ಸುಳ್ಳು ಕೇಸು ಹಾಕಿ ಜೈಲಿಗಟ್ಟಿದ ಪೊಲೀಸರು : 8 ತಿಂಗಳು ಜೈಲಲ್ಲಿ ಕಳೆದ ಯುವಕ

Published : Jun 11, 2023, 03:16 PM IST
ಸುಳ್ಳು ಕೇಸು ಹಾಕಿ ಜೈಲಿಗಟ್ಟಿದ ಪೊಲೀಸರು : 8 ತಿಂಗಳು ಜೈಲಲ್ಲಿ ಕಳೆದ ಯುವಕ

ಸಾರಾಂಶ

ಓರ್ವ ಅಪರಾಧಿಗೆ ಶಿಕ್ಷೆಯಾಗದೇ ಹೋದರೂ ಪರವಾಗಿಲ್ಲ, ಓರ್ವ ಅಮಾಯಕನಿಗೆ ಶಿಕ್ಷೆಯಾಗಬಾರದು ಎಂದು ಹೇಳುತ್ತದೆ ನಮ್ಮ ಕಾನೂನು ಆದರೆ 37 ವರ್ಷದ ವ್ಯಕ್ತಿಯೋರ್ವನಿಗೆ ಏನೂ ಮಾಡದಿದ್ದರೂ ಸುಳ್ಳಿ ಅಪರಾಧ ಪ್ರಕಣವೊಂದರಲ್ಲಿ ಶಿಕ್ಷೆಯಾಗಿದ್ದು, ಈಗ ನಿರಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ನವದೆಹಲಿ: ಓರ್ವ ಅಪರಾಧಿಗೆ ಶಿಕ್ಷೆಯಾಗದೇ ಹೋದರೂ ಪರವಾಗಿಲ್ಲ, ಓರ್ವ ಅಮಾಯಕನಿಗೆ ಶಿಕ್ಷೆಯಾಗಬಾರದು ಎಂದು ಹೇಳುತ್ತದೆ ನಮ್ಮ ಕಾನೂನು ಆದರೆ 37 ವರ್ಷದ ವ್ಯಕ್ತಿಯೋರ್ವನಿಗೆ ಏನೂ ಮಾಡದಿದ್ದರೂ ಸುಳ್ಳಿ ಅಪರಾಧ ಪ್ರಕಣವೊಂದರಲ್ಲಿ ಶಿಕ್ಷೆಯಾಗಿದ್ದು, ಈಗ ನಿರಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ನಾರ್ಕೋಟಿಕ್ ಡ್ರಗ್ & ಸೈಕೋಟ್ರೋಪಿಕ್ ಸಬ್ಸ್‌ಸ್ಟೆನ್ಸ್‌ ಕಾಯಿದೆಯಡಿ (NDPS) ನಕಲಿ ಕೇಸಿನಿಂದಾಗಿ ಬಂಧಿತನಾಗಿದ್ದ ಅಂಕಿತ್ ಗುಪ್ತಾ ಎಂಬಾತನನ್ನು ಕೋರ್ಟ್ ಖುಲಾಸೆಗೊಳಿಸಿದೆ. 

ನಡೆದಿದ್ದೇನು?
ಮಾರ್ಚ್‌ 12, 2021ರ ರಾತ್ರಿ ಅವರ ಮದುವೆಯ ವಾರ್ಷಿಕೋತ್ಸವ ಇದ್ದ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಸಣ್ಣದಾದ ಪಾರ್ಟಿಯೊಂದನ್ನು ಆಯೋಜಿಸಲಾಗಿತ್ತು.  ಅವರ ಕಾರನ್ನು ಮನೆಯ ಹೊರಗೆ ನಿಲ್ಲಿಸಲಾಗಿತ್ತು. ಈ ವೇಳೆ ಬಂದ ಇಬ್ಬರು ಪೊಲೀಸರು ಕೆಟ್ಟ ಪದಗಳಿಂದ ಅಂಕಿತ್‌ನನ್ನು ನಿಂದಿಸುತ್ತಾ, ಕಾರನ್ನು ಆ ಸ್ಥಳದಿಂದ ತೆಗೆಯುವಂತೆ ಹೇಳಿದರು. ಸಿವಿಲ್ ಡ್ರೆಸ್‌ನಲ್ಲಿದ್ದ ಪೊಲೀಸರು ಹಾಗೂ ಅಂಕಿತ್ ಮಧ್ಯೆ ಈ ವೇಳೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಇದಾದ ಸ್ವಲ್ಪ ಹೊತ್ತನಲ್ಲೇ ಮೂವರು ಸಮವಸ್ತ್ರದಲ್ಲಿದ್ದ ಪೊಲೀಸರು ಆಗಮಿಸಿ ಅಂಕಿತ್‌ನ್ನು ಎಳೆದುಕೊಂಡು ಹೋಗಿದ್ದರು. ಮಾರನೇ ದಿನವೇ ಆತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಕೇಸು ದಾಖಲಿಸಿ ಕೂಡಲೇ ಆತನನ್ನು ಜೈಲಿಗಟ್ಟಿದ್ದರು. ಸಬ್ ಇನ್ಸ್‌ಪೆಕ್ಟರ್ ವಿಪಿನ್ ಕುಮಾರ್ ನೀಡಿದ ದೂರನ್ನು ಆಧರಿಸಿ ಎಫ್‌ಐಆರ್ ಕೂಡ ದಾಖಲಿಸಿದ್ದರು.

ಬೆಸ್ಕಾಂನಲ್ಲಿ ಅಧಿಕಾರಿ ಹುದ್ದೆ ತೋರಿಸಿ 20 ಲಕ್ಷ ಟೋಪಿ ಹಾಕಿದ ಖದೀಮರು!

ನಾರ್ಕೋಟಿಕ್ ಡ್ರಗ್ & ಸೈಕೋಟ್ರೋಪಿಕ್ ಸಬ್ಸ್‌ಸ್ಟೆನ್ಸ್‌ ಕಾಯಿದೆಯಡಿ (NDPS) ನಕಲಿ ಕೇಸು ಜಡಿದು ಯುವಕ ಅಂಕಿತ್ ಗುಪ್ತಾನನ್ನು ಬಂಧಿಸಿದ್ದರು. ಗುಪ್ತಾ ಆಹಾರ ಉತ್ಪನ್ನ ಸಂಸ್ಥೆಯೊಂದರಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಜಾಮೀನು ಸಿಗುವುದಕ್ಕೂ ಮೊದಲು ಅವರು 8  ತಿಂಗಳು ಜೈಲಿನಲ್ಲಿ ಕಳೆದಿದ್ದರು., ಅವರಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ. ಎರಡು ವರ್ಷಗಳ ಕಾಲ ನಡೆದ ವಿಚಾರಣೆ ವೇಳೆ ಅವರ ವಿರುದ್ಧ ಸೂಕ್ತ ಸಾಕ್ಷ್ಯ ನೀಡುವಲ್ಲಿಯೂ ಪೊಲೀಸರು ವಿಫಲವಾಗಿದ್ದರು.  ಆದರೆ ಪೊಲೀಸರು ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ 74.9 ಕೇಜಿ ತೂಗುವ 35 ಪ್ಯಾಕೇಟ್ ಮರಿಜುವಾನಾ ವನ್ನು ಅಂಕಿತ್ ಗುಪ್ತಾ ಕಾರಿನಿಂದ ಜಪ್ತಿ ಮಾಡಲಾಗಿತ್ತು ಎಂದು ಉಲ್ಲೇಖಿಸಿದ್ದರು. 

ಅಲ್ಲದೇ ಪೊಲೀಸರು ನನ್ನನ್ನು ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ದು ಹಲ್ಲೆ ನಡೆಸಿದ್ದಲ್ಲದೇ, ಮೂರು ಲಕ್ಷ ನೀಡದೇ ಹೋದರೆ ಜೈಲಿಗಟ್ಟುವುದಾಗಿ  ಬೆದರಿಕೆಯೊಡ್ಡಿದರು.  ಹಣ ನೀಡಲು ಸಾಧ್ಯವಾಗದ ಕಾರಣಕ್ಕೆ ನಕಲಿ ಕೇಸೊಂದರಲ್ಲಿ ನನ್ನನ್ನು ಬುಕ್ ಮಾಡಿದರು. ಇದರಿಂದ ನಾನು 8 ತಿಂಗಳು ಜೈಲಿನಲ್ಲಿ ಕಳೆಯುವಂತಾಯ್ತು, ಜೊತೆಗೆ 2 ವರ್ಷಗಳ ಕಾಲ ನಿರಂತರ ಕಾನೂನು ಹೋರಾಟದ ಜೊತೆ ನಾನು ನನ್ನ ಘನತೆ ಹಾಗೂ ಕೆಲಸವನ್ನು ಕಳೆದುಕೊಳ್ಳಬೇಕಾಯ್ತು ಎಂದು ಅವರು ಅಳಲು ತೋಡಿಕೊಂಡರು. ಆದರೆ ಈಗ ಆರೋಪಗಳೆಲ್ಲವೂ ಸುಳ್ಳೆಂದು ಸಾಬೀತಾಗಿದ್ದು ನೆಮ್ಮದಿಯಾಗಿದೆ ಎಂದು ಅಂಕಿತ್ ಹೇಳಿದ್ದಾರೆ.

ಮೋಸ ಹೋಗಬೇಡಿ, ಹಣ ಕೇಳಿ ನಿಮಗೂ ಬರಬಹುದು ಅವಧೂತ ವಿನಯ್ ಗುರೂಜಿ ಮೆಸೇಜ್!

ಪೊಲೀಸರು ಅಮಾಯಕನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗಟ್ಟಿದರು. ಅಂಕಿತ್ ಕಾರಿನಲ್ಲಿ ಮರಿಜುವನಾ ಇದ್ದ ಕಾರಣಕ್ಕೆ ಅಂಕಿತ್‌ನನ್ನು ಬಂಧಿಸಲಾಯ್ತು ಎಂದು ಪೊಲೀಸರು ಹೇಳಿದ್ದಾರೆ. ಆದರೆ ಸಮೀಪದಲ್ಲಿ ಇದ್ದ ಸಿಸಿಟಿವಿಯಲ್ಲಿ ಎಲ್ಲೂ ಪೊಲೀಸರ ಆರೋಪಕ್ಕೆ ಪುರಾವೆ ಇರಲಿಲ್ಲ,  ನ್ಯಾಯಾಲಯದಲ್ಲೂ ಪೊಲೀಸರಿಗೆ ಪ್ರಕರಣವನ್ನು ಸಾಬೀತುಪಡಿಸಲಾಗಿಲ್ಲ ಎಂದು ಕಾನೂನು ಸಲಹೆಗಾರ ವಿನಯ್ ಗೌರ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!