ದೇಗುಲದಲ್ಲಿ ಹಿಂದೂ ಯುವಕರ ವರಿಸಿದ ಮುಸ್ಲಿಂ ಯುವತಿಯರು

By Anusha KbFirst Published Jun 11, 2023, 11:00 AM IST
Highlights

ಇಬ್ಬರು ಮುಸ್ಲಿಂ ಹುಡುಗಿಯರು ಹಿಂದೂ ಧರ್ಮವನ್ನು ಸ್ವೀಕರಿಸಿ ದೇಗುಲದಲ್ಲಿ ತಮ್ಮ  ಹಿಂದೂ ಸಂಗಾತಿಗಳನ್ನು ಮದುವೆಯಾದ ಘಟನೆ ಉತ್ತರಪ್ರದೇಶದಿಂದ ವರದಿಯಾಗಿದೆ.

ಉತ್ತರಪ್ರದೇಶ: ಲವ್ ಜಿಹಾದ್, ಹಿಂದೂ ಹುಡುಗಿಯರನ್ನು ಮುಸ್ಲಿಂ ಯುವಕರು ವಿವಾಹವಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಆರೋಪಗಳ ಬೆನ್ನಲ್ಲೇ ಇಬ್ಬರು ಮುಸ್ಲಿಂ ಹುಡುಗಿಯರು ಹಿಂದೂ ಧರ್ಮವನ್ನು ಸ್ವೀಕರಿಸಿ ದೇಗುಲದಲ್ಲಿ ತಮ್ಮ  ಹಿಂದೂ ಸಂಗಾತಿಗಳನ್ನು ಮದುವೆಯಾದ ಘಟನೆ ಉತ್ತರಪ್ರದೇಶದಿಂದ ವರದಿಯಾಗಿದೆ. ಈ ಎರಡು ವಿವಾಹಕ್ಕೂ ಯುವತಿಯರ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಮ್ಮ ಪುತ್ರಿಯರು ಮುಸ್ಲಿಂ ಸಮುದಾಯದವರನ್ನೇ ವಿವಾಹವಾಗಬೇಕು ಎಂದು ಯುವತಿಯರ ಕುಟುಂಬ ತೀವ್ರವಾಗಿ  ಆಗ್ರಹಿಸಿತ್ತು. ಆದಾಗ್ಯೂ, ಯುವತಿಯರ ಸಮ್ಮತಿಯಂತೆ ಅವರ ಹಿಂದೂ ಗೆಳೆಯನೊಂದಿಗೆ ಈ ವಿವಾಹ ನಡೆದಿದೆ. 

ರಜನಿ ಆದ ರುಬಿಯಾ

Latest Videos

ವರದಿಯ ಪ್ರಕಾರ, ಸೀತಾಪುರದ ರಾಂಪುರ ಮಥುರಾ ಪೊಲೀಸ್ ಠಾಣೆ ವ್ಯಾಪ್ತಿಯ ಬಿಸೆಸರ್ ನಿವಾಸಿ ರುಬಿಯಾ ಅವರು ಠಾಣಾ ಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಮೇಯುಡಿ ಸೇವಾಲಿಯ ನಿವಾಸಿ  ಪ್ರದೀಪ್ ಯಾದವ್ ಎಂಬ ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದರು.  ಆದರೆ ಈ ಪ್ರೇಮ ಸಂಬಂಧಕ್ಕೆ ರುಬಿಯಾಳ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇದಾದ ನಂತರ  ವಿಶ್ವ ಹಿಂದೂ ಪರಿಷತ್ (Vishwa Hindu Parishad)ಸದಸ್ಯರು ಪೊಲೀಸರೊಂದಿಗೆ ಅವರ ಗ್ರಾಮಕ್ಕೆ ಆಗಮಿಸಿ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯಗಳ ಪ್ರಕಾರ ಈ ಜೋಡಿಯ ವಿವಾಹ ಮಾಡಿದ್ದಾರೆ. ನಂತರ ರುಬಿಯಾ ರಜನಿ ಎಂದು ತನ್ನ ಹೆಸರು ಬದಲಿಸಿಕೊಂಡಿದ್ದಾಳೆ.  ವಿಎಚ್‌ಪಿಯ  ನಾಯಕ ಆಚಾರ್ಯ ದೀಪಕ್ ಮಿಶ್ರಾ ಅವರು ಈ ನವ ದಂಪತಿಗಳ ವಿವಾಹದ ನೇತೃತ್ವ ವಹಿಸಿ ನವದಂಪತಿಗೆ ಶುಭ ಹಾರೈಸಿದರು. ಆದರೆ ಇತ್ತ ರುಬಿಯಾ ಮನೆಯವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತಮ್ಮ ಇಚ್ಛೆಗೆ ವಿರುದ್ಧವಾಗಿ ಅಂತರ್‌ಧರ್ಮೀಯ ವಿವಾಹವಾದ ಮಗಳೊಂದಿಗೆ ಸಂಬಂಧಗಳನ್ನು ಕಡಿದುಕೊಂಡಿದ್ದಾರೆ. 

ಧಾರವಾಡದಲ್ಲಿ ಮತ್ತೆ ಆರಂಭವಾಯ್ತಾ ಲವ್ ಜಿಹಾದ್: ಮದುವೆ ತಡೆ ಹಿಡಿದ ಬಜರಂಗದಳ ಕಾರ್ಯಕರ್ತರು

ವಿಶ್ವ ಹಿಂದೂ ಪರಿಷತ್‌ನ ಪ್ರತಾಪ್ ಸಿಂಗ್ ಮಾತನಾಡಿ, ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದು ವಿವಾಹವಾಗಲು ನಿರ್ಧರಿಸಿದ್ದರು.  ಆದರೆ ಹುಡುಗಿ ಕುಟುಂಬದವರು ಆಕೆಗೆ ಬೇರೊಬ್ಬನೊಂದಿಗೆ ಮದ್ವೆ ಮಾಡಲು ನಿರ್ಧರಿಸಿದ್ದರು.  ಆದರೆ ಈಗ ಹಿಂದೂ ಸಂಪ್ರದಾಯದಂತೆ ಇಬ್ಬರ ವಿವಾಹವಾಗಿದೆ ಎಂದು ಹೇಳಿದ್ದಾರೆ.

ರೂಬಿ ಅವಸ್ಥಿ ಆಗಿ ಬದಲಾದ ರುಬೀನಾ ಖಾನ್ 

ಇನ್ನೊಂದೆಡೆ ಉತ್ತರಪ್ರದೇಶದ ಬಹ್ರಿಚ್‌ನಲ್ಲಿ ನಡೆದ ಇಂತಹದ್ದೇ ಮತ್ತೊಂದು ಪ್ರಕರಣದಲ್ಲಿ ರುಬಿಯ ಖಾನ್‌ ಎಂಬ ಮುಸ್ಲಿಂ ಹುಡುಗಿ ತನ್ನ ಹಿಂದೂ ಗೆಳೆಯ ಶೇಷ್ ಕುಮಾರ್ ಎಂಬಾತನನ್ನು ವಿವಾಹವಾಗಿದ್ದಾರೆ. ಕೊತ್ವಾಲಿ ದೇಹತ್ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಪುರ ನಿವಾಸಿಯಾದ ರುಬಿನಾ ಖಾನ್ ಅವರು ಶೇಶ್ ಕುಮಾರ್ ಅವಸ್ತಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದರು. ಇವರ ಪ್ರೀತಿಗೂ ಯುವತಿ ಕುಟುಂಬದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರ ಇಬ್ಬರೂ ದೇಗುಲದಲ್ಲಿ ವಿವಾಹವಾಗಿದ್ದಾರೆ. ಇದಾದ ನಂತರ ಯುವತಿ ಮನೆಯವರು ತಮ್ಮ ಹುಡುಗಿ ಹಿಂದೂ ಯುವಕನನ್ನು ಮದುವೆಯಾಗಿದ್ದಾಳೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಆತನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ ಈ ದಂಪತಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು.

ಸಂಸದೆಯೇ ದಿ ಕೇರಳ ಸ್ಟೋರಿ ತೋರಿಸಿದ್ರೂ ಬಾರದ ಬುದ್ಧಿ! ಮುಸ್ಲಿಂ ಜೊತೆ ಪರಾರಿಯಾದವಳ ಪಾಡಿದು

ಕೋರ್ಟ್ ವಿಚಾರಣೆ ವೇಳೆ ರುಬಿನಾ (Rubina) ತಾನು ವಯಸ್ಕಳಾಗಿದ್ದೇನೆ ಹಾಗೂ ತನ್ನ ಸ್ವಂತ ಇಚ್ಛೆಯಿಂದ ಹಿಂದೂ ಧರ್ಮವನ್ನು ಸ್ವೀಕರಿಸಿ ಹಿಂದೂ ಸಂಪ್ರದಾಯಗಳ ಪ್ರಕಾರ ವಿವಾಹವಾಗಿದ್ದೇನೆ ಎಂದು ತಿಳಿಸಿದಳು. ಇದಕ್ಕೆ ಸಾಕ್ಷ್ಯವಾಗಿ ರುಬೀನಾ ತನ್ನ ಪ್ರೌಢಶಾಲಾ ಅಂಕಪಟ್ಟಿಯನ್ನು ಸಹ ಒದಗಿಸಿದಳು, ಅದರ ನಂತರ ನ್ಯಾಯಾಲಯವು ಆಕೆ 18 ವರ್ಷಕ್ಕಿಂತ ಮೇಲ್ಪಟ್ಟವಳು ಎಂದು ತೀರ್ಮಾನಿಸಿತು. ಇದರ ಬೆನ್ನಲ್ಲೇ, ರುಬೀನಾ ತನ್ನ ಹೆಸರನ್ನು ರೂಬಿ ಅವಸ್ಥಿ ಎಂದು ಬದಲಾಯಿಸಿಕೊಂಡಿದ್ದು, ರುಬಿನಾ ಖಾನ್ ಅವರನ್ನು ಆಕೆಯ ಪತಿಯ ಕುಟುಂಬಕ್ಕೆ ಹಸ್ತಾಂತರಿಸುವಂತೆ ನ್ಯಾಯಾಲಯ ತೀರ್ಪು ನೀಡಿ ಪೊಲೀಸ್ ರಕ್ಷಣೆ ಒದಗಿಸಲು ಸೂಚಿಸಿದೆ. ಇದಕ್ಕೂ ಮುನ್ನ ವಿವಾಹವಾಗುವ ಎರಡು ವಾರಕ್ಕೂ ಮೊದಲೇ ರುಬಿನಾ ತನ್ನ ಮನೆಯಿಂದ ಓಡಿ ಹೋಗಿದ್ದಳು. ಮುಂಬೈನಲ್ಲಿ ಪೊಲೀಸರು ರುಬಿನಾ ಮತ್ತು ಶೇಶ್‌ರನ್ನು ಪತ್ತೆ ಮಾಡಿ ಕರೆತಂದಿದ್ದರು. 

click me!