ಅಫ್ಘಾನಿಸ್ತಾನದ ಕೊನೆಯ ಹಣಕಾಸು ಸಚಿವ ಈಗ ಅಮೆರಿಕಾದಲ್ಲಿ ಉಬರ್ ಚಾಲಕ

Suvarna News   | Asianet News
Published : Mar 21, 2022, 10:45 AM IST
ಅಫ್ಘಾನಿಸ್ತಾನದ ಕೊನೆಯ ಹಣಕಾಸು ಸಚಿವ ಈಗ ಅಮೆರಿಕಾದಲ್ಲಿ ಉಬರ್ ಚಾಲಕ

ಸಾರಾಂಶ

ಅಫ್ಘಾನಿಸ್ತಾನದ ಕೊನೆಯ ಹಣಕಾಸು ಸಚಿವರಿಗೆಂಥಾ ದುಸ್ಥಿತಿ ಅಮೆರಿಕಾದಲ್ಲಿ ಕ್ಯಾಬ್‌ ಓಡಿಸುತ್ತಿರುವ ಖಾಲಿದ್ ಪಯೆಂಡಾ ಅಶ್ರಫ್ ಘನಿ ಸರ್ಕಾರದ ಕೊನೆಯ ಹಣಕಾಸು ಮಂತ್ರಿಯಾಗಿದ್ದ  ಖಾಲಿದ್

ಕಾಬೂಲ್‌(ಮಾ.21): ಅಪ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕಿ ತಾಲಿಬಾನಿಗಳು ಅಧಿಕಾರ ವಹಿಸಿಕೊಂಡ ನಂತರ ನೂರಾರು ಮಂದಿ ಪ್ರಾಣ ಉಳಿಸಿಕೊಳ್ಳವುದಕ್ಕಾಗಿ ದೇಶ ತೊರೆದಿದ್ದರು. ಈಗ ಸಂಪೂರ್ಣ ಅರಾಜಕತೆ ದೇಶವನ್ನಾಳುತ್ತಿದ್ದು, ಅಫ್ಘಾನಿಸ್ತಾನದ ಕೊನೆಯ ಹಣಕಾಸು ಸಚಿವ ಖಾಲಿದ್ ಪಯೆಂಡಾ (Khalid Payenda)ಈಗ ಜೀವನೋಪಾಯಕ್ಕಾಗಿ ವಾಷಿಂಗ್ಟನ್ ಡಿಸಿಯಲ್ಲಿ (Washington DC) ಉಬರ್ ಕ್ಯಾಬ್‌ ಓಡಿಸುತ್ತಿದ್ದಾರೆ. 

ಅಶ್ರಫ್ ಘನಿ ಸರ್ಕಾರದ ಕೊನೆಯ ಹಣಕಾಸು ಮಂತ್ರಿಯಾಗಿದ್ದ  ಖಾಲಿದ್ ಪಯೆಂಡಾ ಅವರು, ವಾಷಿಂಗ್ಟನ್ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಹೆಂಡತಿ ಮತ್ತು ನಾಲ್ಕು ಮಕ್ಕಳ ಕುಟುಂಬವನ್ನು ಸಲಹಲು ಸಿಕ್ಕಿದ ಈ ಕೆಲಸಕ್ಕಾಗಿ ಕೃತಜ್ಞಳಾಗಿರುತ್ತೇನೆ  ಎಂದು ಹೇಳಿದರು.

ಅಫ್ಘಾನಿಸ್ತಾನದಲ್ಲಿ ಏರ್‌ಲಿಫ್ಟ್‌ ವೇಳೆ ಬೇರ್ಪಟ್ಟ ಹಾಲುಗಲ್ಲದ ಕಂದ ಮತ್ತೆ ಪೋಷಕರ ಮಡಿಲಿಗೆ

ಅಫ್ಘಾನಿಸ್ತಾನದ ಮಾಜಿ ಹಣಕಾಸು ಸಚಿವ(finance minister) ಖಾಲಿದ್ ಪಯೆಂಡಾ ಅವರು ಕಾಬೂಲ್‌ನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಳ್ಳುವ ಕೆಲವು ದಿನಗಳ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈಗ ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ ಖಾಲಿದ್ ವಾಷಿಂಗ್ಟನ್ ಡಿಸಿಯಲ್ಲಿ ಉಬರ್ (Uber) ಕ್ಯಾಬ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಪಯೆಂಡಾ ಜಾರ್ಜ್‌ಟೌನ್ ವಿಶ್ವವಿದ್ಯಾನಿಲಯದಲ್ಲಿ (Georgetown University)ಸಹಾಯಕ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡುತ್ತಾರೆ. ಸದ್ಯ, ನನಗೆ ಯಾವುದೇ ಸ್ಥಳವಿಲ್ಲ. ನಾನು ಇಲ್ಲಿಗೆ ಸೇರಿದವನಲ್ಲ, ಮತ್ತು ನಾನು ಅಲ್ಲಿಗೂ ಸೇರಿದವನಲ್ಲ ಇದು ತುಂಬಾ ಖಾಲಿ ಭಾವನೆ ಎಂದು ಖಾಲಿದ್ ಹೇಳಿದರು.

Taliban Commitment: ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ತಾಲಿಬಾನ್‌ ಬದ್ಧ
ಗಿಗ್ ಎಕಾನಮಿ (gig economy) ಎಂಬ ಸಂಸ್ಥೆಗೆ ಸೇರಿದ ಖಾಲಿದ್ ಪಯೆಂಡಾ, ಈ ಕೆಲಸವು ತನ್ನ ಜೀವನದಲ್ಲಿ ಒಂದು ದೊಡ್ಡ ಬದಲಾವಣೆಯನ್ನು ಮಾಡಿದೆ . ನಾನು ಅದಕ್ಕಾಗಿ ನಂಬಲಾಗದಷ್ಟು ಕೃತಜ್ಞನಾಗಿದ್ದೇನೆ. ಇದರರ್ಥ ನಾನು ಹತಾಶನಾಗಬೇಕಾಗಿಲ್ಲ ಎಂದರು. ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಳ್ಳಲು ಅಮೆರಿಕನ್ನರೇ ನೇರ  ಹೊಣೆ ಎಂದು ಪಯೆಂಡಾ ವಾಷಿಂಗ್ಟನ್ ಪೋಸ್ಟ್‌ಗೆ ತಿಳಿಸಿದರು. ಎರಡು ದಶಕಗಳ ಸಂಘರ್ಷದ ನಂತರ, ಅಮೆರಿಕಾ ಆಗಸ್ಟ್ 2021 ರಲ್ಲಿ ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂತೆಗೆದುಕೊಂಡಿತು.

ಆಫ್ಘನ್ನರು ಸುಧಾರಣೆ ಮಾಡಲು ಗಂಭೀರವಾದ ಸಾಮೂಹಿಕ ಇಚ್ಛಾಶಕ್ತಿಯನ್ನು ಹೊಂದಿಲ್ಲ ಎಂದು ಅವರು ನಂಬಿದ್ದರು. ಆದರೆ ಅಫ್ಘಾನಿಸ್ತಾನವನ್ನು 9/11 ರ ನಂತರದ ನೀತಿಯ ಕೇಂದ್ರಬಿಂದುವನ್ನಾಗಿ ಮಾಡಿದ ನಂತರ ಅಮೆರಿಕಾ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಬಗ್ಗೆ ತನ್ನ ಬದ್ಧತೆಗೆ ಅದು ದ್ರೋಹ ಮಾಡಿದೆ ಎಂದು ಖಾಲಿದ್‌ ಹೇಳಿದರು. ಬಹುಶಃ ಆರಂಭದಲ್ಲಿ ಒಳ್ಳೆಯ ಉದ್ದೇಶಗಳು ಇದ್ದವು. ಆದರೆ ಅಮೆರಿಕಾ (United State) ಬಹುಶಃ ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ ಎಂದು ಪಯೆಂಡಾ ಹೇಳಿದರು.

ಅಫ್ಘಾನಿಸ್ತಾನದಲ್ಲಿ (Afghanistan) ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡು ತಾಲಿಬಾನ್ (Taliban) ಆಡಳಿತ ಮತ್ತೆ ಸ್ಥಾಪಿತವಾದ ಬಳಿಕ, ಅಲ್ಲಿನ ಜನರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ.  ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಬದುಕು ಸಾಗಿಸಲು ಜನರು ತಮ್ಮ ದೇಹಗಳ ಅಂಗಾಂಗಗಳನ್ನೇ (Body Organs) ಮಾರಾಟ ಮಾಡಿಕೊಂಡು ಜೀವನ ನಡೆಸುವಂತಹ ಪರಿಸ್ಥಿತಿಗೆ ಬಂದು ತಲುಪಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಾಬೂಲ್‌ನ (Kabul) ಬೀದಿಯೊಂದರ ಮರವೊಂದಕ್ಕೆ ಅಂಟಿಸಿದ್ದ ಭಿತ್ತಿಪತ್ರದಲ್ಲಿ  "ಕಿಡ್ನಿ ಮಾರಾಟಕ್ಕಿದೆ" ಎಂದು ಬರೆಯಲಾಗಿದ್ದು, ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗಿದೆ. ತಾಲಿಬಾನಿಗಳ ಕ್ರೂರ ಆಡಳಿತದ ಬಳಿಕ ಅಫ್ಘಾನಿಸ್ತಾನದಲ್ಲಿ ನೂರಾರು ಮಂದಿ ಕೆಲಸ ಕಳೆದುಕೊಂಡಿದ್ದು, ಅತ್ಯಗತ್ಯ ವಸ್ತುಗಳಾದ ಆಹಾರ ಹಾಗೂ ಇಂಧನದ ಬೆಲೆ ಗಗನಕ್ಕೇರಿದೆ. ಚಳಿಗಾಲದ ಸಂಕಷ್ಟಗಳಿಂದ ಅಫ್ಘನ್ನರ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಹಸಿವು ನೀಗಿಸಿಕೊಳ್ಳಲು ಜನರು ತಮ್ಮ  ಹೆಣ್ಣು ಮಕ್ಕಳನ್ನು ಮತ್ತು ಆಸ್ತಿಗಳನ್ನೆಲ್ಲ ಮಾರಿಕೊಳ್ಳುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ
Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್