhoomi), ಅಲ್ಲಿ ಕೃಷ್ಣನ ವಿಗ್ರಹವನ್ನು (Krishna Idol) ಸ್ಥಾಪಿಸುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ (Akhila Bharatha Hindu Mahasabha) ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ವಿಧಿಸಿದೆ. 1992ರಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ (Babri Masjid) ಕೆಡವಿದ ಸ್ಮರಣಾರ್ಥ ಡಿ.6ರಂದು ಶಾಹಿ ಈದ್ಗಾ ಮಸೀದಿಯನ್ನು ಮಹಾ ಜಲಾಭಿಷೇಕದಿಂದ ಪವಿತ್ರಗೊಳಿಸಿ ಕೃಷ್ಣ ಮೂರ್ತಿಯನ್ನು ಸ್ಥಾಪಿಸಲಾಗುವುದು ಎಂದು ಮಹಾಸಭಾ ನಾಯಕರು ಹೇಳಿದ್ದರು. 

Mathura: ಮಸೀದೀಲಿ ಕೃಷ್ಣ ವಿಗ್ರಹ ಸ್ಥಾಪನೆ ಘೋಷಣೆ : ನಿಷೇಧಾಜ್ಞೆ ಜಾರಿ!

ಇನ್ನೊಂದೆಡೆ ನಾರಾಯಣಿ ಸೇನೆಯು ಮಸೀದಿಯನ್ನು ಕೆಡವುವ ಬೇಡಿಕೆಯೊಂದಿಗೆ ವಿಶ್ರಾಮ ಘಾಟ್‌ನಿಂದ ಕೃಷ್ಣ ಜನ್ಮಸ್ಥಾನದವರೆಗೆ ಪಾದಯಾತ್ರೆ ಮಾಡುವುದಾಗಿ ಘೋಷಿಸಿದೆ. ಈ ಹಿನ್ನೆಲೆ ದಂಗೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೆ ತಂದಿದ್ದು, ಕತ್ರಾ ಕೇಶವದೇವ ಮಂದಿರ ಹಾಗೂ ಶಾಹಿ ಈದ್ಗಾ ಮಸೀದಿಯಲ್ಲಿ ಬಿಗಿ ಭದ್ರತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನವನೀತ್‌ ಸಿಂಗ್‌ ಚಹಲ್‌ (Navaneet Sngh Chahal) ಹೇಳಿದ್ದಾರೆ. ಡಿಸೆಂಬರ್ 6 ರಂದು ಶಾಹಿ ಈದ್ಗಾದಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಸ್ಥಾಪಿಸುವುದಾಗಿ ಬಲಪಂಥೀಯ ಗುಂಪುಗಳು ಘೋಷಿಸಿದ ನಂತರ ಉತ್ತರ ಪ್ರದೇಶದ ಮಥುರಾದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮಸೀದಿಯು ಕೃಷ್ಣ ಜನಮಸ್ಥಾನ ದೇವಸ್ಥಾನದ ಪಕ್ಕದಲ್ಲಿದೆ

ವಿವಾದಿತ ಸ್ಥಳ

‘ಮಥುರಾದಲ್ಲಿ ಶ್ರೀಕೃಷ್ಣ ದೇಗುಲಕ್ಕೆ ಹೊಂದಿಕೊಂಡಂತೆಯೇ ಶಾಹಿ ಈದ್ಗಾ ಮಸೀದಿ ಇದೆ. ಮೊಘಲ್‌ ರಾಜ ಔರಂಗಜೇಬ್‌ನ ಅವಧಿಯಲ್ಲಿ ಶ್ರೀಕೃಷ್ಣನ ಜನ್ಮಸ್ಥಾನವಾಗಿದ್ದ ದೇಗುಲವನ್ನು ಧ್ವಂಸ ಮಾಡಿ, ಅಲ್ಲಿ ಮಸೀದಿ ನಿರ್ಮಿಸಲಾಗಿದೆ. ಹೀಗಾಗಿ ದೇವಸ್ಥಾನದ ಬಳಿಯಿರುವ ಮಸೀದಿಯನ್ನು ಸ್ಥಳಾಂತರಿಸಬೇಕು’ ಎಂಬುದು ಹಿಂದು ಸಂಘಟನೆಗಳ ವಾದ.

click me!